Raichur: Police raid 6 kg CH powder worth 4200 and arrest two
ರಾಯಚೂರು.ಸಿಎಚ್.ಪೌಡರ್ ಮಾರಾಟ ಮಾಡಲು ಸಾಗಾಣೆ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿ 4200 ಮೌಲ್ಯದ 6 ಕೆಜಿ.ಸಿಎಚ್ ಪೌಡರ್ ಹಾಗೂ ಇಬ್ಬರು ಬಂಧಿಸಿದ್ದಾರೆ.
ತಾಲೂಕಿನ ಬಾಪೂರ ಗ್ರಾಮದಲ್ಲಿ ರಾಯಚೂರು ನಗರದ ಮಡ್ಡಿಪೇಟೆ ನಿವಾಸಿ ಹಂಪಯ್ಯ, ಹರಿಜನವಾಡದ ನಿವಾಸಿ ನಾರಾಯಣ ಇವರು ಬಾಪುರು ಗ್ರಾಮದಿಂದ ನಗರಕ್ಕೆ ಆಗಮಿಸುತ್ತಿದ್ದ ವೇಳೆ ಪೋಲಿಸರ ದಾಳಿಗೆ ಒಳಗಾಗಿದ್ದಾರೆ.
ದಾಳಿಯಿಂದಾಗಿ 6ಕೆ.ಜಿ. ಸಿ.ಹೆಚ್ ಪೌಡರ್ ಅಂದಾಜು 4200 ರೂ. ಬೆಲೆ ಬಾಳುವ ಸಿ.ಹೆಚ್ ಪೌಡರ್ ವಶಕ್ಕೆ ಪಡೆದುಕೊಂಡಿದ್ದು, ಇಬ್ಬರು ಆರೋಪಗಳನ್ನು ಬಂದಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಈ ಕುರಿತು ಯರಗೇರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.