Breaking News

ದಸರಾ ಮಹೋತ್ಸವದ ಅಂಗವಾಗಿ ಕಲ್ಮಠದಲ್ಲಿ ಸರ್ವಧರ್ಮ ಸಮ್ಮೇಳನ

Interfaith conference in Kalmath as part of Dussehra celebrations

ಜಾಹೀರಾತು

ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ ದಸರಾ ಮಹೋತ್ಸವದ ಅಂಗವಾಗಿ ನಡೆದ ಸರ್ವಧರ್ಮ ಸಮ್ಮೇಳನ, ಪ್ರತಿಭಾ ಪುರಸ್ಕಾರ, 2001 ಮುತ್ತೆöÊದೆಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಿ ಮಾತನಾಡಿ ದೇಶದಲ್ಲಿನ 140 ಕೋಟಿ ಜನರು ಇಂದು ವಿವಿಧ ಜಾತಿ, ಭಾಷೆ,ಧರ್ಮ,ಸಾಂಸ್ಕೃತಿಯನ್ನು ಆಚರಿಸುತ್ತಿದ್ದಾರು ಕೂಡ ನಾವೇಲ್ಲರು ಭಾರತೀಯರು ಎನ್ನುವ ಮಾನೋಭವನೆಯನ್ನು ಹೊಂದಿಕೂಡಿ ಬಾಳುತ್ತಿರುವುದರಿಂದಲೇ ದೇಶ ಸುಭದ್ರವಾಗಿರುವುದಕ್ಕೆ ಸಾಧ್ಯವಾಗಿದೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಕಳೆದ 78 ವರ್ಷಗಳಲ್ಲಿ ಶಾಂತಿಯಿಂದ ಕೂಡಿಬಾಳುತ್ತಿದ್ದವರನ್ನು ಇತ್ತೀಚಿನ ದಿನಗಳಲ್ಲಿ ರಾಜಕೀಯ ಲಾಭಕೋಸ್ಕಾರ ಇಂದು ರಾಜಕಾರಣಿಗಳು ದಾರಿತಪ್ಪಿಸುವ ಕೇಲಸವನ್ನು ಮಾಡುವ ಮೂಲಕ ಜಾತಿ,ಜಾತಿಗಳ ನಡುವೆ ವೈಶಮ್ಯ ಮೂಡಿಸುವ ಮೂಲಕ ಆಶಾಂತಿಯ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಇಂತಹ ಸರ್ವ ಧರ್ಮ ಸಮ್ಮೇಳನವನ್ನು ನಡೆಸುವ ಮೂಲಕ ಜನರಲ್ಲಿ ಧರ್ಮ ಜಾಗೃತಿಯನ್ನು ಮೂಡಿಸಿ ಎಲ್ಲಾ ಜಾತಿ,ಧರ್ಮವನ್ನು ಒಂದುಗೂಡಿಸುವ ಉದ್ದೇಶದಿಂದ ಸರ್ವಧರ್ಮ ಸಮ್ಮೇಳನವನ್ನು ಅಯೋಜಿಸಲಾಗಿದೆ ಧರ್ಮವನ್ನು ನಾವು ಕಾಪಾಡಿದಲ್ಲಿ ಧರ್ಮ ನಮ್ಮನ್ನು ಕಾಪಾಡುತ್ತದೆ. ನಮ್ಮ ಆಚರ ,ವಿಚಾರ,ಸಂಸ್ಕಾರ ಬೇರೆಯಾದರು ಕೂಡ ನಾವು ದೇಶದ ಅಭಿವೃದ್ದಿಗೆ ಒಂದಾಗಬೇಕಿದೆ ಎಂದು ತಿಳಿಸಿದರು.
ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಾಹಾಸ್ವಾಮಿಗಳು ಆರ್ಶಿವಾಚನ ನೀಡಿ ದಸಾರ ಹಬ್ಬ ಎಂದರೆ ಮಾತೃಸ್ವರೂಪರಾದ ಮಹಿಳೆಯರನ್ನು ಗೌರವಿಸುವ ಹಬ್ಬವಾಗಿದ್ದು ಮಹಿಳೆಯರಿಗೆ ಗೌರವ ಸೂಚಿಸುವುದಕ್ಕಾಗಿ ಉಡಿತುಂಬುವ ಕಾರ್ಯಕ್ರಮವನ್ನು ಶ್ರೀ ಮಠದ ಪರಂಪರೆಯಂತೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕ್ರೆöÊಸ್ತ ಧರ್ಮ ಗುರುಗಳಾದ ವಂ.