A black spot on the white collar
ಏನಿದು ಯಾರೂ ನಂಬಲಾರರು !
ಏನು ಅಂತಾ ಹೇಳದೆ ಹೇಗೆ ಹೋದಿರಿ ನೀವು !!
ನಿಮ್ಮ ಒಡಲಿನ ನೋವು
ಅದುಮಿಕೊಂಡು
ಯಾರೊಂದಿಗೂ
ಹೇಳಿಕೊಳ್ಳದೆ ಇಹಲೋಕ ತ್ಯಜಿಸಿದಿರಿ.
ರಾಜನಂತೆ ಮೆರೆದ
ರಾಜಾಹುಲಿ ನೀವು
ನಮ್ಮ ಕುಟುಂಬ
ಮುಕುಟ ಮಣಿ ನೀವು
ಏನನ್ನೂ ಹೇಳದೆ ನಮ್ಮನ್ನು
ಬಿಟ್ಟು ಅಗಲಿದ್ದಿರಿ.
ಒಂದು ಕ್ಷಣಕಾದರೂ
ಹೆಂಡತಿ ಮಕ್ಕಳ ಮೊಮ್ಮಕ್ಕಳ
ಮುಖ ನೆನಪು ಬಾರದಾಯಿತೇ ವಿಧಿಯ ಆಟದಲ್ಲಿ !
ಪ್ರತಿಯೊಬ್ಬರ ಮನಸಿಗೂ ಅನ್ಯಾಯ ಮಾಡಿದಿರಿ ನೀವು
ಊರಲ್ಲಿ ನ್ಯಾಯ ಕೊಡಿಸುವ ನ್ಯಾಯಗಾರನಾಗಿ ಇವತ್ತು
ನಿಮಗೆ ನೀವೇ ನ್ಯಾಯ ಕೊಡದೆ
ನಮ್ಮೆಲ್ಲರಿಗೊಪ್ಪದ
ಈ ಸಾವು ನಿಮಗೆ ಒಪ್ಪಿತವೇ ?!
ನಿಮ್ಮ ಸ್ವಾಭಿಮಾನ ವ್ಯಕ್ತಿತ್ವಕ್ಕೆ ಈ ಸಾವು ಶೋಭೆ
ತರದು
ಮನಸಿನ ಒಂದು ಮಾತು ಹೇಳದೆ
ಕೇಳದೆ
ಹೊರಟೇ ಹೋದಿರಿ ಅಂತಿಮ ಯಾತ್ರೆಗೆ !
ಊರಿನ ದೊರೆಯಾಗಿ
ಬಿರಾದಾರ ಪರಿವಾರ ಜೀರ್ಣಿಸಿಕೊಳ್ಳದು ನಿಮ್ಮ ಸಾವಿನ ಸುದ್ದಿಯನ್ನು
ರಾಜನಂತೆ ಬದುಕಿ ರಾಜನಂತೆ
ಮೆರೆದವರು
ನೀವು ರಾಜನಂತೆ ಸಾಯಲಿಲ್ಲವೆಂಬ ಕೊರಗು.
ನಿಮ್ಮ ಶ್ವೇತ ವರ್ಣದ
ಬದುಕಿನಲ್ಲಿ ಕಪ್ಪು ಬಣ್ಣದ ಕಾರ್ಮೋಡ
ಬದುಕಿನ ಪಯಣದಲ್ಲಿ ಹೀರೋನಂತೆ ಮೆರದಾಡಿದ ಈ ದೊರೆಗೆ
ಇಂತಹ ಸಾವಿನಿಂದಾಗಿ ನಿಮ್ಮ ವೈಟ್ ಕಾಲರಿಗೆ ಈ ಕಪ್ಪು ಚುಕ್ಕೆ ಯಾಕೆ ?
ಇಂತಿ ನಿಮ್ಮ ದುಃಖತಪ್ತ ಮಗಳು…