Breaking News

ಲಿಂಗಾಯತ ಅನ್ನ ಉಂಡು ಬೇರೆಯವರಿಗೆ ಜೈ ಎನ್ನುವ ಮನಸ್ಥಿತಿಗೆ ಏನೂ ಹೇಳಬೇಕು.

There is nothing to be said for the mentality of being a Lingayat and calling others Jai.

ಜಾಹೀರಾತು
Screenshot 2024 08 12 11 00 53 91 A23b203fd3aafc6dcb84e438dda678b6 300x227

ವಚನಾನಂದ ಸ್ವಾಮಿಗಳು ಮಾತಾಡಿದರೆ ಸಾಕು ವಚನಗಳು ಉದರುತ್ತವೆ. ಆದರೆ ಆ ವಚನಗಳಂತೆ ಬದುಕು ಇಲ್ಲದೆ ” ವಚನ ತನ್ನಂತಿರ ತಾ ವಚನದಂತಿರ ” ಎನ್ನುವಂತೆ ವಚನಗಳಿಗೆ ದ್ರೋಹ ಬಗೆಯುವಂತ ಮಾತುಗಳು ಆಡುವುದು ಯಾಕೆ ಅಂತ ತಿಳಿಯುತ್ತಿಲ್ಲ . ಕಾವಿ ತೊಟ್ಟು ಜನರನ್ನು ಗೊಂದಲದಲ್ಲಿರಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೇನೊ ಎಂದು ಭಾಸವಾಗುತ್ತಿದೆ.

ವಚನಾನಂದರು ತಮ್ಮ ಭಾಷಣದಲ್ಲಿ ಹೇಳುತ್ತಾ ಲಿಂಗಾಯತವು ಹಿಂದೂ ಧರ್ಮದ ಭಾಗ ಎಂದು ಹೇಳುವಲ್ಲಿ ಅವರ ದ್ವಂದತೆ ಎದ್ದು ಕಾಣುತ್ತದೆ. ಅವರು ಹೇಳಿದರು ” ಹಿಂದೂ ಎನ್ನುವುದು ಮಹಾ ವೃಕ್ಷ ಅದರ ಕೊಂಬೆಗಳು ಉಳಿದೆಲ್ಲಾ ಮತ ಧರ್ಮಗಳು ” ಎಂದು. ಖಂಡಿತ. ಅವರು ಹಿಂದೂ ಎನ್ನುವುದನ್ನು ಯಾವ ರೀತಿಯಾಗಿ ನೋಡುತ್ತಾರೆ ಎನ್ನುವುದು ಅವರು ಸ್ಪಷ್ಟಪಡಿಸಿಲಿಲ್ಲ. ” ಹಿಂದೂ ಎನ್ನುವುದು ಮಹಾ ವೃಕ್ಷ ” ಎನ್ನುವ ವಾಕ್ಯದಲ್ಲಿ ಹಿಂದೂ ಎನ್ನುವುದು ಧರ್ಮವೊ ಅಥವಾ ಅದು ಬದುಕಿನ ಪದ್ದತಿಯೊ ಅಥವಾ ಭೌಗೋಳಿಕ ಅಂಶದಿಂದ ಅದು ಹಿಂದುವೊ ಎನ್ನುವುದು ತಿಳಿಸಿಬೇಕಾಗಿತ್ತು. ಒಂದು ವೇಳೆ ಹಿಂದೂ ಎನ್ನುವುದು ಭೌಗೋಳಿಕ ಅಂಶದಿಂದ ಮತ್ತು ಭೌಗೋಳಿಕ ಸಾಂಸ್ಕೃತಿಯಿಂದ ಹಿಂದೂ ಎನ್ನುವುದಾದರೆ ಅದನ್ನು ಭಾರತ ಪ್ರತಿಯೊಬ್ಬರು ಒಪ್ಪುವವರು. ಈ ನೆಲಮೂಲದ ಎಲ್ಲಾ ಸಮುದಾಯಗಳು ವೈದಿಕ ,ಬೌದ್ದ ಜೈನ ಮುಸ್ಲಿಂ, ಕ್ರೈಸ್ತ ,ಪಾರ್ಸಿ, ಎಲ್ಲರೂ ಹಿಂದುಗಳು ಎನ್ನುವ ಮಾತು ಅಷ್ಟೆ ಸತ್ಯ.

