Breaking News

ಸಾವಿನಲ್ಲಿಯೂ ಸಾರ್ಥಕತೆ ಕಂಡ ಯುವಕ


A young man who saw success even in death

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು



ಗಂಗಾವತಿ: ನೇತ್ರದಾನ ಮಹಾದಾನ ಎನ್ನುತ್ತೇವೆ. ಆದರೆ ಯೌವ್ವನದಲ್ಲಿ ನೇತ್ರದಾನ ಮಾಡಿ ಇನ್ನೊಬ್ಬರ ಬಾಳಿಗೆ ಬೆಳಕಾಗಿ ಹೋಗಿದ್ದಾನೆ ಭಟ್ಟರ ಹಂಚಿನಾಳ ಗ್ರಾಮದ ಯುವಕ ಶಿವಾಜಿ ಗಣೇಶ್ ಚಿಟ್ಟೂರಿ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿವಾಜಿ ಗಣೇಶ್‌ನನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗಲಾಗಿತ್ತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗಲಿಲ್ಲ, ಮೆದುಳು ನಿಷ್ಕಿçಯೆ ಆಗಿತ್ತು. ಮರಳಿ ಗಂಗಾವತಿಗೆ ಬರುವಾಗ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರು ಬಳ್ಳಾರಿಯ ವಿಮ್ಸ್ನ ನಿತ್ಯ ಜ್ಯೋತಿ ಕಣ್ಣಿನ ವಿಭಾಗದ ತಂಡ ಕರೆಸಿ ಗಂಗಾವತಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಯುವಕನ ಕಣ್ಣುಗಳನ್ನು ದಾನ ಪಡೆದಿದ್ದಾರೆ.
ಅಂತಹ ಸಂದರ್ಭದಲ್ಲಿಯೂ ಮಗನ ಕಣ್ಣುಗಳನ್ನು ದಾನ ಮಾಡಲು ಮುಂದೆ ಬಂದ ಪರಂಜ್ಯೋತಿಯವರ ಸಾಮಾಜಿಕ ಕಳಕಳಿ, ಹೃದಯವಂತಿಕೆ, ದುಃಖದಲ್ಲಿಯೂ ಮಾನವೀಯ ಧೈರ್ಯ ಮೆಚ್ವಲೇಬೇಕು.
ಈ ಕಾರ್ಯಕ್ಕೆ ಡಾ|| ಹನುಮಂತಪ್ಪ, ಡಾ|| ಈಶ್ವರ ಸವಡಿ, ಡಾ|| ಮಾದವಶೆಟ್ಟಿ ಅವರು ಸಹಕಾರ ನೀಡಿದ್ದಾರೆ. ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷರಾದ ಕೆ. ಸುಬ್ರಹ್ಮಣ್ಯಶ್ವರರಾವ್, ಕಾರ್ಯದರ್ಶಿ ಲ. ರಾಘವೇಂದ್ರ ಸಿರಿಗೇರಿ, ಸದಸ್ಯರಾದ ಲ. ಪ್ರಭುರೆಡ್ಡಿ ಹಾಗೂ ವೈದ್ಯರಾದ ಡಾ|| ವೆಂಕಟೇಶ ಇತರರಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *