Breaking News

ಸ್ವಾಮಿಗಳು ಭಕ್ತರ ಮನಸ್ಸು ಗೆದ್ದಾಗ ಮಾತ್ರ ಮನದಲ್ಲಿ ಉಳಿಯಲು ಸಾಧ್ಯ : ಒಪ್ಪತ್ತೇಶ್ವರ ಸ್ವಾಮಿಜೀ ಅಭಿಮತ,

Swami can remain in mind only when he wins the mind of the devotees: Oppatteswar Swamiji Abhimata,,,

ಜಾಹೀರಾತು

(ಪಂಚಾಕ್ಷರ ಸ್ವಾಮಿಗಳ ಪುಣ್ಯ ಸ್ಮರಣೆ, ಶಿವಾನುಭವ)

ವರದಿ : ಪಂಚಯ್ಯ ಹಿರೇಮಠ,
ಕೊಪ್ಪಳ : ಮಠ ಮಾನ್ಯಗಳ ಸ್ವಾಮಿಗಳು ಭಕ್ತರ ಮನಸ್ಸನ್ನು ಗೆದ್ದಾಗ ಮಾತ್ರ ಭಕ್ತರ ಹೃದಯದಲ್ಲಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ ಎಂದು ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮಿಗಳು ಹೇಳಿದರು.

ಅವರು ಕುಕನೂರು ತಾಲೂಕಿನ ರಾಜೂರ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಬೃಹನ್ಮಠ ಅಡೂರ- ರಾಜೂರುನ ಲಿಂ. ಪರಮಪೂಜ್ಯ ಪಂಚಾಕ್ಷರ ಮಹಾಸ್ವಾಮಿಗಳ 4ನೇ ವರ್ಷದ ಪುಣ್ಯ ಸ್ಮರಣೆ ಹಾಗೂ 48 ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಮ್ಮುಖವಹಿಸಿ ಮಾತನಾಡಿದರು.

ಸ್ವಾಮಿಗಳಾದವರು ಸಮಾಜ ಚಿಂತನೆ ಹೊಂದಿ, ಸರ್ವರ ಬಾಳಿಗೆ ಬೆಳಕಾಗಬೇಕು ಅದೇ ಸಂಕಲ್ಪವನ್ನು ಹೊಂದಿದ್ದ ನಮ್ಮ ಲಿಂ. ಪಂಚಾಕ್ಷರ ಸ್ವಾಮಿಗಳು ನಾಡಿನ ವಿವಿಧೆಡೆಗಳಲ್ಲಿ ಸಂಚರಿಸುವ ಮೂಲಕ ಸಾವಿರಾರು ಭಕ್ತ ಸಂಕುಲವನ್ನು ಹೊಂದಿ ಜನ ಮಾನಸದಲ್ಲಿ ಅಚ್ಚುಳಿಯದವರಾಗಿದ್ದಾರೆ ಎಂದು ತಮ್ಮ ಆಶಿರ್ವಚನದಲ್ಲಿ ಹೇಳಿದರು.

ಯಾವಾಗಲೂ ಮಠಕ್ಕೆ ಒಬ್ಬ ಒಳ್ಳೆಯ ಮರಿ ತರಬೇಕು, ಮನೆಗೆ ಒಬ್ಬ ಒಳ್ಳೆಯ ಸೊಸೆ ತರಬೇಕು ಅಂದಾಗ ಮಾತ್ರ ಮಠ, ಮನೆಗಳು ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತವೆ.

ಮನುಷ್ಯನಾದವನು ಯಾವಾಗಲೂ ಮಹಾತ್ಮರ ಸತ್ಸಂಗ, ಅವರ ಆದರ್ಶಗಳನ್ನು ಪಾಲನೆ ಮಾಡಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಇಂದು ಪೂಜ್ಯರ ಪುಣ್ಯ ಸ್ಮರಣೆ ಜೊತೆಯಲ್ಲಿ ದೇಶದ ಮಹಾತ್ಮರನ್ನು ನೆನೆಯುವ ಶುಭ ದಿನ ನಮ್ಮದಾಗಿದೆ.

ದೇಶದ ಸ್ವಾತಂತ್ರ್ಯ ಚಳುವಳಿಯ ಪ್ರಮುಖ ಪಾತ್ರ ವಹಿಸಿದ ಮಹಾತ್ಮ ಗಾಂಧಿಜೀಯವರು ದೇಶದ ಬಡತನ ಗಮನಿಸಿ ನಮ್ಮ ದೇಶದಲ್ಲಿ ಯಾವಾಗ ಬಡತನ ನಿರ್ಮೂಲನೆಯಾಗುವದೋ ಅಲ್ಲಿಯವರೆಗೂ ನಾನು ಮೈತುಂಬ ಬಟ್ಟೆ ತೊಡುವುದಿಲ್ಲಾ ಎಂದಿದ್ದರು ಹಾಗೂ ಲಾಲ ಬಹದ್ದೂರ ಶಾಸ್ತ್ರಿಯವರು ದೇಶದ 3ನೇ ಪ್ರಧಾನಿಯಾದ ಅವರು ಕೃಷಿ ಕ್ಷೇತ್ರಕ್ಕೆ ಮನ್ನಣೆ ನೀಡುವ ಮೂಲಕ ಎಲ್ಲಾ ವರ್ಗದ ಶ್ರಮಿಕರು ದೇಶದ ಸಂಪತ್ತು ಅವರೆಲ್ಲರ ಶ್ರಮದಿಂದ ದೇಶದ ಪ್ರಗತಿ ಸಾಧ್ಯ ಎಂದವರು ಯಾವಾಗಲೂ ದೇಶದ ಹಿತಕ್ಕಾಗಿ ಜೀವನ ನಡೆಸುವ ಪೂಜ್ಯರ ಹಾಗೂ ಮಹಾತ್ಮರ ಆದರ್ಶ ಪಾಲನೆಯೊಂದಿಗೆ ಬದುಕು ನಡೆಸಬೇಕು ಎಂದರು.

