ಕೆಸರು ಓಟ ಶಾಲಾ ಮಕ್ಕಳಲ್ಲಿ ಕೃಷಿಯನ್ನುಪರಿಚಯಿಸುತ್ತದೆ.ಕೆಸರು ಓಟ ಸ್ಪರ್ಧೆ ಆಗಿ ಮಾರ್ಪಟ್ಟಿದೆ: ನೇತ್ರಾಜ್ ಗುರುವಿನ್‌ಮಠ

Mud run introduces agriculture to school children.
Mud run has become a competition: Netraj Guruvin Math

ಗಂಗಾವತಿ: ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ ಕಿಡ್ಸ್ ಶಾಲೆಯಲ್ಲಿ ಕೆಸರು ಓಟ ಸ್ಪರ್ಧೆಯ (ಕ್ರೀಡೆ) ಕಾರ್ಯಕ್ರಮವನ್ನು ಶನಿವಾರದಂದು ಶಾಲೆಯ ಮಕ್ಕಳಿಂದ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಮಕ್ಕಳು ಸಂತೋಷ ಮತ್ತು ಉತ್ಸಹ ಭರಿತವಾಗಿ ಕೆಸರು ಗದ್ದೆಯ ಓಟದಲ್ಲಿ ಪಾಲ್ಗೊಂಡಿದ್ದರು.
ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನ ಮಠ ಮಾತನಾಡಿ “ಕೆಸರು ಓಟ” ಅಂದರೆ ಮಣ್ಣಿನಲ್ಲಿ ಅಥವಾ ಕೆಸರಿನಲ್ಲಿ ಓಡುವುದು. ಸಾಮಾನ್ಯವಾಗಿ ಇದು ಒಂದು ಆಟ ಅಥವಾ ಸ್ಪರ್ಧೆಯಾಗಿರುತ್ತದೆ, ಜೊತೆಗೆ ಕೃಷಿಯನ್ನು ಪರಿಚಯಿಸುತ್ತದೆ. ಇದು ಒಂದು ಸ್ಪರ್ಧೆ (ಕ್ರೀಡೆ)ಯಾಗಿ ಮಾರ್ಪಟ್ಟಿದೆ. ಉದಾಹರಣೆ ಎಂಬAತೆ ಕೊಡಗು ಭಾಗದಲ್ಲಿ ಜನರು ಕೆಸರಿನಲ್ಲಿ ಓಡಿ ಸ್ಪರ್ಧಿಸುತ್ತಾರೆ. ಕೆಲವೊಮ್ಮೆ ಇದನ್ನು “ಮಡ್ ರನ್” ಎಂದು ಕೂಡ ಕರೆಯುತ್ತಾರೆ. ಈ ಸ್ಪರ್ಧೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ ಮತ್ತು ವಿವಿಧ ರೀತಿಯ ಸ್ಪರ್ಧೆಗಳನ್ನು ಒಳಗೊಂಡಿರುತ್ತವೆ ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ಮಾತನಾಡಿ ಮಕ್ಕಳಲ್ಲಿ ಕೇವಲ ಶೈಕ್ಷಣಿಕ ಪ್ರಗತಿಯನ್ನು ಅಪೇಕ್ಷಿಸದೆ ಮಕ್ಕಳನ್ನು ಕೆಸರು ಓಟದಂತಹ ಚಿಕ್ಕಚಿಕ್ಕ ದೈಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಿದರೆ ಮಕ್ಕಳು ಸರ್ವತೋಮುಖ ಅಭಿವೃದ್ಧಿ ಆಗುತ್ತಾರೆ. ಇಂತಹ ಕ್ರೀಡೆಗಳಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಟ್ಟಂತಹ ಪಾಲಕರು ಮಕ್ಕಳಿಗೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ವರ್ಗದವರು, ಪಾಲಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಗಂಗಾವತಿ:ನಗರದಲ್ಲಿರುವ ರಸ್ತೆಯಲ್ಲಿ  ಹಸುಗಳಿಂದ ಸಾರ್ವಜನಿಕರಿಗೆ ತೊಂದರೆ  ಗೋಶಾಲೆಗೆ ಕಳಿಸಿ ಎಂದುಒತ್ತಾಯಿಸಿ ಪೌರಾಯುಕ್ತರಿಗೆ ಮನವಿ
Gangavathi: Appeal to the civic commissioner demanding that cows be sent to a cowshed to prevent public nuisance on city roads

