Breaking News

ಗಂಗಾವತಿ:ಲಿಟಲ್ ಹಾರ್ಟ್ಸ್ ಸ್ಕೂಲ್‌ನಲ್ಲಿ ಪುಸ್ತಕ ಪ್ರೇಮಿಗಳ ದಿನಾಚರಣೆ

Gangavati: Book Lovers Day Celebration at Little Hearts School

ಜಾಹೀರಾತು

ಗಂಗಾವತಿ, ನಗರದ.ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಆಗಸ್ಟ್ ೦೯ ರಂದು ರಾಷ್ಟ್ರೀಯ ಪುಸ್ತಕ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಈ ಪುಸ್ತಕ ಪ್ರೇಮಿಗಳ ದಿನವಾದ ಇಂದು ಶಾಲೆಯ ನರ್ಸರಿಯಿಂದ ೧೦ನೇ ತರಗತಿಯ ವಿದ್ಯಾರ್ಥಿಗಳು, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ಶಿಕ್ಷಕಿಯರು, ಆಯಾಗಳು, ವಾಚ್‌ಮನ್‌ಗಳು ವಾಹನ ಚಾಲಕರು ಎಲ್ಲರೂ ೩೦ ನಿಮಿಷ ಬಗೆ ಬಗೆಯ ಅವರಿಗೆ ಇಷ್ಟವಾದ ಪುಸ್ತಕವನ್ನು ಓದಿ ದಿನಾಚರಣೆಗೆ ಮಹತ್ವ ತಂದರು.ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಮಾತನಾಡಿ ಪುಸ್ತಕ ಓದುವುದರಿಂದ ಆಗುವ ಲಾಭಗಳನ್ನು ತಿಳಿಸುತ್ತಾ ಡಾ|| ಬಿ ಆರ್ ಅಂಬೇಡ್ಕರ್, ಜವಾಹರಲಾಲ ನೆಹರು, ಸರ್ ಎಂ ವಿ ವಿಶ್ವೇಶ್ವರಯ್ಯ, ಡಾ|| ರಾಧಾ ಕೃಷ್ಣನ್, ಡಾ|| ಅಬ್ದುಲ್ ಕಲಾಂ ಇವರೆಲ್ಲ ಪುಸ್ತಕಗಳನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ತಿಳಿಸಿದರು.

.ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಿಯಾಕುಮಾರಿ ಮಾತನಾಡಿ ಮಕ್ಕಳಿಗೆ ದಿನನಿತ್ಯ ಪುಸ್ತಕವನ್ನು, ನ್ಯೂಸ್ ಪೇಪರನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರಲ್ಲದೆ IಂS ಹಾಗೂ IPS ಆಗಬೇಕೆಂದರೆ ನಿಮಗೆಲ್ಲ ಪುಸ್ತಕಗಳನ್ನು ಓದುವುದು ಅನಿವರ‍್ಯ ಎಂದು ತಿಳಿಸಿದರು.ಶಾಲೆಯ ಸುಮಾರು ೧೫೦೦ ವಿದ್ಯಾರ್ಥಿಗಳು, ಟೀಚರ್, ಡ್ರೈ ವರ್, ವಾಚ್‌ಮನ್ ಎಲ್ಲರೂ ತುಂಬಾ ಖುಷಿಯಿಂದ ಪುಸ್ತಕವನ್ನು ಓದಿದರು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

About Mallikarjun

Check Also

ಆನೆಗುಂದಿ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ

Progress review of guarantee schemes in Anegundi Gram Panchayat ಗಂಗಾವತಿ: ಸರ್ಕಾರದ ಆದೇಶದಂತೆ ಗ್ಯಾರಂಟಿ ಸಮಿತಿಗಳ ನಡೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.