Peace meeting at Kukanur police station
ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ,, ಕುಕನೂರು ಆರಕ್ಷಕ ಠಾಣೆಯಲ್ಲಿ ಶಾಂತಿ ಸಭೆ,,,
ಕೊಪ್ಪಳ ( ಕುಕನೂರು) : ಗಣೇಶ ಪ್ರತಿಷ್ಟಾನೆ ಸಂಘದ ಸದಸ್ಯರು ಸಾರ್ವಜನಿಕರಿಗೆ ಕಿರಿ, ಕಿರಿ ಉಂಟು ಮಾಡುವಂತಹ, ಕರ್ಕಶ ದ್ವನಿ ವರ್ದಕಗಳನ್ನು ನಿಷೇದಿಸಲಾಗಿದ್ದು ಕಾನೂನು ಚೌಕಟ್ಟಿಗೆ ಒಳ ಪಡುವಂತೆ ಧ್ವನಿ ವರ್ದಕಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕುಕನೂರ ಠಾಣೆಯ ಪಿಐ ಟಿ. ಗುರುರಾಜ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರದಂದು ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಪ್ರಯುಕ್ತ ಕರೆದ ಶಾಂತಿ ಸಭೆಯಲ್ಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹಬ್ಬ ಆಚರಿಸುವ ನೆಪದಲ್ಲಿ ಡಿಜೆ ಬಳಸುತ್ತಿದ್ದು ಅದರ ಶಬ್ದಕ್ಕೆ ಸಮಾಜದ ಸ್ವಾಸ್ಥ ಹಾಳಾಗುವುದಲ್ಲದೇ ವೃದ್ಧರಿಗೆ, ರೋಗಿಗಳಿಗೆ, ಮತ್ತು ಚಿಕ್ಕ ಮಕ್ಕಳಿಗೆ ಡಿಜೆ ಸೌಂಡ್ ಮಾರಣಾಂತಿಕವಾಗಿ ಪರಿಣಮಿಸುತ್ತಿದೆ ಎಂದು ದೂರುಗಳು ಕೇಳಿ ಬರುತ್ತಿದ್ದುದ್ದರಿಂದ ನಿಷೇದಿಸಲಾಗಿದೆ.
ನಾಡಿನಲ್ಲಿ ಸಾಕಷ್ಟು ಕಲಾವಿದರು ಹಾಗೂ ಕಲಾ ತಂಡಗಳಿದ್ದು ಅವರ ಮೂಲಕ ಗಣೇಶ ಹಬ್ಬ ಆಚರಿಸಲು ಮುಂದಾಗಿ ಅವರ ಬದುಕಿಗೂ ಆಸರೆಯಾಗಿ ನಿಮ್ಮಿಂದ ಆ ಕಲಾ ತಂಡಗಳು ಬದುಕು ಕಟ್ಟಿಕೊಳ್ಳಲು ಸಹಕರಿಸಿ ಎಂದು ತಿಳಿಸಿದರು.
ಹಬ್ಬ ಆಚರಣೆ ನೆಪದಲ್ಲಿ ಸಮಾಜದ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಸಂಘಟನೆ ಮುಖಂಡರು ನಿಮ್ಮ ಸದಸ್ಯರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ,
ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸಂಘಟನೆಯವರು ಇಸ್ಪೀಟ್, ಜೂಜಿಗೆ ಆಸ್ಪದ ನೀಡದಂತೆ ಮುನ್ನೇಚರಿಕೆ ವಹಿಸಿ, ಕುಡಿದು ಗಲಾಟೆ ಮಾಡುವವರಿಗೆ ಕಾನೂನು ರಿತ್ಯಾ ಕ್ರಮ ಜರುಗಿಸಲಾಗುವುದು. ಗಣೇಶ ಮೂರ್ತಿಗಳನ್ನು 11 ದಿನದೊಳಗೆ ವಿಸರ್ಜಿಸಿದರೆ ಸಾರ್ವಜನಿಕವಾಗಿಯು ಮತ್ತು ಇಲಾಖೆಗೂ ಅನುಕೂಲವಾಗುತ್ತದೆ ಎಂದರು.
ಯುವ ಜನತೆ ಇದರ ಬಗ್ಗೆ ಚಿಂತನೆ ನಡೆಸಬೇಕು ಮತ್ತು ಸರಿಯಾದ ಸಮಯಕ್ಕೆ ಮೆರವಣಿಗೆಗಳನ್ನು ಪ್ರಾರಂಭಿಸಿ ರಾತ್ರಿ 10 ಕ್ಕೆ ಮುಗಿಸುವುದು ಕಡ್ಡಾಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಪಂ ಮಾಜಿ ಅಧ್ಯಕ್ಷ ಮಲ್ಲಿಯಪ್ಪ ಅಣ್ಣಿಗೇರಿ, ರಷೀದಸಾಬ ಉಮಚಗಿ, ಪಪಂ ಉಪಾಧ್ಯಕ್ಷ ಪ್ರಶಾಂತ್ ಆರು ಬೆರಳಿನ, ಪಪಂ ಸದಸ್ಯ ನೂರು ಅಹ್ಮದ್ ಗುಡಿ ಹಿಂದಲ್, ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೂರ್ಲೆಕೊಪ್ಪ ಹಾಗೂ ಯುವಕರು, ಮುಖಂಡರು, ಆರಕ್ಷಕ ಠಾಣೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.