ಗಂಗಾವತಿ ನಗರದಲ್ಲಿ ಹಸುಗಳು (ಗೋವುಗಳು )ಅಧಿಕ ಸಂಖ್ಯೆಯಲ್ಲಿ ಅನಾಥವಾಗಿದ್ದು, ಅವು ಹಗಲಿನ ಸಮಯದಲ್ಲಿ ನಗರದ ಬೀದಿ ಬೀದಿಗಳಲ್ಲಿ ತಿರುಗಾಡಿ ಯಾವ ಆಹಾರ ತಿನ್ನುತ್ತಾವೇಯೋ ಅಥವಾ ಪ್ಲಾಸ್ಟಿಕ್, ಮತ್ತು ಕಸ ಕಡ್ಡಿ ತಿನ್ನುತ್ತಾವೇಯೋ ತಿಳಿಯದು. ಉಪವಾಸ ದಿಂದಲೂ ಇರಬಹುದು.ರಾತ್ರಿ ಯಾಗುತ್ತಲೇ ಅವುಗಳಿಗೆ ರಸ್ತೆಗಳು ಹಾಗೂ ಸರಕಾರಿ ಪದವಿ ಪೂರ್ವಕಾಲೇಜು ಮೈದಾನ ಮತ್ತು ಇತರೇ ಸ್ಥಳಗಳು ತಂಗು ದಾಣ ಗಳಾಗಿವೆ. ಹಸುಗಳು ಮೈದಾನದಲ್ಲಿ ಸಗಣಿ ಹಾಕುವದರಿಂದ ಬೆಳಿಗ್ಗೆ ವಾಕಿಂಗ್ ಮಾಡುವವರಿಗೆ ಹಾಗೂ ಆಟ ಆಡುವವರಿಗೆ ತೊಂದರೆಯಾಗಿರುತ್ತದೆ.ಹಿಂದೂಗಳು ಗೋವುಗಳನ್ನ ದೇವತಾ ರೂಪದಲ್ಲಿ ಪೂಜೆ ಮಾಡುವ ಪದ್ಧತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಅವುಗಳ ಜೀವನ ಬಹಳ ಕಷ್ಟಮಯದಿಂದ ಕೂಡಿದೆ.ಇವುಗಳ ಪಾಲನೆ ಪೋಷಣೆ ಎಲ್ಲರ ಜವಾಬ್ದಾರಿಯಾಗಿರುತ್ತದೆ. ಅದರಲ್ಲೂ ನಗರಸಭೆಯ ಜವಾಬ್ದಾರಿ ಬಹಳ ಮುಖ್ಯವಾಗಿರುತ್ತದೆ. ನಗರಸಭೆ ತಮ್ಮ ಕಸದ ವಾಹನಗಳ ಮೂಲಕ ಹಸುಗಳ ಮಾಲಿಕರಿದ್ದಲ್ಲಿ ಅವುಗಳನ್ನು ತೆಗೆದುಕೊಂಡು ಹೋಗುವಂತೆ ಪ್ರಚಾರ ಮಾಡಬೇಕು. ಯಾರೂ ತೆಗೆದುಕೊಂಡು ಹೋಗದಿದ್ದರೆ ಅವುಗಳನ್ನು ಗೋಶಾಲೆಗೆ ಸೇರಿಸಬೇಕು. ಇದರಿಂದ ಅವುಗಳ ರಕ್ಷಣೆ ಮಾಡಿದಂತಾಗುತ್ತದೆ. ಇಂದಿನಿಂದ ಒಂದು ತಿಂಗಳ ಸಮಯದ ಗಡುವು ತಮಗೆ ನೀಡುತ್ತಿದ್ದೇವೆ.ಈ ನಮ್ಮ ಮನವಿಗೆ ಸ್ಪಂದಿಸುವ ಕೆಲಸ ಮಾಡದೇ ನಿರ್ಲಕ್ಷ ಮಾಡಿದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಅಂದರೆ ದಿನಾಂಕ 14-8-2025 ರಂದು ರಾತ್ರಿ ಎಂಟು ಗಂಟೆಗೆ ಹಸುಗಳನ್ನು ನಮ್ಮ ಸಂಘದ ಪದಾಧಿಕಾರಿಗಳು ನಗರಸಭೆಯ ಆವರಣದಲ್ಲಿ ತಂದು ಬಿಡಲಾಗುವದು. ನಮ್ಮ ಮೇಲೆ ಏನೇ ಕ್ರಮಕ್ಕೆ ಮುಂದಾದರೂ ನಮ್ಮ ಹೋರಾಟ ಬಿಡುವದಿಲ್ಲ. ಮರುದಿನ ಸ್ವಾತಂತ್ರ್ಯ ದಿನಾಚರಣೆಗೆ ತೊಂದರೆಯದಲ್ಲಿ ನಗರಸಭೆ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಒಂದು ತಿಂಗಳ ಮುಂಚೆಯೇ ಮನವಿ ಸಲ್ಲಿಸಲಾಗಿದೆ. ಕೂಡಲೇ ಹಸುಗಳ ರಕ್ಷಣೆಗೆ ಮುಂದಾಗಬೇಕೆಂದು   ಹೊರಾಟಮಾಡಲು ಅವಕಾಶ ಕೊಡಬೇಡಿಎಂದು ಒತ್ತಾಯಿಸಿ ಕೊಪ್ಪಳ ಜಿಲ್ಲಾಸರ್ವಾಂಗೀಣಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳ ಮನಿ ಪೌರಾಯುಕ್ತರಿಗೆ ಇಂದು ಮನವಿಸಲ್ಲಿಸಿದರು.