ಆದರೆ ಹಿಂದೂ ಎನ್ನುವುದು ಧರ್ಮದ ಆಧಾರದ ಮೇಲೆ ಹೇಳಿದರೆ ತಮ್ಮ ಮಾತಿಗೆ ಅರ್ಥವೆ ಇಲ್ಲ. ಯಾಕೆಂದರೆ ಹಿಂದೂ ಎನ್ನುವುದು ಧರ್ಮವೆ ಅಲ್ಲ ಅಂತ ಸದನದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ಹೇಳಿದ್ದು ತಮಗೆ ನೆನಪಿಗೆ ಬರಲಿಲ್ಲ. ಬಿಡಿ. ಅವರು ಖಾವಿಧಾರಿಗಳು ಅಲ್ಲ. ಆದರೆ ಕಾವಿ ಧರಿಸಿದ ಪೇಜಾವರ ಶ್ರೀಗಳು ಹಿಂದೂ ಧರ್ಮವಲ್ಲ ನಮ್ಮದು ವೈದಿಕ ಧರ್ಮ, ಬ್ರಾಹ್ಮಣ ಧರ್ಮಕ್ಕೂ ಹಿಂದೂವಿಗೂ ಯಾವುದೇ ಸಂಬಂಧವಿಲ್ಲ ಎಂದು ಒಂದು ಟಿವಿ ಸಂದರ್ಶನದಲ್ಲಿ ಹೇಳಿದ್ದು ತಾವು ಮರೆತಂತಿದೆ. ಅಷ್ಟೇಕೆ ಬಹುತೇಕ ವೈದಿಕ ಮತ ಧರ್ಮದ ಮಠಗಳು ಹಿಂದು ಎನ್ನುವುದು ಧರ್ಮವಲ್ಲ , ಆ ಹಿಂದೂವಿಗೂ ಬ್ರಾಹ್ಮಣರಿಗೂ ಸಂಬಂಧವಿಲ್ಲ ಎಂದು ಹೇಳಿದರು. ಅವರಿಗೆ ಅವರ ಮತ ಧರ್ಮದ ಬಗ್ಗೆ ಸ್ಪಷ್ಟತೆಯಿದೆ. ತಾವೊ ಎಲ್ಲೂ ಗೊಂದಲದಲ್ಲಿದ್ದಿರಿ ಅಥವಾ ತಮ್ಮ ಹೊಟ್ಟೆಗಾಗಿ ಎಡಬಿಡಂಗಿತನದ ಹೇಳಿಕೆಗಳನ್ನು ನೀಡುತ್ತಿದ್ದಿರಿ . ಇದು ಸತ್ಯ.

ಲಿಂಗಾಯತ ಈ ವೈದಿಕ ಧರ್ಮದ ಶೋಷಣೆಯ ವಿರುದ್ದ ಬಂಡಾಯವೆದ್ದ ಒಂದು ಸ್ವತಂತ್ರ ಧರ್ಮ ಎನ್ನುವುದಕ್ಕೆ ವಚನಗಳು ಸಾಕಷ್ಟು ಉಲ್ಲೇಖ ನೀಡತ್ತವೆ. ಇಷ್ಟೆಲ್ಲಾ ಇದ್ದು ವಚನಗಳನ್ನು ಕೇವಲ ಬಾಯಿಯಿಂದ ಉದರಿಸುತ್ತಾ ಮನದಲ್ಲಿ ವೈದಿಕತೆಗೆ ಜೈ ಎನ್ನುವ ನಿಮ್ಮ ಆತ್ಮ ವಂಚನೆಗೆ ಎನೆನ್ನಬೇಕು.

ಇನ್ನೂಬ್ಬ ಪೂಜ್ಯರಾದ ಶಿವಾನಂದ ಸ್ವಾಮಿಗಳು ಹೇಳುತ್ತಾರೆ ” ಓಂ ಶ್ರೀ ಗುರು ಬಸವ ಲಿಂಗಾಯ ನಮಃ ” ಎಂದರೆ ಓಂ ಎನ್ನುವುದು ಹಿಂದುಗಳಾಗುತ್ತದೆ ಅದಕ್ಕೆ ಇತ್ತೀಚಿನ ಪ್ರಗತಿಪರರು ಮತ್ತು ವೈಚಾರಿಕರ ಬಗ್ಗೆ ತಾವು ಮಾಡಿ ವಾಂತಿ ನೋಡಿದರೆ ತಮ್ಮ ಹೊಟ್ಟೆಯಲ್ಲಿ ಎಷ್ಟು ಕಿಚ್ಚು ಇದೆ ಅದನ್ನು ಸಹಿಸದೆ ಈ ರೀತಿಯಾಗಿ ತಾವು ವಾಕರಿಕೆ ಮಾಡಿಕೊಳ್ಳುತ್ತಿರುವುದು ನೋಡಿದರೆ ಆ ಪವಿತ್ರ ಕಾವಿ ತಾವು ದ್ರೋಹ ಮಾಡುತ್ತಿದ್ದಿರಿ ಎನ್ನುವುದು ಸ್ಪಷ್ಟವಾಗಿ ತಮ್ಮ ವಾಕರಿಕೆಯ ಮಾತುಗಳಿಂದ ತಿಳಿಯತ್ತದೆ. ” ಓಂ” ಎನ್ನುವುದು ಕೇವಲ ಹಿಂದುಗಳಿಗೆ ಮಾತ್ರ ಸಂಬಂಧಿಸಿದ್ದು ಎಂದು ಹೇಳುವ ತಮ್ಮ ಮಾತಿನಲ್ಲಿ ಆ ” ಓಂ “ಕಾರದ ವಿಶಾಲತೆ ತಿಳಿಯದೆ ಅದನ್ನು ಸಂಕುಚಿತ ಮಾಡುವ ತಮ್ಮ ಮನಸ್ಥಿತಿ ನಿಜಕ್ಕೂ ಸ್ವಾಮಿತನಕ್ಕೆ ತಕ್ಕದ್ದಲ್ಲ ಅನಿಸುತ್ತದೆ. ಓಂ ಎಂಬುವುದು ಈ ಸೃಷ್ಠಿಯಲ್ಲಿರುವ ಸಕಲ ಜೀವಿಗಳಿಗೆ ಸಂಬಂಧಿಸಿದ್ದು ಎನ್ನುವ ಒಂದು ಸಣ್ಣ ಜ್ಞಾನವು ತಮಗೆ ತಿಳಿಯಲಿಲ್ಲ ಅಂದರೆ ಅದೆಹೇಗೆ.

