Breaking News

ಮನೆಯಿಂದ ಮನೆಗೆ ವಚನ ಜೋತಿ ಕಾರ್ಯಕ್ರಮಕ್ಕೆ ಚಾಲನೆ

Door to door Vachana Joti program launched

ಜಾಹೀರಾತು

ಇಂದು ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಹಾಗು ಅಕ್ಕನಾಗಲಾಂಬಿಕ ಮಹಿಳಾ ಗಣದ ವತಿಯಿಂದ, ಹಮ್ಮಿಕೊಂಡಿರುವ ಈ ಕಾರ್ಯಕ್ರಮ, ರವಿವಾರ ದಿನ, ಬೆಳಿಗ್ಗೆ ಗುರು ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮದಿಂದ ಜೋತಿ ಹೊತ್ತಿಸಿಕೊಂಡು ಬರಲಾಯಿತು. ಚಾಲನೆಗೆ ವೇದಿಕೆ ಸಜ್ಜುಗೊಳಿಸಿ, ಸಂಜೆಯ ಸಮಯ ಗುಳೆ ಗ್ರಾಮಕ್ಕೆ ಜೋತಿ ಬರುತಿದ್ದಂತೆ, ಅತ್ಯಂತ ಸಂಭ್ರಮದಿಂದ ವಚನ ಜೋತಿಯನ್ನ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮ ಚಾಲನೆಗೊಳಿಸಿ ಮಾತನಾಡಿದ ಶರಣ ವೀರಭದ್ರಪ್ಪ ಕುರಕುಂದ ರಾಯಚೂರು ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರು, ಇವರು ಮಾತನಾಡಿ, ವರ್ಷಕ್ಕೊಮ್ಮೆ ಬರುವ ಈ ಶ್ರಾವಣ ಮಾಸ ಶಿವನನ್ನ ವಲಿಸಿಕೊಳ್ಳುವ ಮಾಸ. ಸು- ಸಂಸ್ಕೃತಿ ಕಲಿಯುವ ಮಾಸ ಇದಾಗಿದೆ. ಬಸವ ಪರ ಸಂಘಟಕರು ಮಾಡುವ ಈ ಕಾರ್ಯ ಶ್ಲಾಘನೀಯವಾದದ್ದು. ಇಂದಿನ ದಿನಮಾನದಲ್ಲಿ ಅರಿವಿನ ಪ್ರಜ್ಞೆ ಇದ್ದರೂ ಕೂಡ ಅರಿತುಕೊಳ್ಳದೆ, ಕೊಲೆ, ಸುಲಿಗೆ, ಸ್ತ್ರೀಯರ ಮೇಲೆ ನಡೆಯುವಂತ ಶೋಷಣೆ ಅತ್ಯಾಚಾರ ಹೆಚ್ಚಾಗುತ್ತಿವೆ. ಕಾರಣ ಅವೈಜ್ಞಾನಿಕತೆ ಮತ್ತು ಅರ್ಥವಿಲ್ಲದ ಸಂಸ್ಕೃತಿಯಿಂದ. ಅದಕ್ಕಾಗಿ ಇಂತಹ ಅರ್ಥವಿಲ್ಲದ ಸಂಸ್ಕೃತಿ ಹೊಂದಿರುವ ಜನ ಸಮುದಾಯಕ್ಕೆ, ಲಿಂಗ ಬೇದ, ವರ್ಗಬೇದ, ವರ್ಣಬೇದವಿಲ್ಲದ ಬಸವಾದಿ ಶರಣರ ವಚನ ಸಾಹಿತ್ಯ , ಮನೆ ಮತ್ತು ಮನ ಪರಿವರ್ತನೆ ಗೆ ಮನೆ ಮದ್ದಾಗಿದೆ. ಈ ವಚನ ಸಾಹಿತ್ಯದ ಮನೆ ಮದ್ದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳಿ ಬದುಕಿದರೆ ಪಾವನರಾಗುತ್ತೇವೆ ಎಂದು ತಿಳಿಸಿದರು.

