ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್ ಪೋನ್ ವಿತರಿಸಿದ ಶಾಸಕ ಎಂ ಆರ್ ಮಂಜುನಾಥ್ .

Mallikarjun
1 Min Read

ವರದಿ :ಬಂಗಾರಪ್ಪ ಸಿ

ಹನೂರು:ಬಾಲ್ಯದಲ್ಲೆ ಶಾಲಾ ಮಕ್ಕಳ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿರ ಪಾತ್ರ ಬಹಳ ದೊಡ್ಡದಾಗಿದ್ದು ಅಂತಹವರ ಕಾರ್ಯವನ್ನು ಸರ್ಕಾರ ಗುರುತಿಸುತ್ತಿರುವುದು ಸಂತೋಷದ ವಿಷಯ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು .
ಹನೂರು
ಪಟ್ಟಣದ ಲೋಕಪಯೋಗಿ ಇಲಾಖೆಯ ವಸತಿಗೃಹ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಾಮರಾಜನಗರ ಇವರ ವತಿಯಿಂದ ಏರ್ಪಡಿಸಲಾಗಿದ್ದ  ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರು ಮಕ್ಕಳ ಪಾಲಿಗೆ ಎರಡನೇ ತಾಯಿಯರಂತೆ
ಪೋಷಕರು ತಮ್ಮ ದಿನನಿತ್ಯದ ಕಾರ್ಯದಲ್ಲಿ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಾರೆ. ಅವರ ಲಾಲನೆ ಪಾಲನೆ ಮಾಡುವುದರ ಜೊತೆಗೆ
ಶಾಲಾ ಶಿಕ್ಷಣ ಪೂರ್ವದ ಉತ್ತಮ ಶಿಕ್ಷಣವನ್ನು ನೀಡುವತಿರಬೇಕು ಎಂದರು,
ಹಾಗಯೆ
ಪ್ರಸ್ತುತ್ತ ವಿತರಣೆ ಮಾಡುತ್ತಿರುವ ಸ್ಮಾರ್ಟ್ ಫೋನಿನಿಂದ ಮಕ್ಕಳಿಗೆ ಉತ್ತಮ ಸೇವೆ ಕಲ್ಪಿಸಿ ಕಲಿಕೆಗೆ ಗಮನ ನೀಡಬೇಕಾಗಿದೆ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ  ತಹಸಿಲ್ದಾರ್ ಗುರುಪ್ರಸಾದ್, ತಾಲೂಕು ಪಂಚಾಯಿತಿಕಾರ್ಯನಿರ್ವಹಣಾಧಿಕಾರಿ ಉಮೇಶ್, ಸಿ.ಡಿ.ಪಿ.ಓ  ನಂಜಮಣಿ, ಜಿಲ್ಲಾ ಸಂಯೋಜಕರಾದ ಚೇತನ್ ಕುಮಾರ್, ಮೇಲ್ವಿಚಾರಕಿ ಗೌಶಿಯ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಹಾಜರಿದ್ದರು.

Share This Article
Leave a Comment