Students of Wisdom School
Achievement in state level sports meet held at Bagalkot
ಗಂಗಾವತಿ: ಆಗಸ್ಟ್ ೨೪ ಹಾಗೂ ೨೫ ರಂದು ಬಾಗಲಕೋಟೆ ಜಿಲ್ಲೆಯ ಇಲಕಲ್‌ನಲ್ಲಿ ನಡೆದ ೬ನೇ ರಾಜ್ಯ ಮಟ್ಟದ ರೋಪ್ ಸ್ಕಿಪ್ಪಿಂಗ್ ಪಂದ್ಯಾವಳಿಯಲ್ಲಿ ಗಂಗಾವತಿ ನಗರದ ವಿಸ್ಡಮ್ ಎಲೆಮೆಂಟರಿ ಶಾಲೆಯ ವಿದ್ಯಾರ್ಥಿಗಳು ೧ ಬೆಳ್ಳಿ ಹಾಗೂ ೨ ಕಂಚಿನ ಪದಕ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
೧೦ ವರ್ಷದ ವಯೋಮಿತಿಯ ಬಾಲಕರ ವೈಯಕ್ತಿಕ ಕ್ರೀಡೆಯ ೩ ನಿಮೀಷದ ಎಂಡುರೆನ್ಸ್ ವಿಭಾಗದಲ್ಲಿ “ಪ್ರಣವ್” ಬೆಳ್ಳಿ ಪದಕ ಹಾಗೂ ಬಾಲಕಿಯರ ಸ್ಪೀಡ್ ಸ್ಟಿçಂಟ್ ವಿಭಾಗದಲ್ಲಿ ವರ್ಷಿಣಿ ಕಂಚಿನ ಪದಕ ಮತ್ತು ೧೨ ವರ್ಷದ ವಯೋಮಿತಿಯ ಬಾಲಕಿಯರ ೩ ನಿಮೀಷದ ಎಂಡುರೆನ್ಸ್ ವಿಭಾಗದಲ್ಲಿ ಬಿಬಿ ಸುಹಾನಾ ಕತೀಬ್ ಕಂಚಿನ ಪದಕ ಪಡೆದರು. ೧೦ ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶೌರ್ಯ ಎಚ್. ಹಾಗೂ ವಿರಾಜ ಗುಂಜಳ್ಳಿ, ಬಾಲಕಿಯರ ವಿಭಾಗದಲ್ಲಿ ಗೌತಮಿ ಹಾಗೂ ಮುಗ್ಧಾ ಎಚ್. ಉತ್ತಮ ಪ್ರದರ್ಶನ ನೀಡಿದರು.
ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಹಾಗೂ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ ವಿಸ್ಡಮ್ ಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಯ ಚೇರ್ಮನ್ ಆಗಿರುವ ಡಾ. ವಿನಯ ಗುಂಜಳ್ಳಿ ಹಾಗೂ ಡಾ. ವೀರೇಶ ಕಟ್ಟಿ ಮತ್ತು ಶಾಲೆಯ ಸಂಸ್ಥಾಪಕ ಚೇರ್ಮನರಾದ ಬಸವರಾಜ ಇಂಗಳಳ್ಳಿ, ಕಾರ್ಯದರ್ಶಿಗಳಾದ ರಾಜ್ ಇಂಗಳಳ್ಳಿ, ಪ್ರಾಂಶುಪಾಲರಾದ ಶ್ರೀಮತಿ ಅರುಣಾ ದೇವಿ ಅವರು ಶುಭ ಹಾರೈಸಿದರು.