Breaking News

ಜನಸೇವಾಫೌಂಡೇಶನ್ ವತಿಯಿಂದ ವಿವಿಧ ಬೇಡಿಕೆಗಳ ಈಡೆರಿಕೆಗೆ ಜಿಲ್ಲಾಧಿಕಾರಿಗಳಿಗೆ ಮನವಿ

Appeal to District Collector for fulfillment of various demands on behalf of Janaseva Foundation

ಜಾಹೀರಾತು
IMG 20240826 WA0287 300x128

ಮಾನ್ವಿ: ಪಟ್ಟಣದ ಶಾಸಕರ ಭವನದ ಅವರಣದಲ್ಲಿ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್ ರಾಜು ಪಿರಂಗಿರವರ ಮೂಲಕ ಮನವಿ ಸಲ್ಲಿಸಿ ಜನಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷರಾದ ಜಾವೀದ್ ಖಾನ್ ಮಾತನಾಡಿ ಪಟ್ಟಣದ ಸಿಂಧನೂರು ರಸ್ತೆಯಲ್ಲಿ ಆನಧಿಕೃತವಾಗಿ ರಸ್ತೆಯನ್ನು ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡದಲ್ಲಿ ಕುರ್ಡಿ ಗ್ರಾಮದ ಇಂದಿರಗಾಂಧಿ ವಸತಿ ನಿಲಯ ನಡೆಯುತ್ತಿದ್ದಾರು ಕೂಡ ಪುರಸಭೆ ಅಧಿಕಾರಿಗಳು ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಆನಧಿಕೃತವಾದ ಕಟ್ಟಡಕ್ಕೆ ನೀಡಿರುವ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಇಲಾಖೆ ವತಿಯಿಂದ ಕಡಿತಗೊಳ್ಳಿಸಬೇಕು. ೨ನೇ ವಾರ್ಡನಲ್ಲಿ ರಸ್ತೆ ಅತಿಕ್ರಮಿಸಿ ೯ರಿಂದ ೧೦ ಮನೆಗಳನ್ನು ನಿರ್ಮಿಸಿದ್ದು ಕೂಡಲೆ ಮಾಲಿಕರ ವಿರುದ್ದ ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಕೊನಕಾರ್ಪಸ್ ಜಾತಿಯ ಸಸ್ಯಗಳನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಬೇಕು. ಪಟ್ಟಣದಲ್ಲಿ ೫ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಅಗತ್ಯವಾದ ಎಲ್ಲಾ ಮೂಲಭೂತಸೌಲಭ್ಯಗಳನ್ನು ಕಲ್ಪಿಸಬೇಕು. ಪಟ್ಟಣದಲ್ಲಿ ಅಕ್ರಮ ಮಧ್ಯಮಾರಾಟ ತಡೆಯಬೇಕು.ಜೆಸ್ಕಾಂ ಇಲಾಖೆ ಯಿಂದ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬಾರದು.ಹಾಗೂ ಗಂಗಾ ಕಲ್ಯಾಣ ಯೋಜನೆಯ ಕಂಬಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿ ೨೦೦ ಎಕರೆಗೂ ಹೆಚ್ಚು ಪ್ರಮಾಣದಲ್ಲಿ ವಕ್ಫ ಆಸ್ತಿಯನ್ನು ಅತಿಕ್ರಮಿಸಿದವರ ಮೇಲೆ ಕ್ರಮ ಕೈಗೊಂಡು ವಕ್ಫ ಆಸ್ತಿಯನ್ನು ಮರಳಿ ಪಡೆಯಬೇಕು. ತುಂಗಭದ್ರ ಜಲಾಶಯದಲ್ಲಿ ಆಳವಡಿಸಿರುವ ತಾತ್ಕಲಿಕ ಗೇಟ್ ಗಳಿಂದ ಅನಾಹುತ ಸಂಭವಿಸಬಹುದಾಗಿದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ರೈತರ ಕೋನೆ ಭಾಗದ ಕಾಲುವೆಗಳಿಗೆ ಗೇಜ್ ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿದರು
ಅರಣ್ಯ ಇಲಾಖೆಯ ವಲಯ ಅರಣ್ಯಧಿಕಾರಿ ಸುರೇಶ ಅಲಮೇಲು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಉಪವಾಸ ಸತ್ಯಗ್ರಾಹದಲ್ಲಿ ಜಿಲ್ಲಾ ಅರಾಧನೆ ಸಂಸ್ಥೆ ಹಾಗೂ ಹಸಿರು ಸೇನೆಯ ಅಧ್ಯಕ್ಷೆ ಅನಿತಾ ನವಲಕಲ್,ರೈತ ಸಂಘದ ಮುಖಂಡರಾದ ಹೊಳೆಯಪ್ಪ,ಬುಡ್ಡಪ್ಪ ನಾಯಕ, ಕೆ.ವೈ. ಬಸವರಾಜ ಕೊಟ್ನೆಕಲ್, ವೀರೇಶ, ಶ್ರೀಧರ, ಚಂದ್ರ ಶೇಖರ, ನಾಗೇಶ, ವೆಂಕಟೇಶ, ಮಲ್ಲಪ್ಪ ಬಗದಿ,ರಮೇಶನಾಯಕ, ಸಮೀಷ್ ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.