ಗುಳೆ ಗ್ರಾಮದ ರಾಷ್ಟ್ರೀಯ ಬಸವ ದಳ ಗೌರವಾಧ್ಯಕ್ಷ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತಿ ಪಿ ಎಸ್ ಐ ಇವರು ಮಾತನಾಡಿ, ಈ ಶ್ರಾವಣ ಮಾಸದ ೩೦ ದಿನಗಳ ಕಾಲ ೩೦ ಸಂಜೆ ೬ ರಿಂದ ೮ ರವರೆಗೆ ಸಾಮೂಹಿಕ ಪ್ರಾರ್ಥನೆ, ಒಂದಷ್ಟು ವಚನ ಗಾಯನ, ಜೊತೆಗೆ ವಚನ ವಿವರಣೆ – ನಿರಂತರವಾಗಿ ೩೦ ದಿನಗಳೂ ನಡೆಯುವ ನಮ್ಮ ಈ ಕಾರ್ಯಕ್ರಮ ಮನೆಯಿಂದ ಮನಕ್ಕೆ ಕನ್ನಡ ಸಂಸ್ಕೃತಿಯನ್ನು ಹರಡುತ್ತಿದೆ. “ಪಂಪನಿಂದ ಕುವೆಂಪುವರೆಗೆ” ಮಾಲಿಕೆಯಡಿ ಕನ್ನಡದ ಪ್ರಸಿದ್ಧ ಕವಿಗಳು – ವಚನಕಾರರು – ದಾಸಶ್ರೇಷ್ಟರು -ತತ್ವಪದಕಾರರು – ಆಧುನಿಕ ಕವಿಗಳ ಪರಿಚಯವನ್ನು ಜನಸಾಮಾನ್ಯರಿಗೆ ಮಾಡಿಕೊಟ್ಟು, ಅದರೊಂದಿಗೆ ಸಂಗೀತದ ಮಧುರತೆಯೊಂದಿಗೆ ಮನೆಯಿಂದ ಮನೆಗೆ; ಮನದಿಂದ ಮನಕ್ಕೆ ಸಂಸ್ಕೃತಿಯ ಸಿಂಚನ ಉಣಬಡಿಸುವ ಕಾರ್ಯ ಅರ್ಥಗರ್ಭಿತವಾದದ್ದು. ಆಸಕ್ತಿಯಿಂದ ಮನೆಯಂಗಳದಲ್ಲಿ ಸಂಗಮಗೊಂಡು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ಯಾನ, ಸಾಮೂಹಿಕ ಪ್ರಾರ್ಥನೆ, ಗೀತ ಗಾಯನ, ವಚನ ಸಂವಾದ – ವ್ಯಾಖ್ಯಾನಗಳ ಮೂಲಕ ಈಗ ವಚನ ಶ್ರಾವಣ ನಡೆಸುವುದರಿಂದ ಜನ ಮನಗಳ ಪರಿವರ್ತನೆ ಆಗಲು ಸಾಧ್ಯ ಇದೆ. ಮನೆ ಮನವೂ ಅನುಭವ ಮಂಟಪವಾಗಬೇಕು ಎಂಬ ಸತ್ ಸಂಕಲ್ಪ ನಮ್ಮದಾಗಿದೆ ಎಂದರು. ಕಾರ್ಯಕ್ರಮದ ಪ್ರಥಮಲ್ಲಿ ಪ್ರಾಸ್ತಾವಿಕ ಮಾತನಾಡಿ ಬಸವರಾಜ ಹೂಗಾರ, ಇವರು ಮಾತನಾಡಿ, ಇಂದಿನ ದಿನಮಾನದಲ್ಲಿ ಹಳ್ಳಿಗಾಡಿನ ಜನ ಸಮುದಾಯ, ಕಾಯಕದಲ್ಲಿ ಮತ್ತು ದವಸ ಧಾನ್ಯ, ದಾಸೋಹ ಸೇವೆ ಮಾಡುವಲ್ಲಿ ಬಹಳ ಶ್ರೇಷ್ಠರು.
ಆದರೆ ಸಾಂಸ್ಕೃತಿಕವಾದ ಜ್ಞಾನದಲ್ಲಿ ಕನಿಷ್ಠರು. ಆ ಕಾರಣದಿಂದ ಗ್ರಾಮೀಣ ಪ್ರದೇಶದಲ್ಲಿ ಹಲವಾರು ರೀತಿ ಇರುವ ಮೌಡ್ಯತೆ ಆಚರಣೆಗೆ ಬಲಿಯಾಗಿ ಬುದ್ದಿಯಲ್ಲಿ ಬಡವರಾಗಿದ್ದಾರೆ. ಅದಕ್ಕಾಗಿ ಶ್ರಾವಣ ಮಾಸ ನೆಪ ಮಾಡಿಕೊಂಡು ” ಮನೆ ಮನೆಗೆ ವಚನ ಜ್ಯೋತಿ” ಕಾರ್ಯಕ್ರಮ ಎಂಬ ಶೀರ್ಷಿಕೆ ಇಟ್ಟುಕೊಂಡು,
