
ಕಲ್ಯಾಣ ಸಿರಿ ,,,,,Impact,,,,,
ವರದಿ : ಫಲ ಶ್ರುತಿ

( ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಸಾರ್ವಜನಿಕರು )
ಎನ್ನುವ ತಲೆ ಬರಹದಡಿ ಪ್ರಕಟಗೊಂಡಿರುವ ವರದಿಗೆ ಎಚ್ಚೆತ್ತುಕೊಂಡ ಪಟ್ಟಣ ಪಂಚಾಯಿತಿ,,,
ಕೊಪ್ಪಳ : ಕುಕನೂರು ಪಟ್ಟಣದ ಮುಖ್ಯ ಭಾಗವಾದ ಹಾಗೂ ಪಟ್ಟಣದ ಹಳೆಯ ಊರು ಎನ್ನುವ ಹಣೆ ಪಟ್ಟಿ ಹೊಂದಿರುವ ಕೋಳಿಪೇಟೆಯ ಪ್ರಮುಖ ರಸ್ತೆ ಹಾಗೂ ಮಹಾಮಾಯ ದೇವಸ್ಥಾನದ ಪಾದಗಟ್ಟೆಯಿಂದ ಹಿಡಿದು ಸಂಪೂರ್ಣ ಸಂತೆ ಬಜಾರ, ಹಾಗೂ ಬಸ್ ನಿಲ್ದಾಣದ ಹತ್ತಿರ, ಕೆಇಬಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಇನ್ನೂ ಕಲವೇಡೆಗಳಲ್ಲಿ ಇದೇ ರೀತಿಯಾಗಿ ಮಲಿನ ನೀರು ನಿಂತುಕೊಳ್ಳುತ್ತಿರುವು ಗಮನಕ್ಕೆ ಬಂದಿದ್ದು ಶೀಘ್ರದಲ್ಲಿಯೇ ಸ್ವಚ್ಚತೆ ಕೈಗೊಂಡು ಚರಂಡಿಯ ಕಲುಷಿತ ನೀರನ್ನು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಆರೋಗ್ಯ ನೀರಿಕ್ಷಕಿ ರಾಜೇಶ್ವರಿಯವರು ತಿಳಿಸಿದರು.
ಚಿತ್ರ 1, ಜೆಸಿಬಿ ಮೂಲಕ ಸ್ವಚ್ಛತೆಗೆ ಮುಂದಾದ ಪಟ್ಟಣ ಪಂಚಾಯಿತಿ.
ಚಿತ್ರ 2, ಚರಂಡಿಯಲ್ಲಿ ತುಂಬಿದ್ದ ಪ್ಲಾಸ್ಟಿಕ್ ಬಾಟಲ್, ಹಾಗೂ ಘನ ತ್ಯಾಜ್ಯ ಹೋರ ತೆಗೆದಿರುವುದು.
ವರದಿ : ಪಂಚಯ್ಯ ಹಿರೇಮಠ ಕೊಪ್ಪಳ,,,,
Kalyanasiri Kannada News Live 24×7 | News Karnataka