ಸ್ವಾಮಿಗಳೆ 12 ನೇ ಶತಮಾನದಿಂದ ಹಿಡಿದು 15 ಶತಮಾನದವರಿಗೂ ಸಿಗುವ ತಾಡೋಲೆಗಳಲ್ಲಿ ಎಲ್ಲಿಯೂ ” ಓಂ ಶ್ರೀ ಗುರು ಬಸವ ಲಿಂಗಾಯ ನಮಃ ” ಅಂತ ಇಲ್ಲ. ತಾಡೊಲೆಗಳಲ್ಲಿ “ಶ್ರೀ ಗುರು ಬಸವ ಲಿಂಗಾಯ ನಮಃ ” ಅಂತಾನೆ ಇದೆ. ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ಸಂಪಾದನೆಗೊಂಡ ” ವಚನಗಳ ತಾಡೋಲೆ ” ಎನ್ನುವ ಗ್ರಂಥ ಗಮನಿಸಿ ಅಲ್ಲಿಯೂ ಓಂ ಶ್ರೀಗುರು ಲಿಂಗಾಯ ನಮಃ ಅಂತ ಇಲ್ಲ. ಶ್ರೀ ಗುರು ಬಸವ ಲಿಂಗಾಯ ನಮಃ ಎಂದು ಇದೆ. ಅಷ್ಟೇಕೆ ನಿಮ್ಮ ಶ್ರೇಷ್ಠ ಗ್ರಂಥ ಸಿದ್ದಾಂತ ಶಿಖಾಮಣಿಯ ಮೊದಲ ಪುಟದಲ್ಲಿಯೆ ” ಶ್ರೀ ಗುರು ಬಸವ ಲಿಂಗಾಯ ನಮಃ ” ಅಂತ ಇದೆ. ಅಂದಿನ ಶರಣರೆಲ್ಲರೂ ಬಸವಣ್ಣನನ್ನು ” ಓಂ ಕಾದಿಂದ ಅತ್ತತ್ತ ಬಸವಣ್ಣನೂ ” ಅಂತ ಹೇಳಿದ್ದು ಸುಳ್ಳೇ. ” ಆದಿ ಬಸವಣ್ಣ ಅನಾದಿ ಲಿಂಗವೆಂಬರು , ಹುಸಿ ಹುಸಿ ಈ ನುಡಿಯ ಕೇಳಲಾಗದು ಆದಿ ಲಿಂಗ ಅನಾದಿ ಬಸವಣ್ಣ” ಎಂಬ ಶರಣ ನುಡಿ ಸುಳ್ಳೆ. ಬಸವಣ್ಣನ ಹೆಸರೇಳುತ್ತಾ ಹೊಟ್ಟೆ ಹೊರೆಯುವ ತಮಗೆ ತಾವು ಮಾಡುತ್ತಿರುವುದು ಆತ್ಮದ್ರೋಹ ಎನಿಸುವುದಿಲ್ಲವೇ? . ಹಾಗೆ ಅನಿಸದಿದ್ದರೆ ತಾವು ಕಾವಿತೊಟ್ಟ ನಿಜ ಜಂಗಮನಲ್ಲ. ಕಾವಿ ಖಾಷಾಂಬರ ತೊಟ್ಟು ತಮ್ಮ ಸ್ವಾರ್ಥಕ್ಕಾಗಿ ಶರಣರನ್ನು ವಚನಗಳನ್ನು ತಿರುಚುವ ಬಸವ ದ್ರೋಹಿಗಳು ವಚನ ದ್ರೋಹಿಗಳು.

