Pride and Hiccup
ತೂರಿ ಬರುತ್ತವೆ
ಹಾರಿ ಬರುತ್ತವೆ
ಪ್ರಶಸ್ತಿ ಪುರಸ್ಕಾರಗಳು .
ಕಳ್ಳರಿಗೆ ಕಾಕರಿಗೆ
ಸುಳ್ಳರಿಗೆ ಮಳ್ಳರಿಗೆ
ಪ್ರವಚನದಲ್ಲಿ ಕಿರುಚುವವರಿಗೆ
ವಚನ ತಿದ್ದುವವರಿಗೆ ಕದಿಯುವವರಿಗೆ
ಬಸವನ ಹೆಸರಲಿ ಕೊಳ್ಳೆ ಹೊಡೆವವರಿಗೆ
ಧರ್ಮದ ಗುಂಗು ಹಚ್ಚುವವರಿಗೆ
ತಲೆಯ ಮೇಲೆ ಗ್ರಂಥವಿಟ್ಟು
ಹೆಜ್ಜೆ ಹಾಕಿ ಕುಣಿಯುವವರಿಗೆ .
ಮುಖವಾಡ ಸೋಗು ಹಾಕುವವರಿಗೆ
ಬಣ್ಣ ಬಳಿದು ನಟಿಸುವವರಿಗೆ
ಸುಲಿಗೆ ಮಾಡುವವರಿಗೆ
ಅಕ್ಕ ಅಣ್ಣ ಶರಣರೆಂಬ ಡಂಬಕರಿಗೆ
ಲಿಂಗ ತತ್ವ ಮಾರಿಕೊಂಡವರಿಗೆ
ಬಸವ ದ್ರೋಹ ಮಾಡುವವರಿಗೆ
ಜಂಗಮ ಕೊಂದು
ಸ್ಥಾವರ ಸಲುಹುವವರಿಗೆ
ಬರುತ್ತವೆ ಪ್ರಶಸ್ತಿ ಸನ್ಮಾನಗಳು
ಬಿಟ್ಟಿ ಶಾಲು ಕೊರಳಿಗೊಂದು ಹಾರ
ತಟ್ಟೆಯಲ್ಲಿ ಹಣ್ಣು ಕಾಯಿ
ನಾವೂ ಚಪ್ಪಾಳೆ ತಟ್ಟುತ್ತೇವೆ
ಹಲ್ಲು ಕಿಸಿಯುತ್ತೇವೆ
ಇವರನ್ನು ಮತ್ತೆ ಹೊತ್ತು ಮೆರೆಸುತ್ತೇವೆ.
ಪ್ರಶಸ್ತಿ ಬರುತ್ತವೆ ಸುಳ್ಳರಿಗೆ
ಭಂಡರಿಗೆ ಕಳ್ಳರಿಗೆ
ಪ್ರಶಸ್ತಿ ಸಮ್ಮಾನ ಇವರ ಹೆಗ್ಗಳಿಕೆ
ಬಳಲಿ ಬಾಗಿದ ಜಂಗಮದ ಬಿಕ್ಕಳಿಕೆ

ಡಾ.ಶಶಿಕಾಂತ.ಪಟ್ಟಣ ಪುಣೆ
Kalyanasiri Kannada News Live 24×7 | News Karnataka
