Breaking News

ಕೆವಿಕೆ ಜ್ಞಾನ ಭಂಡಾರದ ಸಂಕೇತ,ಕೃಷಿ ಸಖಿಯರು ಕೆವಿಕೆಯಅಂಬಾಸಿಡರ್”-ಡಾ.ಕುರುಬರ

Symbol of KVK knowledge repository, agricultural sakhiyars are ambassadors of KVK” – Dr. Kurubara

ಜಾಹೀರಾತು
IMG 20240807 WA0408 300x169


ಗಂಗಾವತಿ: ಕೆ.ವಿ.ಕೆ.ಯ ಗೊಲ್ಡನ್ ಜುಬ್ಲಿ ಜ್ಯೋತಿ ಕಾರ್ಯಕ್ರಮದಲ್ಲಿ ಡಾ. ಕುರುಬರ, ಸಹ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಡಾ.ಕಿರಣ್ ಕುಮಾರ್ , ಪ್ರಭಾವಿ ವಿಶೇಷ ಅಧಿಕಾರಿಗಳು, ಕೃಷಿ ಮಹಾವಿದ್ಯಾಲಯ, ಗಂಗಾವತಿ, ಡಾ. ಗೊವೀದಂಪ್ಪ, ತಾಲೂಕು ಕೃಷಿ ಸಮಾಜದ ಅಧ್ಯಕ್ಷರು, ಡಾ. ಚಂದ್ರಕಾಂತ ನಾಡಗೌಡ, ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ

ಗಂಗಾವತಿ, ಡಾ.ರಾಘವೇಂದ್ರ ಎಲಿಗಾರ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆವಿಕೆ ಗಂಗಾವತಿ, ಕೆವಿಕೆ ವಿಜ್ಞಾನಿಗಳು, ಸಿಬ್ಬಂದಿಗಳು, ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಕೃಷಿ -ಪಶು ಸಖಿಯರು, ರೈತರು ಮತ್ತು ಕೃಷಿ ಮಹಾವಿದ್ಯಾಲಯ, ಗಂಗಾವತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೃಷಿಯಲ್ಲಿ ಕೆವಿಕೆಯ ರೂಪಾಂತರದ ಪ್ರಯಾಣ: ಈ ವರ್ಷದ ಮಾರ್ಚ್ 21 ರಂದು ಕೆವಿಕೆಗಳು ತಮ್ಮ ಸ್ಥಾಪನೆಯ 50 ವರ್ಷಗಳನ್ನು ಪೂರೈಸಿದವು. 1974 ರಲ್ಲಿ ದೇಶದಲ್ಲಿ ಮೊದಲ ಕೆವಿಕೆ (ಪಾಂಡಿಚೇರಿ) ಈಗ ಪುದುಚೇರಿ, ತಮಿಳುನಾಡು ಕೃಷಿ ವಿಶ್ವವಿದ್ಯಾಲಯ ಮದ್ರಾಸಿನ ಅಡಳಿತ ನಿಯಂತ್ರಣದಲ್ಲಿ ಸ್ಥಾಪಿಸಲಾಯಿತು. ಐಸಿಎರ್-1973 ದಿಲ್ಲಿ ಉದಯಪುರದ ಕ್ಯಾಪ್ಟನ್ ಮೊಹನ್ ಸಿಂಗ್ ಮೆಹ್ತಾ ಅವರ ಅಧ್ಯಕ್ಷತೆಯಲ್ಲಿ 1973 ದಿಲ್ಲಿ ಸಮಗ್ರ ಯೋಜನೆಯನ್ನು ರೂಪಿಸಿದರು. ದೇಶವು ಪ್ರಸ್ತುತ 731 ಕೆವಿಕೆಗಳನ್ನು ಹೊಂದಿದೆ ದೇಶದ 545 ಜಿಲ್ಲೆಗಳು ತಲಾ ಒಂದು ಕೆವಿಕೆಗಳನ್ನು ಹೊಂದಿವೆ. ಎರಡು ಕೆವಿಕೆಗಳನ್ನು ಹೊಂದಿರುವ ದೇಶವು 93 ಜಿಲ್ಲೆಯ ಹೊಂದಿದೆ. ಪ್ರಸ್ತುತ ನಮ್ಮ ಕರ್ನಾಟಕದಲ್ಲಿ 33 ಕೆವಿಕೆಗಳನ್ನು ಹೊಂದಿದೆ, ಅದರಲ್ಲಿ ಗೊನಿಕೊಪ್ಪ ಕೆವಿಕೆ 1976 ರಲ್ಲಿ ಸ್ಥಾಪನೆಗೊಂಡಿದದೆ. ಹನಮ್ಮ ಕೆವಿಕೆ 2004 ರ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸ್ಥಾಪನೆಗೊಂಡಿತ್ತು. ಕೃಷಿ ತಂತ್ರಜ್ಞಾನಗಳ ಸ್ಥಳಿಯ ಸೂಕ್ತತೆಯನ್ನು ಗುರುತಿಸಲು ಕ್ಷೇತ್ರ ಪ್ರಯೋಗಗಳನ್ನು ಕಾರ್ಯಗತಗೊಳಿಸುವುದು. ಉತ್ಪಾದನ ಸಾಮರ್ಥ್ಯವನ್ನು ದೃಢಪಡಿಸಲು ರೈತರ ಹೊಲಗಳಲ್ಲಿ ಮುಂಚೂಣಿ ಪ್ರಾತ್ಯಕ್ಷತೆಗಳನ್ನು ಸಂಘಟಿಸುವುದು. ತಂತ್ರಜ್ಞಾನ ಪರಿಶೀಲನೆ ಪರಿಷ್ಕರಣೆ ಮತ್ತು ಪ್ರಾತ್ಯಕ್ಷತೆ ಸಂಬಂಧಿತ ಕೃಷಿ ಜ್ಞಾನ ಹಾಗೂ ಕೌಶಲ್ಯಗಳನ್ನು ರೈತರಲ್ಲಿ ಅಭಿವೃದ್ಧಿ ಪಡಿಸಲು ಹಾಗೂ ಆಧುನಿಕ ತಂತ್ರಜ್ಞಾನ ವಿಷಯಗಳಲ್ಲಿ ವಿಸ್ತರಣಾ ಕಾರ್ಯಕರ್ತರನ್ನು ಸಿದ್ಧಗೊಳಿಸಲು ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ತರಬೇತಿ ಏರ್ಪಡಿಸಲಾಗುವುದು. ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಉತ್ತಮ ಗುಣಮಟ್ಟದ ಬೀಜ, ಸಸಿ, ಜಾನುವಾರು, ಮೀನು, ಜಾನುವಾರು ಉತ್ಪನ್ನಗಳನ್ನು ಉತ್ಪಾದಿಸಿ ರೈತ ಸಮುದಾಯಕ್ಕೆ ಒದಗಿಸುವುದು. ಜಿಲ್ಲೆಯ ಕೃಷಿ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ದಿಕ್ಕಿನಲ್ಲಿ ಕಾರ್ಯನಿರತರಾಗಿರುವ ಸಾರ್ವಜನಿಕ, ಖಾಸಗಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕ್ರಮಗಳನ್ನು ಬೆಂಬಲಿಸಲು ಕೃಷಿ ತಂತ್ರಜ್ಞಾನಗಳ ಮಾಹಿತಿ ಹಾಗೂ ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. “ರೈತರಿಗೆ ಕೃಷಿ ಉತ್ಪಾದನೆಯಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಉತ್ತಮ ಗುಣಮಟ್ಟದ ಬೀಜ, ಸಸಿ ಹಾಗೂ ಕೃಷಿ ಪರಿಕರಗಳನ್ನು ನೀಡುವುದು, ಕೃಷಿಯಲ್ಲಿ ಸ್ವ ಉದ್ಯೋಗ ಕೌಶಲ್ಯ ತರಬೇತಿಯನ್ನು ನೀಡುವುದು, ಒಟ್ಟು ನಮ್ಮ ದೇಶದ ಕೆವಿಕೆಯಲ್ಲಿ 1.84 ಲಕ್ಷಕ್ಕೂ ಹೆಚ್ಚು ಕ್ಷೇತ್ರ ಪ್ರಯೋಗಗಳ ಪರಿಶೀಲನೆ, 12 ಲಕ್ಷಕ್ಕೂ ಹೆಚ್ಚು ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಪ್ರಾತ್ಯಕ್ಷತೆ, ಪ್ರತಿ ಕೆವಿಕೆಯು 5 ಸಾವಿರಕ್ಕೂ ಹೆಚ್ಚು ರೈತರನ್ನು ಲ್ಯಾಬ್ ಟು ಲ್ಯಾಂಡ್ ಪ್ರಾತ್ಯಕ್ಷಿಕೆಯನ್ನು ಒಳಗೊಂಡಿದೆ, ಕೃಷಿ -ಪಶು ಸಖಿಯರು ಹೊಸದಾಗಿ ಕೆವಿಕೆಯ ವಿಸ್ತರಣಾ ಕಾರ್ಯಕರ್ತರಾಗಿ ಹೊರಹೊಮ್ಮುತ್ತಿದ್ದಾರೆ”- ಡಾ. ರಾಘವೇಂದ್ರ ಎಲಿಗಾರ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆವಿಕೆ ಗಂಗಾವತಿ. “ಪ್ರಸ್ತುತ ನಮ್ಮ ದೇಶದ ಸಂಸತ್ತಿನಲ್ಲಿ ಆಹಾರ ಭದ್ರತಾ ಮಸೂದೆ ಕಾಯ್ದೆ ಜಾರಿ ಮಾಡಲಾಗಿದ್ದು , ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ 1 ಟಿಫಿನ್, 2 ಊಟ ದೂರಕುತ್ತಿದೆ ಅಂದರೆ ಅದು ರೈತರು ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಾಧನೆ, ಕೃಷಿ ವಿಜ್ಞಾನ ಕೇಂದ್ರವು ಜ್ಞಾನದ ಭಂಡಾರದ ಸಂಕೇತ, ಪೌಷ್ಟಿಕ ಆಹಾರ ಭದ್ರತೆ ಕಾಯ್ದೆ ಜಾರಿ ಮಾಡಲಾಗಿದ್ದು, ಆಹಾರದ ಕೊರತೆ ನಿವಾರಿಸಲು ಕೆವಿಕೆಗಳು ಮಹತ್ತರ ಪಾತ್ರವಹಿಸಿವೆ, ಕೃಷಿ ಸಖಿಯರು ಕೆವಿಕೆಯ ಅಂಬಾಸಿಡರ್ ಗಳು ದೇಶದ ರೈತರಿಗೆ ಕೃಷಿ ವಿಸ್ತರಣಾ ಸೇವೆ ಒದಗಿಸಲು ಕೃಷಿ ಸಖಿಯರ ಕರ್ತವ್ಯ ಬಹಳ ಮುಖ್ಯ” – ಡಾ. ಕುರುಬುರ, ಸಹಿ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ ರಾಯಚೂರು .

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.