ನಂತರದಲ್ಲಿ ಅಡ್ನೂರ -ರಾಜೂರನ ಅಭಿನವ ಪಂಚಾಕ್ಷರ ಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಲಿಂ. ಪಂಚಾಕ್ಷರ ಸ್ವಾಮಿಗಳು ಸಾವಿರಾರು ಭಕ್ತ ಸಮೂಹವನ್ನು ಹೊಂದಿದ್ದು , ಸ್ವಾಮಿಗಳ ಶಿಲಾ ಮಂಟಪ ಕಾರ್ಯ ಪ್ರಗತಿಯಲ್ಲಿದೆ.

ಈ ಶಿಲಾ ಮಂಟಪ ಕಾರ್ಯಕ್ಕೆ ರಾಜೂರನ ಸಮಸ್ತ ಭಕ್ತಾಧಿಗಳು ಬಡವ ಶ್ರೀಮಂತರೆನ್ನದೇ ಒಂದು ಎಕರೇ ಜಮೀನು ಹೊಂದಿದವರು ಒಂದು ಸಾವಿರ ರೂಪಾಯಿ ಶಿಲಾ ಮಂಟಪಕ್ಕೆ ನೀಡುವದಾಗಿ ಮಾತನಾಡಿದ್ದು, ಇನ್ನೂಳಿದಂತೆ ಅವರವರ ಇಚ್ಚೆಗನುಗುಣವಾಗಿ ಸೇವೆ ಸಲ್ಲಿಸಿ ಭಕ್ತಿ ಮೆರೆದಿರುವುದು ವಿಷೇಶವಾಗಿದೆ ಹಾಗೂ ನಮಗೆ ತುಲಾಭಾರ ಮಾಡಿದ ಹಣ 10 ಲಕ್ಷವನ್ನು ಇದಕ್ಕೆ ನೀಡುವುದಾಗಿ ತಿಳಿದಂತೆ ಇದನ್ನು ತೊಡಗಿಸಿದ್ದೇವೆ ಇದರಲ್ಲಿ ನನ್ನ ಪಾತ್ರ ಏನು ಇಲ್ಲಾ ಎಲ್ಲಾ ಶ್ರೀಗಳದೇ ಎಂದು ತಿಳಿಸಿದರು.

ಇನ್ನೂಳಿದಂತೆ ಈ ಎಲ್ಲಾ ಕಾರ್ಯಕ್ರಮಗಳಿಗೆ ಹಾಗೂ ಪುಜ್ಯರ ಗದ್ದುಗೆಗೆ ಹೂವಿನ ಸೇವೆಯನ್ನು ಹೊಸೂರು ಭಕ್ತರು ನೆರವೇರಿಸಿದರು, ಹಿರೇಮನ್ನೂರ, ಮಲ್ಲಾಪೂರ ಕರಡಿ ಮಜಲು ಸೇವೆ, ಶಿರೋಳ, ಸೊರಟೂರ ನಂದಿಕೋಲು ಸೇವೆ, ಯಾಸ ಹಡಗಲಿ, ಬೆಳವಣಿಕಿ, ಮಲ್ಲಾಪೂರ ಭಕ್ತರು ಭಜನಾ ಸೇವೆ, ರಾಜೂರು ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ಭಕ್ತಾಧಿಗಳು ವಿವಿಧ ಸೇವೆಯನ್ನು ಮಾಡಿದ್ದಾರೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮಿಗಳು, ಗುಳೇದಗುಡ್ಡದ ಅಮರೇಶ್ವರ ಬೃಹನ್ಮಠದ ನೀಲಕಂಠ ಮಹಾಸ್ವಾಮಿಗಳು, ಎಸ್.ಎಚ್ ವೆಂಕಟಾಪೂರ ಗುರುಸಿದ್ದೇಶ್ವರ ಸ್ವಾಮಿಗಳು, ಗದಗ ವಿರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜ್ಜನವರು ಹಾಗೂ ಮುಖಂಡರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಪೂಜ್ಯರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ನಂತರ ಕುಂಭ ಕಳಸ, ವಾಧ್ಯಗಳೊಂದಿಗೆ ಪೂಜ್ಯರ ಭಾವಚಿತ್ರ ಮೆರವಣಿಗೆ ನಂತರ ಪ್ರಸಾದ ವಿತರಣೆ ಜರುಗಿತು.

About Mallikarjun

Check Also

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.