Selection of Officers for Right to Information Forum”
ಭ್ರಷ್ಠಾಚಾರ ನಿರ್ಮೂಲನೆ, ಸ್ವಚ್ಛ ಸಮಾಜ ನಿರ್ಮಾಣಕ್ಕಾಗಿ ಮಾಹಿತಿ ಹಕ್ಕು ವೇದಿಕೆ : ಎಂ.ಮಲ್ಲಿಕಾರ್ಜುನಯ್ಯ
ಕೊಟ್ಟೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನಂತರ ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಬೇಕೆಂಬುದು ವೇದಿಕೆಯ ಉದ್ದೇಶವಾಗಿದೆ ಎಂದು ಮಾಹಿತಿ ಹಕ್ಕು ವೇದಿಕೆಯ ವಿಜಯನಗರ ಜಿಲ್ಲಾಧ್ಯಕ್ಷ ರಾಜನಗೌಡ ವೇದಿಕೆಯಲ್ಲಿ
ತಿಳಿಸಿದರು.
ನಂತರ ವಿಜಯನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಮಲ್ಲಿಕಾರ್ಜುನಯ್ಯ ಅವರು ಮಾತನಾಡಿ ಸ್ವಚ್ಛ ಸಮಾಜ ನಿರ್ಮಾಣಕ್ಕಾಗಿ ಭ್ರಷ್ಠಾಚಾರವನ್ನು ನಿರ್ಮೂಲನೆಗೊಳಿಸಲು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ಕಾರ್ಯೋನ್ಮುಖವಾಗಿದೆ
ರಾಜ್ಯದ ಪ್ರತಿಯೊಬ್ಬ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಸಮಸ್ಯೆಗಳು ಬಂದಲ್ಲಿ ರಾಜ್ಯ ಕಾರ್ಯಕರ್ತರು ಬೆನ್ನೆಲುಬಾಗಿ ನಿಲ್ಲುತ್ತಾರೆ.ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ .ಮತ್ತು ಆರಂಭವಾಗಿ ಒಂದು ವರ್ಷ ಪೂರ್ಣಗೊಳುತ್ತಿರುವುದರಿಂದ ಬೆಂಗಳೂರಿನ ಶೇಷಾದ್ರಿಪುರಂ ಗಾಂಧಿಭವನದಲ್ಲಿ ವಾರ್ಷಿಕೋತ್ಸವ, ಕಾರ್ಯಾಗಾರವನ್ನು ಆಚರಿಸುತ್ತಿದ್ದು ಗಣ್ಯಮಾನ್ಯರು ಮಾಹಿತಿ ಹಕ್ಕು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾಧ್ಯಕ್ಷ ರಾಜನಗೌಡ, ಕಾರ್ಯದರ್ಶಿ ಎಂ.ಮಲ್ಲಿಕಾರ್ಜುನಯ್ಯ, ಉಪಾಧ್ಯಕ್ಷ ಸುದರ್ಶನ್, ನೇತೃತ್ವದಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೆ.ಮೇಘರಾಜ್ (ಅಧ್ಯಕ್ಷ), ಬಿ.ಪ್ರಭು (ಉಪಾಧ್ಯಕ್ಷ), ಕೆಂಚಪ್ಪ (ಪ್ರಧಾನ ಕಾರ್ಯದರ್ಶಿ), ಕೆ.ರಾಮಪ್ಪ (ಖಜಾಂಚಿ ), ಎಚ್.ಬಸವರಾಜ್,( ಸಹಕಾರ್ಯದರ್ಶಿ), ಬಸವರಾಜ್ ನಾಗಶೆಟ್ಟಿ (ಕಾರ್ಯದರ್ಶಿ), ಜಿ.ಕರಿಬಸಪ್ಪ ( ಕಾನೂನು ಸಲಹೆಗಾರರು), ಕಾಡಪ್ಪನವರ ಅಶೋಕ,ಎಚ್.ಬಸವರಾಜ್, ನಿಲುವಂಜಿ ಸಿದ್ಧೇಶ್, ಟಿ.ಯಮುನಪ್ಪ, ಶ್ಯಾನುಭೋಗರ ಸಿದ್ಧೇಶ್, ಪೂಜಾರಿ ಕರಿಬಸಪ್ಪ, ಎಂ.ಬಸವರಾಜಯ್ಯ, ಎಚ್.ಕುಮಾರ್,ಕೆ.ಮಂಜುನಾಥ್, ಎಂ.ಬಸವರಾಜ್, ಟಿ.ಮೂಗಪ್ಪ, ಜಿ.ಹನುಮಂತಪ್ಪ ಇವರುಗಳು ಸದಸ್ಯರಾಗಿ ಆಯ್ಕೆಯಾಗಿದ್ದಾರೆ .