Boycott the meeting after shouting contempt from the farmer’s association * Boycott the meeting after shouting contempt from the farmer’s association

ಮಾನ್ವಿ : ಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ರಸಗೊಬ್ಬರ ,ಕೀಟನಾಶಕ ಮತ್ತು ಬಿತ್ತನೆ ಬೀಜಗಳ ಮಾರಾಟಗಾರರ ಸಭೆಯನ್ನು ತಾಲೂಕು ಕೃಷಿ ಸಹಾಯಕ ನಿರ್ದೇಶಕರಾದ ಗುರುನಾಥ ಭೂಸನೂರ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾನವಿ, ಸಿರವಾರ ಹಾಗೂ ಮಸ್ಕಿ ತಾಲ್ಲೂಕಿನಲ್ಲಿ ರಸಗೊಬ್ಬರ,ಕೀಟನಾಶಕ ಹಾಗೂ ಬಿತ್ತನೆ ಬೀಜಗಳ ಮಾರಾಟಗಾರರು 220 ಅಂಗಡಿ ಮಾಲೀಕರು ಆಗಮಿಸಬೇಕಾಗಿತ್ತು. ಮತ್ತು ಹಿರೇಕೊಟ್ನೆಕಲ್ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಮರೇಶ ಸಭೆಗೆ ಗೈರು ಹಾಜರಾಗಿದ್ದರು ಮತ್ತು ಕೇವಲ 100 ಮಳಿಗೆಯ ಮಾಲೀಕರು ಸಭೆಯಲ್ಲಿ ಹಾಜರಾಗಿದ್ದರು. ಇನ್ನೂ ಉಳಿದ ಮಾಲೀಕರು ಗೈರು ಆದ ಕಾರಣ ಇದನ್ನು ಖಂಡಿಸಿ ರೈತ ಸಂಘದ ಮುಖಂಡರು ಹಾಗೂ ಸದಸ್ಯರು ಆಕ್ರೋಶ ಗೊಂಡು ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಿಗೆ ಹಾಗೂ ರೈತರಿಗೆ ಮಳಿಗೆ ಮಾಲೀಕರು ಅವಮಾನ ಮಾಡಿದ್ದಾರೆ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಸಭೆಗೆ ಬಹಿಷ್ಕಾರ ಹಾಕಿದ್ದರು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಜಿಲ್ಲಾಧ್ಯಕ್ಷೆ ಅನಿತಾ ನವಲಕಲ್, ಬಸವರಾಜ ನಾಯಕ ಹಿರೇಕೊಟ್ನೆಕಲ್, ಶರಣಬಸವ ನಾಯಕ ಜಾನೇಕಲ್, ಬುಡ್ಡಪ್ಪ ನಾಯಕ, ಅಮರೇಶ ಗೌಡ, ಜಾವೀದ್ ಖಾನ್ ಹೊಳೆಯಪ್ಪ ಉಟಕನೂರು, ಸೇರಿದಂತೆ ರೈತ ಮುಖಂಡ ಹಾಗೂ ಕೃಷಿ ಅಧಿಕಾರಿಗಳು ಅಂಗಡಿ ಮಾಲೀಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.