Kukanur Town Panchayat President, Vice President elected unopposed.
ಕೊಪ್ಪಳ : ಕುಕನೂರು ಪಟ್ಟಣದ ಎಪಿಎಂಸಿಯಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಪ್ರಕ್ರೀಯೇ ಮಧ್ಯಾಹ್ನ 1 ಗಂಟೆಗೆಯಿಂದ ಪ್ರಾರಂಭವಾಯಿತು.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ತೆರೆ ಮರೆಯಲ್ಲಿ ನೆಡೆದ ಹಲವು ಬೆಳವಣಿಗೆಯ ಮಧ್ಯೆ ಸೋಮವಾರ ಬೆಳಗಿನಿಂದಲೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕುತೂಹಲ ಮೂಡಿಸಿದ್ದು ಕಾಂಗ್ರೆಸ್ ವಿಪ್ ಜಾರಿಯಾಗಿದ್ದರಿಂದ ಸದಸ್ಯರಿಗೆ ನುಂಗಲಾರದ ತುತ್ತಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಆಯ್ಕೆ ನಿರಾಳವಾಯಿತು.
ಅಧ್ಯಕ್ಷರಾಗಿ 8ನೇ ವಾರ್ಡ್ ನ ಲಲಿತಮ್ಮ ಯಡಿಯಾಪೂರ, ಉಪಾಧ್ಯಕ್ಷರಾಗಿ 3ನೇ ವಾರ್ಡ್ ನ ಪ್ರಶಾಂತ ಆರಬೆರಳಿನ ಅವಿರೋಧವಾಗಿ ಆಯ್ಕೆಯಾದರು.
ನಿಗದಿಯಂತೆ ಸ್ಪರ್ದೆ ನಡೆದಿದ್ದು ಚುನಾವಣೆ ಪ್ರಕ್ರೀಯೆ ಆರಂಭವಾಗುತ್ತಿದ್ದಂತೆ ನಾಮ ಪತ್ತ ಸಲ್ಲಿಸಿದವರು ವಾಪಸ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿತ್ತು.
ಅದರಂತೆ ಬಿಜೆಪಿ ಲಕ್ಷ್ಮೀ ಸಬರದ ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ನೇತ್ರಾವತಿ ಮಾಲಗಿತ್ತಿ ನಾಮ ಪತ್ರ ಹಿಂಪಡೆದಿದ್ದರಿಂದ ಕಾಂಗ್ರೆಸ್ ನ ಲಲಿತಮ್ಮ ಯಡಿಯಾಪೂರ ಅಧ್ಯಕ್ಷರಾಗಿ, ಪ್ರಶಾಂತ ಆರಬೆರಳಿನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ತಹಶೀಲ್ದಾರ ಎಚ್.ಪ್ರಾಣೇಶ ಘೋಷಿಸಿದರು.
ನಂತರದಲ್ಲಿ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ ಬಿಜೆಪಿಯ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದು ಕಾಲಾವಕಾಶದೊಳಗೆ ನಾಮ ಪತ್ರ ಹಿಂಪಡೆದಿದ್ದರಿಂದ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ, ನಮ್ಮ ಕಾಂಗ್ರೆಸ್ 10 ಜನ ಬೆಂಬಲ ನೀಡಿದ್ದು ಅವರೆಲ್ಲರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಪಟ್ಟಣ ಪಂಚಾಯತಿ ಅಭಿವೃದ್ದಿ ಕೆಲಸ ಮಾಡಲು ನಾನು ಯಾವಾಗಲೂ ಹಿಂದೆ ಇರುತ್ತೇನೆ, ಪಟ್ಟಣವನ್ನು ಇನ್ನೂ ಹೆಚ್ಚಿನ ಅಭಿವೃದ್ದಿಯನ್ನು ಮಾಡಲಾಗುವದು ಎಂದರು.
ಈ ಸಂದರ್ಭದಲ್ಲಿ ಲೋಕ ಸಭಾ ಸದಸ್ಯ ರಾಜಶೇಖರ್ ಹಿಟ್ನಾಳ ಉಪಸ್ಥಿತರಿದ್ದರು.
ಚುನಾವಣಾ ಸಮಯಕ್ಕೂ ಮುನ್ನ ಎಪಿಎಂಸಿ ಕಚೇರಿ ಸುತ್ತಲು 100ಮೀ ನಿಷೇಧಾಜ್ಞೇ ಜಾರಿ ಮಾಡಿ ಪೋಲಿಸ್ ಪೇದೆಗಳನ್ನು ನಿಯೋಜನೆ ಮಾಡಲಾಗಿತ್ತು.
ನಂತರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮವನ್ನು ಆಚರಿಸಿದರು