Sheep and Wool Development Corporation; Invitation to apply for identity card for herdsmen
ರಾಯಚೂರು,,:- ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ 2024-25ನೇ ಸಾಲಿನಲ್ಲಿ ಸಂಚಾರಿ ಕುರಿಗಾಹಿಗಳಿಗೆ ಅಥವಾ ವಲಸೆಕುರಿಗಾರರಿಗೆ ಗುರುತಿನ ಚೀಟಿ ವಿತರಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲೆಯ ಅರ್ಹ ಕುರಿಗಾಹಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿರುವ ಕನಿಷ್ಠ 20 ಕುರಿ ಅಥವಾ ಮೇಕೆಗಳನ್ನು ಹೊಂದಿರುವ ಅರ್ಹ ಸಂಚಾರಿ ಕುರಿಗಾರರು ಅಥವಾ ವಲಸೆ ಕುರಿಗಾರರು ತಮ್ಮ ವ್ಯಾಪ್ತಿಯಲ್ಲಿ ಬರುವ ಪಶು ಚಿಕಿತ್ಸಾಲಯ ಮತ್ತು ಪಶು ಆಸ್ಪತ್ರೆಯ ಪಶುವೈಧ್ಯಾಧಿಕಾರಿಗಳಿಂದ ಅರ್ಜಿಗಳನ್ನು ಪಡೆದು, ವಲಸೆ ಹೋಗುವುದಕ್ಕೆ ಸಂಬAಧಪಟ್ಟAತೆ, ಸ್ಥಳೀಯ ಗ್ರಾಮ ಲೆಕ್ಕಧಿಕಾರಿಗಳಿಂದ ಮಹಜರ್ ಪ್ರಮಾಣ ಪತ್ರ ಪಡೆದು, ಸೂಕ್ತ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅದೇ ಕಚೇರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ಸ್ಥಳೀಯ ಪಶು ಚಿಕಿತ್ಸಾಲಯ ಮತ್ತು ಪಶು ಆಸ್ಪತ್ರೆಯ ಪಶುವೈಧ್ಯಾಧಿಕಾರಿಗಳು ಅಥವಾ ಆಯಾ ತಾಲ್ಲೂಕಿನ ಪಶು ಆಸ್ಪತ್ರೆಯ ಮುಖ್ಯಪಶುವೈಧ್ಯಾಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರವರನ್ನು ಸಂಪರ್ಕಿಸಬಬುದಾಗಿದೆAದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.