ಫಾ.ವಿನ್ಸೆಂಟ್ ಸುರೇಶ ಮಾತನಾಡಿ ಎಲ್ಲಾ ಧರ್ಮಗಳು ಕೂಡ ಮಾನವನಿಗೆ ಒಳಿತನ್ನೆ ಭೋದಿಸುತ್ತವೆ ವಿಶ್ವಗುರು ಬಸವಣ್ಣನವರ ವಚನಗಳ ತಿರುಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಮಾನವ ಧರ್ಮಕಿಂತಲ್ಲು ಮಾನವಿಯತೆ ದೊಡ್ಡದು. ದೇವರು ಎಲ್ಲಾರನ್ನು ಸಮಾನವಾಗಿ ಸೃಷ್ಠಿಸಿರುವುದರಿಂದ ಎಲ್ಲಾರಲ್ಲಿಯು ದೇವರನ್ನು ಕಾಣುವಂತೆ ಜೀಸಸ್ ತಮ್ಮ ಸಂದೇಶದಲ್ಲಿ ತಿಳಿಸಿದರೆ.
ಮುಸ್ಲಿಂ ಧರ್ಮಗುರು ಸೈಯಾದ್ ಸಜ್ಜದ್ ಮತವಾಲೆ ಮಾತನಾಡಿ ಕುರಾನ್ ನಲ್ಲಿ ತಿಳಿಸಿರುವಂತೆ ಈ ಭೂಮಿಯ ಮೇಲೆ ಮಂದಿರ ,ಮಸ್ಜಿದ್ ಗಳಿಗಿಂತಲು ಪ್ರೀತಿಯ ಭವನವನ್ನು ನಾವೇಲ್ಲರೂ ಕೂಡಿ ಕಟ್ಟಬೇಕಾಗಿದೆ ಯಾವುದೇ ಧರ್ಮದಲ್ಲಿಯು ದ್ವೇಷಕ್ಕೆ ಅವಕಾಶವಿಲ್ಲ ಪ್ರತಿಯೊಬ್ಬರು ಪ್ರೇಮದಿಂದ ಕೂಡಿ ಬಾಳಬೇಕಾಗಿದೆ ಎಲ್ಲಾ ಹಬ್ಬಗಳನ್ನು ಕೂಡಿ ಆಚರಿಸಬೇಕಾಗಿದೆ. ಇಂದು ಕೆಟ್ಟದರ ವಿರುದ್ದ ಒಳ್ಳೆಯದರಿಂದ ಗೇಲ್ಲಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಶಿಕ್ಷಕರಾದ ಶಾಂತಯ್ಯ ಸ್ವಾಮಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪಂ. ಕಲ್ಲಿನಾಥ ಶಾಸ್ತ್ರಿ, ಸಂಗೀತ ವಿದ್ವಾನ್ ವಿರೂಪಾಕ್ಷಯ್ಯಸ್ವಾಮಿ ವಂದಲಿ ರವರಿಗೆೆ ಸನ್ಮಾನಿಸಿ ಗೌರವಿಸಲಾಯಿತು.2001 ಸುಮಂಗಲಿಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಿಲೋಗ್ಗಲ್ ಬೃಹನ್ಮಠದ ಶ್ರೀ ಅಭಿನವ ಶಾಂತ ಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಆರ್ಶೀವಾಚನ ನೀಡಿದರು.
ಶಾಸಕ ಹಂಪಯ್ಯನಾಯಕ,ಮುಖಂಡರಾದ ಆರ್,ತಿಮ್ಮಯ್ಯ ಶೆಟ್ಟಿ, ಶಾಂತಪ್ಪ, ವೀರೇಶ,ಡಾ.ರೋಹಿಣಿ ಮಾನ್ವಿಕರ್, ನಾಗರತ್ನ ಪಾಟೀಲ್ ಬೆಟ್ಟದೂರು,ಪದ್ಮವತಿ, ವೀರೇಶ,ತಿಮ್ಮಪ್ಪ, ಬಿ.ಕೆ.ಅಮರೇಶಪ್ಪ,ಎ.ಬಿ.ಉಪಳಮಠ,ಲಕ್ಷ್ಮೀ,ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.