Breaking News

ಹೆಸರು ಬೆಳದ ರೈತರು ಸಾಲದಸೂಳಿಗೆ,,ಬೆಂಬಲ ಬೆಲೆ, ಬೆಳೆ ವಿಮೆ ನೀಡಲು ರೈತರಆಗ್ರಹ,

Nameless farmers are in debt. Farmers’ demand for support price, crop insurance

ಜಾಹೀರಾತು


ವರದಿ : ಪಂಚಯ್ಯ ಹಿರೇಮಠ,,,
ಕೊಪ್ಪಳ : ಮೋಡ ಕವಿದ ವಾತಾವರಣ, ಮಳೆ ಕೊರತೆ, ಕೂಲಿ ಆಳಿನ ಸಮಸ್ಯೆಯಿಂದ ತಾಲೂಕಿನಾದ್ಯಂತ ರೈತರು ಹೈರಾಣಾಗಿದ್ದಾರೆ.

ಕಳೆದ ಬಾರಿ ಬಂದ ಬೆಳೆಯ ನಿರೀಕ್ಷೇ ಹೊಂದಿ, ತಾಲೂಕಿನಾದ್ಯಂತ ರೈತರು ಈ ಬಾರಿಯು ಹೆಸರು ಬೆಳೆಯಲು ಮುಂದಾಗಿದ್ದು ಅವರ ನಿರೀಕ್ಷೆ ಹುಸಿಯಾಗಿದ್ದು ರೈತರಿಗೆ ಗರ ಸಿಡಿಲು ಬಡಿದಂತಾಗಿದೆ.

ಒಂದು ಎಕರೆ ಬಿತ್ತನೆಗೆ ಹತ್ತರಿಂದ ಹನ್ನೇರಡು ಸಾವಿರ ರೂಪಾಯಿ ಹಾಕಿ ಬಿತ್ತನೆ ಕಾರ್ಯವನ್ನು ಮಾಡಿದ್ದರು.

ಈ ಕುರಿತು ಕುಕನೂರಿನ ದೇವಪ್ಪ ಮೇಟಿಯವರು ಮಾಧ್ಯಮದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡು ಮಾತನಾಡಿ, ನಮ್ಮ ಸ್ವಂತ ಜಮೀನು ನಾಲ್ಕು ಎಕರೆ ಇದೆ. ಒಂದು ಎಕರೆಗೆ ಹತ್ತರಿಂದ ಹನ್ನೇರಡು ಸಾವಿರ ಹಾಕಿ ಹೆಸರನ್ನು ಬಿತ್ತನೆ ಮಾಡಿದ್ದು, ಬೇರೆಯವರ ಇಪ್ಪತ್ತು ಎಕರೆ ಕೊರು, ಲಾವಣಿಯಂತೆ ಮಾಡಿದ್ದೇವೆ.

ಸರಿಯಾಗಿ ಮಳೆಯಾಗದೇ ಮೋಡ ಕವಿದ ವಾತಾವರಣದಿಂದ ಬೆಳೆಗಳು ಅಷ್ಟಕಷ್ಟೇ ಆಗಿದ್ದು ಈಗ ಕಟಾವಿಗೆ ಬಂದಿದ್ದು, ಕೂಲಿ ಆಳುಗಳನ್ನು ಹುಡಕಿದರು ದೊರೆಯುತ್ತಿಲ್ಲಾ, ದೊರೆತರು ಒಬ್ಬರಿಗೆ ನಾಲ್ಕು ನೂರು ರೂಪಾಯಿ ಕೂಲಿ ನೀಡಬೇಕು, ಒಂದು ಎಕರೆಗೆ ಮೂರರಿಂದ ನಾಲ್ಕು ಸಾವಿರ ಕೂಲಿ ನೀಡಿ ಹೆಸರು ತೆಗೆದರೇ ಕೈಯಿಂದ ಹಣ ಹೋಗುತ್ತದೆ.

ಯಂತ್ರಗಳಿಂದ ಕಟಾವು ಮಾಡಿಸಿದರೇ ಎಕರೆಗೆ ಎರಡು ಸಾವಿರ ತಗಲುತ್ತದೆ. ಅನಿವಾರ್ಯವಾಗಿ ನಾವೆಲ್ಲ ರೈತರು ಯಂತ್ರಗಳ ಮೊರೆ ಹೋಗುತ್ತಿದ್ದೇವೆ.
ಈಗ ಮಾರುಕಟ್ಟೆಯಲ್ಲಿ ಕ್ವೀಂಟಲ್ ಹೆಸರಿಗೆ ಐದರಿಂದ ಆರು ಸಾವಿರ ರೂಪಾಯಿಗಳು ಇದ್ದು, ನಾವು ವ್ಯಯಿಸಿದಷ್ಟು ಹಣ ನಮಗೆ ವಾಪಸ ಆಗುತ್ತಿಲ್ಲ, ಆಳುಗಳಿಂದ ಕಟಾವು ಮಾಡಿದ ಹೆಸರು ಬೆಳೆಗೆ ಏಳರಿಂದ ಎಂಟು ಸಾವಿರ ರೂಪಾಯಿ, ಯಂತ್ರಗಳಿಂದ ಕಟಾವು ಮಾಡಿದರೆ ಐದರಿಂದ ಆರು ಸಾವಿರ ರೂಪಾಯಿ ದೊರೆಯುತ್ತದೆ.

ಯಂತ್ರಗಳಿಂದ ಕಟಾವು ಮಾಡಿದರೆ ಅಲ್ಪ ಸ್ವಲ್ಪ ಭೂಮಿಯಲ್ಲಿ ಉಳಿದುಬಿಡುತ್ತದೆ ಹೀಗಾದರೇ ನಮ್ಮ ರೈತರ ಪಾಡೇನು. ಈ ಕಾರಣದಿಂದಲೇ ರಾಜ್ಯದಲ್ಲಿ ಪ್ರತಿದಿನ ರೈತರ ಆತ್ಮಹತ್ಯೆಗಳಂತ ಪ್ರಕರಣಗಳು ಜರುಗುತ್ತಿರುವುದು ಎಂದರು.

ಈ ಎಲ್ಲವನ್ನು ಅರಿತಿರುವ ಜನಪ್ರತಿನಿಧಿಗಳು, ಸರಕಾರದ ಅಧಿಕಾರಿಗಳು, ರೈತರು ಬೆಳೆದ ಹೆಸರು ಬೆಳೆಗೆ ಬೆಂಬಲ ಬೆಲೆಯನ್ನು ನೀಡಬೇಕು ಎಂದು ಅವರು ಹೇಳಿದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.