ಗುರುಪೌರ್ಣಮಿ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ: ಟಿ.ರಾಮಕೃಷ್ಣ
Special religious program on the occasion of Gurupournami: T. Ramakrishna

ಗಂಗಾವತಿ, ಜು.08: ಹೊರವಲಯದ ಆನೆಗೊಂದಿ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಜುಲೈ 10ರ ಗುರುವಾರದಂದು ಗುರುಪೌರ್ಣಮಿ ನಿಮಿತ್ತ ಶ್ರೀ ಶಿರಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್, ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಹಾಗೂ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ ವತಿಯಿಂದ ವಿಶೇಷ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ತಾಳೂರು ರಾಮಕೃಷ್ಣ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಜುಲೈ 10ರ ಗುರುವಾರದಂದು ಗುರುಪೌರ್ಣಮಿ ನಿಮಿತ್ತ ದೇವಸ್ಥಾನದಲ್ಲಿ ಬೆಳಿಗ್ಗೆ ಕಾಕಡ ಆರತಿ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಂತರ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ಆರತಿ, ಸಂಧ್ಯಾ ಆರತಿ, ಪಲ್ಲಕ್ಕಿ ಉತ್ಸವ, ಶೇಜಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಸಾಯಿಬಾಬಾ ಮೂರ್ತಿ ಪ್ರತಿಷ್ಠಾಪನೆಗೊಂಡು 25 ವರ್ಷಗಳು ಪೂರ್ಣಗೊಂಡ ನಿಮಿತ್ತ ಬೆಳ್ಳಿ ಸಿಂಹಾಸನ ಹಾಗೂ ಪ್ರಭಾವಳಿಗಳನ್ನು ಮಾಡಿಸಲಾಗಿದೆ. ಈ ಗುರುಪೌರ್ಣಮಿಯ ವಿಶೇಷ ಆಚರಣೆಗೆ ಭಕ್ತರು ಹಾಗೂ ಸಾರ್ವಜನಿಕರು ದವಸ, ಧಾನ್ಯ ಸೇರಿದಂತೆ ಇನ್ನಿತರೆ ಕಾಣಿಕೆ ನೀಡಿ ಸಹಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ 10 ಸಾವಿರಕ್ಕೂ ಅಧಿಕ ಭಕ್ತರಿಗೆ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಾರಣ ತಾಲೂಕಿನ ಸಮಸ್ತ ಸಾಯಿಬಾಬಾ ಭಕ್ತರು ಗುರುಪೌರ್ಣಮಿಯ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಯಿಬಾಬಾ ಅವರ ಕೃಪೆಗೆ ಪಾತ್ರರಾಗುವಂತೆ ತಿಳಿಸಿದ್ದಾರೆ.
ಈ ವೇಳೆ ಸಾಯಿಬಾಬಾ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟೇಶ ಜೋಷಿ, ಖ್ಯಾತ ವೈದ್ಯರಾದ ಡಾ|| ಸೋಮರಾಜ್, ಎಸ್.ಸುರೇಶ, ಕಿರಣಕುಮಾರ, ನಾಮಶಿವಯ್ಯ, ಡಾ|| ಪಂಪಾಪತಿ, ಕಲ್ಕಿಮೂರ್ತಿ, ಬಸವರಾಜ್ ಸಿಂಗನಾಳ್, ಗುರುರಾಜ್ ಇತರರಿದ್ದರು.

