D. Devaraja who took a bold step to eliminate the system of serfdom: AK Prakash.
ಗುಡೇಕೋಟೆ: ಬಡವರ ಕಲ್ಯಾಣ ಅಭಿವೃದ್ಧಿ ಯೋಜನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರೊಂದಿಗೆ ಸಮಾಜದ ಹಿಂದುಳಿದ ವರ್ಗದವರ ಶ್ರೇಯೋಭಿವೃದ್ಧಿಗೆ ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರವಾದುದು ಎಂದು ಗುಡೇಕೋಟೆ ಮತ್ತು ಚಂದ್ರಶೇಖರಪುರ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಿಚಾರಕ ಎ.ಕೆ.ಪ್ರಕಾಶ್ ಹೇಳಿದರು.
ಅವರು ಇಂದು ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಮತ್ತು ಚಂದ್ರಶೇಖರಪುರ ಗ್ರಾಮಗಳಲ್ಲಿ ಇರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕೂಡ್ಲಿಗಿ,ವಿಜಯನಗರ ಜಿಲ್ಲೆ ಇವರ ಸಹಯೋಗದಲ್ಲಿ ಡಿ.ದೇವರಾಜ ಅರಸುರವರ 109 ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಪೂಜೆ ಸಲ್ಲಿಸಿ ವಸತಿ ನಿಲಯದ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಮಾಜದಲ್ಲಿದ್ದ ಅತ್ಯಂತ ಅನಿಷ್ಠ ಪದ್ದತಿಗಳಾದ ಮಲ ಹೊರುವ ಪದ್ದತಿ ಹಾಗೂ ಜೀತ ಪದ್ದತಿಗಳ ನಿವಾರಣೆಗೆ ಸೂಕ್ತ ಕಾನೂನು ರಚಿಸುವುದರೊಂದಿಗೆ ಅವುಗಳನ್ನು ರಾಜ್ಯದಲ್ಲಿ ನಿರ್ಮೂಲನೆ ಗೊಳಿಸಲು ದಿಟ್ಟ ಹೆಜ್ಜೆ ಇಟ್ವವರು ಡಿ.ದೇವರಾಜ ಅರಸು ಅವರು ಎಂದರು.
ಕನಿಷ್ಠ ವೇತನ ಪದ್ದತಿ, ಹಿಂದುಳಿದ ವರ್ಗದವರಿಗೆ ಸರಕಾರಿ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸುವುದರೊಂದಿಗೆ ಹಿಂದುಳಿದ ಸಮಾಜವನ್ನು ಮುಂದೆ ತರಲು ಶ್ರಮಿಸಿದರು .ಇದರಿಂದಾಗಿ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗಳು ಸಹ ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು ಎಂದರು.
ಈ ರಾಜ್ಯದಲ್ಲಿ ಬಡ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು ಎಂದು ರಾಜ್ಯದಾದ್ಯಂತ ವಿದ್ಯಾರ್ಥಿ ನಿಲಯಗಳನ್ನು ಅವರ ಅಧಿಕಾರಾವಧಿಯಲ್ಲಿ ನೂತನವಾಗಿ ವಸತಿ ನಿಲಯಗಳನ್ನು ತೆರೆಯುವುದರೊಂದಿಗೆ ಎಲ್ಲರೂ ಶಿಕ್ಷಣವಂತರಾಗಬೇಕೆಂದು ಅಭಿಲಾಷೆಯನ್ನು ಹೊಂದಿದ್ದರು. ಹಾಗಾಗಿ ವಿದ್ಯಾರ್ಥಿಗಳು ಡಿ. ದೇವರಾಜು ಅರಸು ಅವರು ನೀಡಿರುವ ಹಲವಾರು ಸಾಮಾಜಿಕ ಕಾರ್ಯಗಳನ್ನು ಯೋಜನೆಗಳನ್ನು ಅವರ ಆದರ್ಶಗಳನ್ನು ವಿದ್ಯಾರ್ಥಿಗಳೆಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮ ಸಮಾಜದ ಗಟ್ಟಿ ದ್ವನಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಗುಡೇಕೋಟೆ ಮತ್ತು ಚಂದ್ರಶೇಖರಪುರ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಿಚಾರಕ ಎ.ಕೆ.ಪ್ರಕಾಶ್.ವಸತಿ ನಿಲಯದ ಸಿ ಎಸ್ ಪುರ ಅಡುಗೆ ಸಹಾಯಕರಾದ ರಂಗಪ್ಪ, ಚೌಡೇಶ್ವರಿ, ಗಣೇಶ್, ಮಹೇಶ್, ಸಾಕಮ್ಮ, ಗುಡೇಕೋಟೆಯ ನಯನ, ನಾಗಮ್ಮ,ಮಾರಕ್ಕ, ಸೇರಿದಂತೆ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.