Breaking News

ಗ್ರಾಮೀಣಹಿನ್ನೆಲೆಯಿಂದ ಬಂದವರೇ ಉನ್ನತ ಹುದ್ದೆಗಳಲ್ಲಿದ್ದಾರೆ -ದಂಡಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ

People from rural background are in high positions – Police officer Captain Mahesh Malagitthi

ಜಾಹೀರಾತು

ಕೊಪ್ಪಳ: ಗ್ರಾಮೀಣ ಹಿನ್ನೆಲೆಯಿಂದ ಬಂದವರೇ ಉನ್ನತ ಹುದ್ದೆಗಳಲ್ಲಿದ್ದಾರೆ .
ಇಂದು ಸಮಾಜದ ಬಹುತೇಕ ಎಲ್ಲ ಉನ್ನತ ಹುದ್ದೆಗಳಲ್ಲಿ ಇರುವವರು ಗ್ರಾಮೀಣ ಹಿನ್ನೆಲೆಯಿಂದ ಬಂದವರೇ ಆಗಿದ್ದಾರೆ ಎಂದು ಕೊಪ್ಪಳ ಉಪ ವಿಭಾಗಾಧಿಕಾರಿಗಳು ಮತ್ತು ದಂಡಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಹೇಳಿದರು.

ದಿನಾಂಕ ೧-೧೨-೨೦೨೪ ರಂದು ಕೊಪ್ಪಳದ ಬಸವಶ್ರೀ ಪ್ಯಾರಾ ಮೆಡಿಕಲ್ ಹಾಗೂ ಬಸವಶ್ರೀ ನರ್ಸಿಂಗ್ ಕಾಲೇಜುಗಳ ವಾರ್ಷಿಕೋತ್ಸವದ ಉದ್ಘಾಟಕರಾಗಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದ ಅವರು ಹೇಳಿದರು. ಸಾಧಕನು ದೃಢ ನಿರ್ಧಾರವನ್ನು ತೆಗೆದುಕೊಂಡು ಗುರಿ ಮುಟ್ಟುವುದಕ್ಕೆ ಯತ್ನಿಸಬೇಕು. ಅದರಿಂದ ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಪ್ರತಿಯೊಂದು ಕಾರ್ಯಕ್ಕೆ ಘನತೆ ಹಾಗೂ ಗೌರವ ಇದ್ದೇ ಇರುತ್ತದೆ. ಕಾರಣ ಮನುಷ್ಯನಿಗೆ ಕೀಳರಿಮೆ ಇರಬಾರದು. ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಹೆಸರು ಬಂದೇ ಬರುತ್ತದೆ ಎನ್ನುವ ವಿಶ್ವಾಸವಿರಲಿ.

ದಾದಿಯರಾಗುವುದು ಒಂದು ಉದಾತ್ತ ವೃತ್ತಿ. ಇಂದು ಜಗತ್ತಿನಾದ್ಯಂತ ಮನೆಮಾತಾಗಿರುವ ದಾದಿ ಫ್ಲಾರೆನ್ಸ್ ನೈಟಿಂಗೇಲಳನ್ನು ನಾವೆಲ್ಲ ನೆನೆಯುತ್ತೇವೆ. ನರ್ಸಿಂಗ್ ತರಬೇತಿ ಪಡೆಯುತ್ತಿರುವವರಿಗೆ ಆಕೆಯೊಬ್ಬ ಅತ್ಯುತ್ತಮ ಮಾದರಿ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಶಿಕ್ಷಣಗಳೆರಡೂ ಇಂದು ಬಹು ಬೇಡಿಕೆಯಲ್ಲಿರುವ ತರಬೇತಿಗಳು, ವಿದ್ಯಾರ್ಥಿಗಳು ಸಮಯ ಪಾಲನೆ ಮತ್ತು ಶಿಸ್ತನ್ನು ಅಳವಡಿಸಿಕೊಂಡರೆ ಖಂಡಿತ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಗಳಾದ ಡಾ. ಶಿವಕುಮಾರ ಸಜ್ಜನ ಅವರು ವೈದ್ಯಕೀಯ ವೃತಿಯಲ್ಲಿರುವವರು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ರೋಗವನ್ನು ಕಂಡುಹಿಡಿಯಲು ಪರೀಕ್ಷೆ ಮಾಡಲೇಬೇಕು. ಆಗ ಸಹಾಯಕ್ಕೆ ಬರುವವರೇ ಪ್ಯಾರಾ ಮೆಡಿಕಲ್ ಸಿಬ್ಬಂದಿ ವರ್ಗದವರು. ಹಾಗೆಯೇ ರೋಗಿಗಳನ್ನು ಉಪಚರಿಸಲು, ಶಸ್ತ್ರ ಚಿಕಿತ್ಸೆಯ ನಂತರ ಗಾಯ ಮಾಯವಾಗುವಂತೆ ಕಾಲಕಾಲಕ್ಕೆ ಔಷಧಿ ಗುಳಿಗೆಗಳನ್ನು ಕೊಡುವುದು ಹಾಗೂ ಮುಲಾಮನ್ನು ಹಚ್ಚುವದು, ಬ್ಯಾಂಡೇಜುಗಳನ್ನು ಹಾಕುವುದು, ಬದಲಾಯಿಸುವುದು, ಇಂಜೆಕ್ಷನ್ ಕೊಡುವುದು ಇತ್ಯಾದಿಗಳನ್ನು ಮಾಡುವುದು ತರಬೇತಿ ಪಡೆದ ದಾದಿಯರೇ ಎಂದು ಹೇಳುತ್ತ, ಈ ಶಿಕ್ಷಣ ಸಂಸ್ಥೆ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯೋತ್ಸವ ಪುರಸ್ಕರುತರು ಮತ್ತು ಶಾಸನತಜ್ಞರು ಶ್ರೀಮತಿ ಹನುಮಾಕ್ಷಿ ಗೋಗಿ ಅವರು ಮತ್ತು ಚಂದಮ್ಮ ಚಂದಪ್ಪ ನೀರಾವರಿ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷರಾದ ಶಿವಪ್ಪ ನೀರಾವರಿಯವರು ಹಿತನುಡಿಗಳನ್ನು ಹೇಳಿದರು. ಬನ್ನಿಗಿಡ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕರು & ಅಧ್ಯಕ್ಷರು ಡಾ.ದೊಡ್ಡಬಸವ ಬನ್ನಿಗಿಡ ಅವರು ಪ್ರಾಸ್ತಾವಿಕವಾಗಿ ಮಾತಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಸವರಾಜ ಬಂಡಿ ಮತ್ತು ಬಸವರಾಜ ಬನ್ನಿಗಿಡ ಅವರು ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರಾದ ಗಿರೀಶ ಎಚ್.ಬಿ. ದೀಪಾ, ಶಶಿಕಾಂತ, ಶೇರ್ ಬಾನು, ಸದ್ದಾಂ ಹುಸೇನ್, ಐಶ್ವರ್ಯ, ಅನನ್ಯ, ವಿಜಯಲಕ್ಷ್ಮಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಪ್ರಾಂಶುಪಾಲರಾದ ಕಿರಣ ಅವರು ನಿರೂಪಿಸಿದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.