Love for the language also grows: Y.K. Darling Krishna
ಬೆಂಗಳೂರು; ಕರ್ನಾಟಕ ಕೇವಲ ರಾಜ್ಯವಲ್ಲ. ಅದು ನಮ್ಮ ಸಂಸ್ಕೃತಿ. ಕನ್ನಡ ನಮ್ಮ ಭಾಷೆ ಮಾತ್ರವಲ್ಲದೇ ನಮ್ಮ ಸಂಪ್ರದಾಯವೂ ಆಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ಡಾ. ವೈ.ಕೆ. ಮುದ್ದುಕೃಷ್ಣ ಹೇಳಿದ್ದಾರೆ.
ನಗರದ ಎಂ ಕೆ ಪಿ ಎಂ ಅರ್ ವಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ನ ಮಂಗಳ ಮಂಟಪದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಭಾಷೆ ಬಗ್ಗೆ ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು. ಭಾಷೆಯಿಂದ ನಾಡಾಭಿಮಾನವೂ ಬೆಳೆಯುತ್ತದೆ ಎಂದರು.
ರಾಜ್ಯ ಹೈಕೋರ್ಟ್ ನ ವಕೀಲರಾದ ಶ್ರವಣ ಪ್ರಭಾ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಕನ್ನಡ ಭಾಷೆ ಬಳಕೆ ಹೆಚ್ಚಾಗಬೇಕು. ಭಾಷೆ ಮಾತನಾಡುವುದರಿಂದ ಕನ್ನಡ ರಾಜ್ಯೋತ್ಸವಕ್ಕೆ ಮಹತ್ವ ದೊರೆಯುತ್ತದೆ ಎಂದರು.
ಆರ್.ವಿ ಇನ್ಸ್ಟಿಟ್ಯೂಟ್ ಲೀಗಲ್ ಸ್ಟಡೀಸ್ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಅಂಜಿನ ರೆಡ್ಡಿ ಮತ್ತಿತರೆ ಗಣ್ಯತರು ಪಾಲ್ಗೊಂಡಿದ್ದರು.