Breaking News

ಕೆಎಸ್ಆರ್ ಟಿ ಸಿ ಬಸ್ ಹರಿದು 31ಕುರಿ ಬಲಿ,,,ಕುರಿಗಾಯಿಯ ಬಾಳು ಚಿಂತಾಜನಕ,,

KSRTC bus overturns, 31 sheep killed Sheep survival is a concern.

ಜಾಹೀರಾತು
IMG 20240824 WA0309 1024x768

ಕೊಪ್ಪಳ : ಕೆಎಸ್ಆರ್ ಟಿಸಿ ಬಸ್ ಗೆ ಬಲಿಯಾದ 31ಕುರಿಗಳು, ಕೊಪ್ಪಳ ಜಿಲ್ಲೆಯ ಕನಗೇರಿ ಹಾಗೂ ಕಾಟಾಪುರ ಗ್ರಾಮಗಳ ಉಮೇಶ ಗೊಲ್ಲರ, ದುಲ್ಲೆಪ್ಪ ಅಮರಾಪುರ ಎಂಬುವವರಿಗೆ ಸೇರಿದ್ದವು ಎನ್ನಲಾಗಿದೆ.

ಗಜೇಂದ್ರಗಡ ಸಮೀಪದ ಕತ್ರಾಳ ಗ್ರಾಮದ ಹತ್ತಿರ ಗುರುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ಹರಿದು 31 ಕುರಿಗಳು ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಕುರಿಗಳನ್ನು ಮೇಯಿಸಿಕೊಂಡು ರಾಜೂರ ಗ್ರಾಮದ ಜಮೀನೊಂದರಲ್ಲಿರುವ ಹಟ್ಟಿಗೆ ಕುರಿಗಳನ್ನು ಹೊಡೆದುಕೊಂಡು ರಸ್ತೆಯ ಎಡ ಬದಿಯಲ್ಲಿ ಬರುತ್ತಿದ್ದಾಗ ಗಜೇಂದ್ರಗಡದಿಂದ ಬಾದಾಮಿ ಕಡೆಗೆ ಹೊರಟಿದ್ದ ಬಸ್ ಕುರಿಗಳ ಮೇಲೆ ಹರಿದಿದೆ. ಬಸ್ ಹರಿದ ರಭಸಕ್ಕೆ ರಸ್ತೆ ತುಂಬ ಕುರಿಗಳು ಮಾಂಸದ ಮುದ್ದೆಯಾಗಿ ಬಿದ್ದಿದ್ದವು. ಕೆಲವು ಕುರಿಗಳ ಭ್ರೂಣಗಳು ರಸ್ತೆ ಮೇಲೆ ಬಿದ್ದಿರುವುದನ್ನು ಕಂಡು ಸ್ಥಳೀಯರು ಮರುಗಿದರು.

ಇದರಿಂದ ಕುರಿಗಾಯಿ ಕಂಗಾಲಾಗಿದ್ದು ಆಕಾಶವೇ ಕಳಚಿ ಬಿದ್ದಂತಾಗಿದೆ. ಲಕ್ಷಾಂತರ ರೂಪಾಯಿಗಳ ಬೆಲೆ ಬಾಳುವ ಕುರಿಗಳು ಈ ರೀತಿ ದಾರುಣವಾಗಿ ಬಲಿಯಾಗಿದ್ದರಿಂದ ಕುರಿಗಾಯಿ ಚಿಂತಾಕ್ರಾಂತನಾಗಿದ್ದಾನೆ.

ಈ ಕುರಿತು ಮಾದ್ಯಮದೊಂದಿಗೆ ಕುರಿಗಾಯಿ ಮಾತನಾಡಿ ಬಸ್ ಏಕಾಏಕಿ ಕುರಿಗಳ ಹಿಂಡಿನ ಮೇಲೆ ಬಂದಿತು. ಜೀವ ಭಯದಿಂದ ನಾವು ಓಡಿ ಹೋಗಿ ಪ್ರಾಣ ಉಳಿಸಿಕೊಂಡೆವು, 31 ಕುರಿಗಳು ಬಲಿಯಾಗಿದ್ದು, 19 ಕುರಿಗಳು ಕಾಲು ಮುರಿದುಕೊಂಡಿವೆ, ಕುರಿ ಹಿಂಡಿನಲ್ಲಿ ಬಹಳಷ್ಟು ಬೇರೆಯ ಜನರ ಪಾಲಿನ ಕುರಿಗಳಿವೆ ಆದ್ದರಿಂದ ನಮಗೆ ತುಂಬಾ ನಷ್ಟವಾಗಿದ್ದು ಸರ್ಕಾರ ಕೂಡಲೇ ಪರಿಹಾರ ಕೊಡಿಸಬೇಕು ಎಂದು ಕುರಿಗಾಹಿ ಉಮೇಶ ಗೊಲ್ಲರ ಅಳಿಲು ತೋಡಿಕೊಂಡರು.

ಘಟನಾ ಸ್ಥಳಕ್ಕೆ ಗಜೇಂದ್ರಗಡ ಹಾಗೂ ಯಲಬುರ್ಗಾ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

About Mallikarjun

Check Also

ನವೆಂಬರ್ 1 ರಂದು ಜಿಲ್ಲಾ ಕೇಂದ್ರದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

70th Karnataka Rajyotsava Day celebrated at the district headquarters on November 1 ಕೊಪ್ಪಳ ಅಕ್ಟೋಬರ್ 28 …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.