Breaking News

ಸಾವಳಗಿ ಗ್ರಾಂ ಪಂ: ಅಧ್ಯಕ್ಷರಾಗಿ ಜಿನ್ನುಮತಿ, ಉಪಾಧ್ಯಕ್ಷರಾಗಿ ಕವಿತಾ ಆಯ್ಕೆ

Savalagi Gram Panchayat: Jinnumati elected as President, Kavita as Vice President
Image

ಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಗ್ರಾಮ ಪಂಚಾಯತ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ಗ್ರಾಮ ಪಂಚಾಯತಿಯು ಮತ್ತೆ ಬಿಜೆಪಿ ಮಡಿಲಿಗೆ. ಜಾನಪದ ಪರಿಷತ್ ತಾಲೂಕ ಮಟ್ಟದ ಅಧ್ಯಕ್ಷರಾದ ಪಾರ್ಶ್ವನಾಥ ಉಪಾಧ್ಯ ಅವರ ಧರ್ಮಪತ್ನಿಯಾದ ಶ್ರೀಮತಿ ಜಿನ್ನುಮತಿ ಪಾರ್ಶ್ವನಾಥ ಉಪಾಧ್ಯ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಕವಿತಾ ಸುನೀಲ್ ಪಾಟೋಳ್ಳಿ ಅವರು ಆಯ್ಕೆಯಾಗಿದ್ದಾರೆ.

ಜಾಹೀರಾತು

ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷೆಯಾದ ಶ್ರೀಮತಿ ಜಿನ್ನುಮತಿ ಪಾರ್ಶ್ವನಾಥ ಉಪಾಧ್ಯ ಅವರು ಗ್ರಾಮದಲ್ಲಿರುವ ಅನೇಕ ಅಭಿವೃದ್ಧಿ ಕಾರ್ಯಗಳು, ಸಮಸ್ಯೆಗಳಿಗೆ ಒತ್ತು ನೀಡುತ್ತೇನೆ. ಗ್ರಾಮವನ್ನು ಮಾದರಿ ಗ್ರಾಮ ಮಾಡುತ್ತೇವೆ, ಸಾರ್ವಜನಿಕರ ಸಮಸ್ಯೆಗೆ ಹಗಲಿರುಳು ಶ್ರಮಿಸುತ್ತೇನೆ ಹಾಗೂ ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ ಪಕ್ಷದವರಿಗೆ ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗಿರೀಶ್ ಕಡಕೋಳ, ಗ್ರಾಂ ಪಂ ಸದಸ್ಯರಾದ ಬಸುಗೌಡ ಪರಮಗೌಡ, ರಾಜುಗೌಡ ಪಾಟೀಲ, ಸುಜೀತಗೌಡ ಪಾಟೀಲ, ವಿನೋಬಾ ನ್ಯಾಮಗೌಡ, ಸಿದ್ದಾರ್ಥ್ ತಳಕೇರಿ, ಹಣಮಂತ ಸಂತಿವೂರ, ಗಾಮೇಶ ಬಾಪಕರ, ಭರತೇಶ ಜಮಖಂಡಿ, ನಂದಕುಮಾರ ಕನೇರಿ, ಶಂಕರ್ ಐನಾಪೂರ, ರಾಜು ಕರಾಬೆ, ಹಿರಿಯರಾದ ರಾಮಣ್ಣ ಬಂಡಿವಡ್ಡರ, ಪಾರ್ಶ್ವನಾಥ ಉಪಾಧ್ಯ, ಅಶೋಕ್ ಮಾಂಗ, ಸಂಜು ಮಾಳಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About Mallikarjun

Check Also

IMG 20230724 WA0402

ಕೆಸರಹಟ್ಟಿ:ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ

Kesarhatti: Health awareness program for students ಗಂಗಾವತಿ.‌ 24 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ಷಯ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.