Hanuma Male: Jain Samaj youth unit has demanded not to sell meat.
ಗಂಗಾವತಿ,೦೫: ಹನುಮ ಮಾಲೆ ಅಭಿಯಾನದ ಅಂಗವಾಗಿ ತಾಲ್ಲೂಕಿನ ಪ್ರಮುಖ ಧಾರ್ಮಿಕ ತಾಣ ಚಿಕ್ಕರಾಂಪೂರದ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯದಿಂದ ಲಕ್ಷಾಂತರ ಭಕ್ತರು ಡಿ.೧೩ರಂದು ಬೆಟ್ಟಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸುತ್ತಲಿನ ಪ್ರದೇಶದಲ್ಲಿ ಮಾಂಸಾಹಾರ ಮಾರಾಟ ಮಾಡದಂತೆ ಜಿಲ್ಲಾಡಳಿತ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಮಹಾವೀರ ಜೈನ್ ಸಮಾಜದ ಯುವ ಘಟಕ ಒತ್ತಾಯಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಜೈನ್ ಸಮಾಜದ ಯುವ ಘಟಕದ ಮುಖಂಡ ದೀಪಕ್ ಬಾಂಠಿಯಾ, ಡಿ.೧೩ರಂದು ಹನುಮ ಮಾಲೆ ಅಭಿಯಾನ ನಡೆಯಲಿದೆ. ಈ ಸಂದರ್ಭದಲ್ಲಿ ಅಂಜನಾದ್ರಿ ಬೆಟ್ಟದ ಸುತ್ತಲಿನ ಪರಿಸರದಲ್ಲಿ ಒಟ್ಟು ಮೂರು ದಿನಗಳ ಕಾಲ ಯಾವುದೇ ಮಾಂಸಾಹಾರ ಮಾರಾಟ ಮಾಡದಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಮುಖ್ಯವಾಗಿ ಅಂಜನಾದ್ರಿ ಬೆಟ್ಟದ ಸಮೀಪ ಇರುವ ತಳ್ಳು’ ಬಂಡಿಗಳಲ್ಲಿ ಮೊಟ್ಟೆ, ಮಾಂಸಾಹಾರ, ಸುತ್ತಲಿನ ರೆಸಾರ್ಟ್‌ಗಳಲ್ಲಿ ಮದ್ಯ, ಮಾಂಸಾಹಾರ ಮಾರಾಟ ಮಾಡುವುದನ್ನು ತಡೆಯುವ ಮೂಲಕ ಧಾ ರ್ಮಿಕ ತಾಣದ ಪಾವಿತ್ರತೆ ಕಾಪಾಡಲು ಜಿಲ್ಲಾಧಿಕಾರಿಗಳು ಆದ್ಯತೆ ನೀಡಬೇಕು.
ಮುಖ್ಯವಾಗಿ ಡಿ.೧೩ರಂದು ಹನುಮ ಮಾಲೆ ಅಭಿಯಾನ ನಡೆಯಲಿದ್ದು, ಇದರ ಭಾಗವಾಗಿ ಮುಂಚಿತ ದಿನ ಅಂದರೆ ೧೨ ಮತ್ತು ಅಭಿಯಾನದ ಬಳಿಕದ ದಿನ ಅಂದರೆ ಡಿ.೨೪ರಂದು ಒಟ್ಟು ಮೂರು ದಿ’ ನಗಳ ಕಾಲ ಮಾಂಸಾಹಾರ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಬೇಕು.
ಈ ಮೂಲಕ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರ ಧಾರ್ಮಿಕ ನಂಬಿಕೆ. ಶ್ರದ್ಧಾ ಕಾರ್ಯಕ್ಕೆ ಭಂಗ ಉಂಟಾಗದಂತೆ ಕ್ರಮ ಕೈಗೊಳ್ಳಬೇಕಿದೆ. ಮದ್ಯ ಮಾರಾಟ ನಿಷೇಧ ಮಾಡಿದಂತೆ ಮಾಂಸ ಮಾರಾಟವನ್ನು ಪ್ರತಿವರ್ಷ ಜಿಲ್ಲಾಡಳಿತ ನಿಷೇಧಿಸಬೇಕು ಎಂದು ಜೈನ್ ಸಮಾಜದ ಯುವ ಘಟಕದ ಸಂಚಾಲಕ ದೀಪಕ್ ಬಾಂಠಿಯಾ ಒತ್ತಾಯಿಸಿದ್ದಾರೆ.