Four new buses from Sri Male Mahadeshwara Swamy Development Authority launched by In-charge Minister Venkatesh
ವರದಿ : ಬಂಗಾರಪ್ಪ ಸಿ ಹನೂರು .
ಹನೂರು: ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ನೂತನ ಬಸ್ಸುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೆಶ್ ಚಾಲನೆ ನೀಡಿದರು . ನಂತರ ಮಾತನಾಡಿದ. ಅವರು ದೇವಾಲಯದ ವತಿಯಿಂದ ಹಲವಾರು ವರ್ಷಗಳಿಂದ ಮಹದೇಶ್ವರ ಬೆಟ್ಟದಿಂದ ಕನಕಪುರ, ಮಾರ್ಗವಾಗಿ ಬೆಂಗಳೂರಿಗೆ 2 ಬಸ್, ಮದ್ದೂರು ಮಾರ್ಗವಾಗಿ ಒಂದು ಬಸ್, ಗುಂಡ್ಲುಪೇಟೆಗೆ ಒಂದು ಬಸ್, ನಂಜನಗೂಡಿಗೆ ಒಂದು ಬಸ್, ಮೈಸೂರಿಗೆ ಮೂರು ಬಸ್‌ಗಳನ್ನು ಭಕ್ತರ ಅನುಕೂಲಕ್ಕಾಗಿ ಆರಂಭಿಸಲಾಗಿತ್ತು.
ಬಸ್‌ಗಳು ಹಾಳಾಗಿದ್ದ ಕಾರಣ ಸುಮಾರು 4 ವರ್ಷಗಳಿಂದಲೂ ಗುಂಡ್ಲುಪೇಟೆ, ಮೈಸೂರಿಗೆ ತೆರಳುವ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು. ಭಕ್ತರ ಕೋರಿಕೆಯ ಮೆರೆಗೆ ಪ್ರಾಧಿಕಾರದಿಂದ ನಾಲ್ಕು ಬಸ್‌ಗಳನ್ನು ಖರೀದಿಸಿದ್ದು, ಮಹದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬಸ್‌ಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ,ಸಚಿವರು ಚಾಲನೆ ನೀಡಿದ್ದೆವೆ ಎಂದರು . ಇದೇ ಸಂದರ್ಭದಲ್ಲಿ ಶ್ರೀ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕರುಗಳಾದ ಸಿ.ಪುಟ್ಟ ರಂಗಶೆಟ್ಟಿ, ಎ.ಆರ್.ಕೃಷ್ಣ ಮೂರ್ತಿ,ಎಂ.ಆರ್.ಮಂಜುನಾಥ್, ಎಚ್.ಎಂ.ಗಣೇಶ್ ಪ್ರಸಾದ್,ವಿಧಾನ ಪರಿಷತ್ತಿನ ಸದಸ್ಯರಾದ ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಆರ್ ನರೇಂದ್ರ ,ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್,ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಉಪವಿಭಾಗಾಧಿಕಾರಿ ಮಹೇಶ್, ಉಪ ಕಾರ್ಯದರ್ಶಿ ಎಲ್ ಚಂದ್ರಶೇಖರ್ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಹಾಗೂ ಪ್ರಾಧಿಕಾರದ ನೌಕರರು ಪಾಲ್ಗೊಂಡಿದ್ದಾರೆ.