ವಚನಕಾರರನ್ನು ಪರಿಚಯಿಸುವ, ವಚನ ಸಂಸ್ಕೃತಿಯನ್ನು ಪಸರಿಸುವ ಪ್ರಧಾನ ಆಶಯವುಳ್ಳ ಈ ಕಾರ್ಯಕ್ರಮ ಸಂಗೀತದೊಂದಿಗೆ ಸಾಹಿತ್ಯದ ಕಂಪನ್ನು, ವಚನಕಾರರ ವಿಚಾರಗಳನ್ನು, ವಚನಗಳ ಸಾರಸತ್ವವನ್ನು ಆಸಕ್ತರ ಮನೆಯಂಗಳದಲ್ಲಿ ವಚನ ಶ್ರಾವಣವಾಗಿ ರೂಪಾಂತರಗೊಂಡು ವಚನಕಾರರ ವಿಚಾರಕ್ರಾಂತಿಯನ್ನು ಬಿತ್ತುತ್ತಿರುವುದೇ ನಮ್ಮ ಸಂಘಟನೆಯ ಉದ್ದೇಶ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಪೂಜ್ಯ ಶಿವಾನಂದ ಸ್ವಾಮಿ, ಶಿವಾನಂದ ಆಶ್ರಮ ಮಕ್ಕಳ್ಳಿ ಇವರು ಸಾನಿದ್ಯ ವಹಿಸಿ ಆಶಿರ್ವಚನ ನೀಡಿದರು. ಪ್ರಮುಖರಾಗಿ ಆಗಮಿಸಿ ಮಾತನಾಡಿದ, ಶರಣೆ ಅರ್ಚನಾ ಗವಿಶ್ ಶಶಿಮಠ, ಜಾಗತಿಕ ಲಿಂಗಾಯತ ಧರ್ಮ ಮಹಾ ಸಭಾ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಕೊಪ್ಪಳ, ಕೊಟ್ರಪ್ಪ ಸೇಡದ್, ನಂದಯ್ಯ ಹಿರೇಮಠ, ಮಂಗಳಾಪುರ. ಶಿವಬಸಯ್ಯ ಹಿರೇಮಠ, ಕಳಕಪ್ಪ ಹಡಪಾದ ದೇವಪ್ಪ ಕೋಳೂರು, ನಾಗನಗೌಡ ಜಾಲಿಹಾಳ, ಅಮರೇಶಪ್ಪ ಬಳ್ಳಾರಿ ಬಸವ ಕೇಂದ್ರದ ಅಧ್ಯಕ್ಷರು ಮರಕಟ್ಟ, ಈರಮ್ಮ ಕೊಳ್ಳಿ, ಇವರು ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶರಣ ರೇಣುಕಪ್ಪ ಮಂತ್ರಿ ಅಧ್ಯಕ್ಷ ರಾಷ್ಟ್ರೀಯ ಬಸವ ದಳ ಗುಳೆ, ಶರಣಪ್ಪ ಹೊಸಳ್ಳಿ, ಶಿವಪುತ್ರಪ್ಪ, ಲಿಂಗನಗೌಡ, ದೇವೇಂಪ್ಪ, ಹನಮೇಶ್, ರಾಷ್ಟ್ರಪತಿ, ನಿಜಲಿಂಗಪ್ಪ, ನಿಂಗಪ್ಪ ವಿರುಪಣ್ಣ ಮಂತ್ರಿ, ಮಲ್ಲಿಕಾರ್ಜುನ, ಬಸವರಾಜ ಕೋಳೂರು ಹಾಗು ಮಹಿಳಾ ಗಣದ ಸಾವಿತ್ರಮ್ಮ ಆವಾರಿ, ಶರಣಮ್ಮ ಹೊಸಳ್ಳಿ, ಶಂಕ್ರಮ್ಮ, ಚನ್ನಮ್ಮ, ನಾಗಮ್ಮ, ಗುರುಲಿಂಗಮ್ಮ ಮಂತ್ರಿ ಸೇರಿದಂತೆ ಇತರರು ಪಾಲ್ಗೊಂಡ ಕಾರ್ಯಕ್ರಮ ಯಶಸ್ವಿಗೊಳಿಸಿದರು.
✍️ ಬಸವರಾಜ ಎಸ್ ಹೂಗಾರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ

About Mallikarjun

Check Also

ಕೃಷ್ಣಾಪೂರ ಡಗ್ಗಿ ಅಂಗನವಾಡಿಕೇಂದ್ರದಲ್ಲಿಪೋಷಣಾಭಿಯಾನ,ಉಡಿತುಂಬುವ ಕಾರ್ಯಕ್ಕೆ ಚಾಲನೆ

Krishnapura Daggi Anganwadi Center launched nutrition drive ಪೋಷಣಾಭಿಯಾನದ ಪರಿಣಾಮ ಅಪೌಷ್ಠಿಕತೆ ದೂರವಾಗುತ್ತಿದೆ:ಇಒ ಲಕ್ಷ್ಮಿದೇವಿ*ಕೃಷ್ಣಾಪೂರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.