ತಾವುಗಳೆಲ್ಲಾ ಖಾವಿ ತೊಟ್ಟ ಜಂಗಮರು , ಆ ಜಂಗಮ ದೀಕ್ಷೆ ಸಿಕ್ಕಿದ್ದು ಈ ಲಿಂಗಾಯತದಿಂದಲೆ. ತಮ್ಮ ಜಂಗಮ ದೀಕ್ಷೆ ಕೊಟ್ಟಿದ್ದು ಇದೆ ಶರಣರ ವಚನಗಳಿಂದಲೆ ಎನ್ನುವುದು ಮರೆತಿದ್ದಿರಿ. ತಾವು ಸನಾತನ ಹಿಂದೂ ಧರ್ಮದವರು ಆಗಿದ್ದರೆ ಬಸವಣ್ಣನ ಹೆಸರೇಳುವ ಮಠಪೀಠಗಳನ್ನು ಬಿಟ್ಟು ವೈದಿಕ ಮಠ ಪೀಠಗಳಿಗೆ ಸ್ವಾಮಿಗಳಾಗಿ ತೋರಿಸಿ ನೋಡೋಣ. ಇಂದಿಗೂ ವೈದಿಕ ಧರ್ಮದಂತೆ ತಾವುಗಳು ಶೂದ್ರರರು ಎನ್ನುವುದು ಮರೆಯಬೇಡಿ.ಇಂದಿಗೂ ತಮಗೆ ವೈದಿಕ ಗುಂಡಿಗುಂಡಾರಗಳ ಗರ್ಭಗುಡಿಗೆ ಪ್ರವೇಶವಿಲ್ಲ, ಇಂದಿಗೂ ತಮ್ಮ ಜೊತೆಗೆ ಸಹಪಂಕ್ತಿ ಭೋಜನವಿಲ್ಲ. ಇದನ್ನೆಲ್ಲಾ ಮರೆತು ತಮ್ಮನ್ನು ತಾವು ಮಾರಿಕೊಂಡವರಂತೆ ಬೇರೆಯವರ ಎಂಜಲಿನ ಪ್ರತಿಷ್ಠೆಗೆ ನಿಮ್ಮತನವನ್ನು ಮಾರಿಕೊಳ್ಳುವುದು ಎಷ್ಟು ಸರಿ. ಇನ್ನಾದರೂ ವಾಸ್ತವ ಅರ್ಥ ಮಾಡಿಕೊಳ್ಳಿ. ಬಸವಣ್ಣನ ಹೆಸರಿಲ್ಲದೆ ನಿಮಗೆಲ್ಲಾ ಅಸ್ಥಿತ್ವವಿಲ್ಲ.ಲಿಂಗಾಯತವಿಲ್ಲದೆ ನಿಮಗೆ ಬದುಕೆ ಇಲ್ಲ. ಈ ಸತ್ಯವನ್ನು ತಿಳಿದು ತತ್ವಕ್ಕಾಗಿ ಪ್ರಚಾರ ಮಾಡಿ. ಮಾನವೀಯತೆ ಜೊತೆಗೆ ಇವ ನಮ್ಮವ ಎನ್ನುತ್ತಾ ಎಲ್ಲವನ್ನೂ ಒಳಗೊಂಡು ಸಮಾಜಕ್ಕೆ ದಾರಿ ದೀಪವಾಗಲಿ ಎಂದು ಆಶಿಸುವೆ.

ಶರಣು ಶರಣಾರ್ಥಿಗಳೊಂದಿಗೆ

Screenshot 2024 08 12 11 04 24 40 A23b203fd3aafc6dcb84e438dda678b6 150x150

ಡಾ.ರಾಜಶೇಖರನಾರನಾಳ

About Mallikarjun

Check Also

screenshot 2025 11 23 18 27 47 95 e307a3f9df9f380ebaf106e1dc980bb6.jpg

ಹಿರಿಯ ರಾಜಕಾರಣಿಯಾದ ಕೆ.ಹೆಚ್. ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲು ಒತ್ತಾಯ: ಯಲ್ಲಪ್ಪ ಕಟ್ಟಿಮನಿ.

ಪರಿಶಿಷ್ಟ ಜಾತಿಯ ಹಿರಿಯ ರಾಜಕಾರಣಿಯಾದ ಕೆ.ಹೆಚ್. ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲು ಒತ್ತಾಯ: ಯಲ್ಲಪ್ಪ ಕಟ್ಟಿಮನಿ. Demand …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.