Breaking News

ಸಿ ಎಸ್ ಪುರದಲ್ಲಿ ಕೈ ಹಿಡಿದ ಸಜ್ಜೆ ಬೆಳೆ: ರೈತರಲ್ಲಿ ಸಂತಸದ ಕಳೆ

Sajja crop cultivated in CS Pura: Weed of happiness among farmers

ಜಾಹೀರಾತು

ಗುಡೇಕೋಟೆ: ಕಳೆದ ವರ್ಷ ತೀವ್ರ ಬರಗಾಲದಿಂದ ಬಸವಳಿದಿದ್ದ ರೈತರ ಪಾಲಿಗೆ ಈ ಸಲ ಉತ್ತಮ ಮಳೆ ಬಂದು ನೆಮ್ಮದಿ ತಂದಿದ್ದು, ಸಜ್ಜೆ ಪೈರು ಹುಲುಸಾಗಿ ಬೆಳೆದಿರುವ ಕಾರಣ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ಚಂದ್ರಶೇಖರಪುರ ಗ್ರಾಮದ ರೈತ ಡಿ.ರೇವಣ್ಣ ಮತ್ತು ಮಕ್ಕಳು ರವರು 5 ಎಕರೆ ಜಮೀನಿನಲ್ಲಿ ಬೆಳೆದಿರುವ ಸಜ್ಜೆ ಮಾತ್ರ ನೀರಾವರಿ ಪ್ರದೇಶದಲ್ಲಿ ಬೆಳೆದ ಬೆಳೆಯಂತೆ ಸಮೃದ್ಧಿಯಾಗಿ ಬೆಳೆದಿದ್ದು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.ಈ ಸಜ್ಜೆ ಬೀಜವನ್ನು ಗುಡೇಕೋಟೆ ರೈತ ಸಂಪರ್ಕ ಕೇಂದ್ರದಿಂದ ಖರೀದಿಸಿ ಅವರ ಸಲಹೆಯಂತೆ ಸ್ಟಾರ್ ಅಗ್ರಿಗ್ರೇಟ್ ಚಂದ್ರ ಸಜ್ಜೆ ಬೀಜ ಬಿತ್ತನೆ ಮಾಡಿದ್ದರ ಫಲವಾಗಿ ಈ ಬಾರಿ ರೈತ ಡಿ.ರೇವಣ್ಣ ನವರು ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದಾರೆ.

ಸತತವಾಗಿ ಕಳೆದೆರಡು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದೆ ಮುಂಗಾರು, ಹಿಂಗಾರು ಬೆಳೆಗೆ ಹಾನಿಯಾಗಿತ್ತು. ಈ ಬಾರಿಯೂ ಹೀಗಾದರೆ ಮುಂದೇನು ಎಂಬ ಚಿಂತೆ ರೈತರಿಗಿತ್ತು. ಆದರೆ ಇದೀಗ ಉತ್ತಮ ಮಳೆ ಬಿದ್ದಿರುವುದರಿಂದ ಬೆಳೆಗಳನ್ನು ನೋಡಿ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಜುಲೈ ಅಂತ್ಯ, ಆಗಸ್ಟ್ ಮೊದಲ ವಾರದಲ್ಲಿ ಬಿದ್ದ ಮಳೆಗೆ ಜೋಳ,ಸಜ್ಜೆ, ಶೇಂಗಾ, ಮೆಕ್ಕೆಜೋಳ, ಎಳ್ಳು ರಾಗಿ, ಮುಂತಾದ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದರು. ಬಳಿಕ ಜುಲೈ ತಿಂಗಳ ಮೊದಲ ಎರಡು ವಾರಗಳ ಮಧ್ಯೆ ಮಳೆ ಇಲ್ಲದೆ ಸಜ್ಜೆ ಪೈರು ಒಣಗಲಾರಂಭಿಸಿತ್ತು. ಒಣಗುವ ಹಂತದಲ್ಲಿದ್ದ ಸಜ್ಜೆ ಬೆಳೆ ಇದೀಗ ಮಳೆ ಸುರಿದ ಪರಿಣಾಮ ಹಸಿರಿನಿಂದ ನಳನಳಿಸುತ್ತಿದ್ದು, ಕಾಳುಗಟ್ಟುವ ಹಂತದಲ್ಲಿದೆ. ಇನ್ನು ಒಂದೂವರೆ ತಿಂಗಳಲ್ಲಿ ಸಜ್ಜೆ ಬೆಳೆ ಕೈಸೇರುವ ಸಂಭ್ರಮದಲ್ಲಿದ್ದಾರೆ ರೈತರು.

