Breaking News

ಸವುಳು ಹಳ್ಳದ ಕೆರೆ ಅಭಿವೃದ್ಧಿಗೆ ಕ್ರಿಯಾ ಯೋಜನೆ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ್

Action Plan for Development of Savulu Hallada Lake – MLA K. Raghavendra Hitnal

ಜಾಹೀರಾತು
IMG 20240815 WA0713 300x225

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇವಿನಹಳ್ಳಿ ಗ್ರಾಮ ಪಂಚಾಯಿತಿಯ ಶಹಪುರ ಗ್ರಾಮದ ಕುರಿ, ದನ, ಕರುಗಳಿಗೆ ನೆರವಾಗಲು ಸವುಳು ಹಳ್ಳದ ಕೆರೆ ಸಮಗ್ರವಾಗಿ ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದ್ದು, ಗ್ರಾಮಸ್ಥರು ಸಂಬಂಧಿಸಿದ ಪ್ರದೇಶದ ನಕಾಶೆ ಒದಗಿಸಬೇಕೆಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರು ತಿಳಿಸಿದರು.

ಗಿಣಿಗೇರಾ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಮತ್ತು ಜನಸಂಪರ್ಕ ಸಭೆಯ ಬಳಿಕ ಶಹಪುರ ಗ್ರಾಮದ ಕನಕ ಭವದನಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಿದ ಅವರು ಶಹಪುರ ದಿಂದ ಗುಡದಳ್ಳಿ ರಸ್ತೆಯನ್ನು ಶೀಘ್ರದಲ್ಲೇ ಅಭಿವೃದ್ಧಿಪಡಿಸುವ ಭರವಸೆ ನೀಡಿದರು. ಸರ್ಕಾರಿ ಜಾಗೆ ಇದ್ದಲ್ಲಿ ಸ್ತ್ರೀ ಸ್ವಸಹಾಯ ಸಂಘಗಳ ಸಮುದಾಯ ಭವನ ಯೋಜನೆ ಜಾರಿಗೆ ಮಾಡುವುದಾಗಿ ಹೇಳಿದ ಅವರು, ಸೊಸೈಟಿಗೆ ಹಳೆಯ ಶಾಲೆಯ ಕೊಠಡಿಯನ್ನು ಬಳಸಿಕೊಳ್ಳಬಹುದು ಎಂದರು.

ಪಿಯು ಮತ್ತು ಪದವಿ ಪೂರೈಸಿದ ಯುವಕರಿಗೆ ಕಿರ್ಲೋಸ್ಕರ್ ಕಂಪನಿಯಲ್ಲಿ ಉದ್ಯೋಗ ಕೊಡಿಸಲು ಭರವಸೆ ನೀಡಿದ ಅವರು ಶಹಪುರ ಮತ್ತು ಬೇವಿನಹಳ್ಳಿ ನಡುವೆ ಇರುವ ಹಳೆಯ ಮಾರ್ಗಕ್ಕೆ ಸೇತುವೆ ನಿರ್ಮಿಸಿ ರಸ್ತೆ ಒದಗಿಸಿ ಕೊಡುವ ಭರವಸೆ ನೀಡಿದ ಶಾಸಕರು ಕನಕದಾಸರ ಮೂರ್ತಿಯನ್ನು ತುರ್ತಾಗಿ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಿಂದೆಯೂ ಜನರ ಆಶೋತ್ತರಗಳಿಗೆ ಅನುಗುಣವಾಗಿ ಶಹಪುರ ಗ್ರಾಮದ ಅಭಿವೃದ್ಧಿಗೆ ಸಹಕರಿಸಿದ್ದೇನೆ ಎಂದರು.

ತಹಸೀಲ್ದಾರ್ ವಿಠ್ಠಲ ಚೌಗಳೆ, ಇ.ಒ. ಡುಂದೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರಾದ ಸುಮಂಗಲ ನಿಂಗಪ್ಪ ನಾಗಲಾಪುರ, ಹಾಲಪ್ಪ ತೋಟದ, ಹನುಮಂತ ಗೊಲ್ಲರ, ಮುಖಂಡರಾದ ಗಿರೀಶ್ ಹಿರೇಮಠ, ನಿಂಗಜ್ಜ ಚೌಧರಿ, ಬಸವರಾಜ ಕಂಬಳಿ, ಲಕ್ಷ್ಮಣ, ಮಂಜುನಾಥ್ ಮಂಗಳೂರು, ಮಂಜುನಾಥ್ ಸಿಂದೋಗಿ, ಹನುಮಂತ ಎಲ್ ಕುರಿ, ಮಲ್ಲಿಕಾರ್ಜುನ ಕುರಿ, ಸುರೇಶ್ ಪಾಟೀಲ, ಮಂಜುನಾಥ ರಾಟಿ, ಬೇವಿನಹಳ್ಳಿ ಗ್ರಾಮದ ಮುದ್ದಪ್ಪ ಗೊಂದಿಹೊಸಳ್ಳಿ, ಗ್ರಾ ಪಂ ಉಪಾಧ್ಯಕ್ಷರಾದ ಮುರಳಿಧರ್ ಲಿಂಗದಳ್ಳಿ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ಧಿ ಯುವಕ ಸಂಘದ ಅಧ್ಯಕ್ಷ ಹುಲ್ಲೇಶ್ ಸಿಂದೋಗಿ, ಅಗಳಕೇರಿ ಗ್ರಾಮದ ಕೃಷ್ಣ ಗಡಾದ, ಯುವ ಮುಖಂಡರಾದ ಶರಣಪ್ಪ ಚೌಡ್ಕಿ, ರಮಾಲೆಪ್ಪ ಬಾರಕೇರ ಸೇರಿದಂತೆ ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಇದ್ದರು.

About Mallikarjun

Check Also

ನವೆಂಬರ್ 1 ರಂದು ಜಿಲ್ಲಾ ಕೇಂದ್ರದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

70th Karnataka Rajyotsava Day celebrated at the district headquarters on November 1 ಕೊಪ್ಪಳ ಅಕ್ಟೋಬರ್ 28 …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.