ನೀರು, ಮೇವಿನ ಕೊರತೆ ಇಲ್ಲ:

ಮಳೆ ಇಲ್ಲದೆ ಇದ್ದಾಗ ಮೇವಿನ ಬೆಲೆ ಗಗನಮುಖಿಯಾಗಿತ್ತು. ಒಂದು ಹೊರೆ ಹುಲ್ಲಿಗೆ ₹ 500 ದರ ಇತ್ತು. ಹಾಗಾಗಿ ಮೇವಿಲ್ಲದೆ ರೈತರು ಜಾನುವಾರಗಳನ್ನು ಮಾರಾಟ ಮಾಡಿದ್ದರು. ಈ ವರ್ಷ ಬೆಳೆ ಚೆನ್ನಾಗಿ ಬಂದಿದೆ. ಹದವಾಗಿ ಮಳೆಯಾಗುತ್ತಿರುವುದರಿಂದ ಬದುಗಳಲ್ಲಿ ಹಸಿರು ಮೇವು ಸೊಂಪಾಗಿ ಬೆಳೆಯಲಾರಂಭಿಸಿದೆ. ಬಹುತೇಕ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚುತ್ತಿದೆ. ಸದ್ಯಕ್ಕೆ ನೀರು, ಮೇವಿಗೆ ಕೊರತೆ ಇಲ್ಲ. ಹೀಗೆ ಹದವಾಗಿ ಮಳೆಯಾದರೆ ಶೇ 90ರಷ್ಟು ಬೆಳೆ ನಿರೀಕ್ಷೆ ಇದೆ.

ಸಿರಿಧಾನ್ಯಗಳು ಸಮೃದ್ಧಿ:

ಕಳೆದೆರಡು ವರ್ಷಕ್ಕಿಂತ ಈ ವರ್ಷ ಇರುವ ಬೆಳೆಗಳು ಸದ್ಯಕ್ಕೆ ಚೆನ್ನಾಗಿವೆ. ಮುಂದೆ ಸಮಯಕ್ಕೆ ಸರಿಯಾಗಿ ಮಳೆಯಾದರೆ ತೊಂದರೆ ಇಲ್ಲ. ವರ್ಷದ ಕಾಳು ಮನೆಗೆ ಬರುತ್ತದೆ. ರೈತರು ಸಾಂಪ್ರದಾಯಿಕವಾಗಿ ಜೋಳ, ಸಜ್ಜೆ, ಶೇಂಗಾ, ಮೆಕ್ಕೆಜೋಳ, ಎಳ್ಳು,ರಾಗಿ, ಬೆಳೆಗಳು ಕೂಡಾ ಈ ಬಾರಿ ಸಮೃದ್ಧಿಯಾಗಿ ಬೆಳೆದಿವೆ ಎಂದು ರೈತ ಡಿ.ರೇವಣ್ಣ ಸಂತಸ ವ್ಯಕ್ತಪಡಿಸಿದರು.

About Mallikarjun

Check Also

ಕೃಷ್ಣಾಪೂರ ಡಗ್ಗಿ ಅಂಗನವಾಡಿಕೇಂದ್ರದಲ್ಲಿಪೋಷಣಾಭಿಯಾನ,ಉಡಿತುಂಬುವ ಕಾರ್ಯಕ್ಕೆ ಚಾಲನೆ

Krishnapura Daggi Anganwadi Center launched nutrition drive ಪೋಷಣಾಭಿಯಾನದ ಪರಿಣಾಮ ಅಪೌಷ್ಠಿಕತೆ ದೂರವಾಗುತ್ತಿದೆ:ಇಒ ಲಕ್ಷ್ಮಿದೇವಿ*ಕೃಷ್ಣಾಪೂರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.