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಟೈ, ಬೆಲ್ಟ್, ಐಡಿ ಕಾರ್ಡ್, ಪೋಟೊ ಉಚಿತ ವಿತರಣೆ
Free distribution of ties, belts, ID cards, and photographs to government school students with the help of donors


ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಗ್ರಾಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣಪ್ರೇಮಿ ದಾನಿಗಳ ನೆರವಿನಿಂದ ಹದಿನೈದು ಸಾವಿರ ರೂಪಾಯಿ ಮೌಲ್ಯದ ಟೈ, ಬೆಲ್ಟ್, ಐಡಿ ಕಾರ್ಡ್, ಮತ್ತು ಪೋಟೋಗಳನ್ನು ಉಚಿತವಾಗಿ ವಿದ್ಯಾರ್ಥಿ ಗಳಿಗೆ ವಿತರಿಸಿದ್ದಾರೆ.
ಶಿಕ್ಷಕಿ ಸಂಧ್ಯಾ ಎ.ಎಸ್. ಅವರ ಸ್ನೇಹಿತೆಯಾದ ಶಿಕ್ಷಣಪ್ರೇಮಿ ಶಾಂತಾ ಅವರ ಹುಟ್ಟುಹಬ್ಬ ನಿಮಿತ್ಯ ಹಾಗೂ ಶ್ರೀಮತಿ ಭಾರತಿ, ಶ್ರೀಮತಿ ವೈಷ್ಣವಿ ಅವರ ಸಹಕಾರದಿಂದ ಮತ್ತು ಇದೇ ಶಾಲೆಯ ಶಿಕ್ಷಕರಾದ ಬಸವರಾಜ ಅವರಿಗೆ ಮಗು ಜನಿಸಿದ ಖುಷಿಯಿಂದ ದೇಣಿಗೆ ನೀಡಿದ್ದು, ಒಟ್ಟು ಸಂಗ್ರಹಗೊಂಡ ೧೫೦೦೦ ರೂ.ಗಳಲ್ಲಿ ಟೈ, ಬೆಲ್ಟ್, ಐಡಿ ಕಾರ್ಡ್, ಮತ್ತು ಪೋಟೊ ಗಳನ್ನು ಖರೀದಿಸಿ ಶಾಲಾ ಮಕ್ಕಳಿಗೆ ವಿತರಿಸಿದ್ದಾರೆ. ಟೈ, ಬೆಲ್ಟ್, ಐಡಿ ಕಾರ್ಡ್ ಧರಿಸಿದ ಮಕ್ಕಳು ಸಂಸತದಿAದ ಸಂಭ್ರಮಿಸಿ ದರು. ಶಾಲಾ ಮುಖ್ಯೋಪಾಧ್ಯಾರಾದ ವಿ. ನಾಗರತ್ನ ಅವರು ಶಿಕ್ಷಣಪ್ರೇಮಿ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಹುಲುಗಪ್ಪ, ಸದಸ್ಯರಾದ ನಾಗಪದ್ಮಾವತಿ, ಶಿಕ್ಷಕರಾದ ಕಲ್ಪನಾ ರಾಯ್ಕರ್, ನೀಲಾಂಬಿಕಾ ಜಿ.ವಿ, ಅನುಷಾ, ಶಭಾನಾ ಪರ್ವಿನ್, ಸಂಧ್ಯಾ ಎ.ಎಸ್, ಬಸವರಾಜ್ ಉಪಸ್ಥಿತರಿದ್ದರು.

ಎಲ್ ಐ ಸಿ ಸಿಬ್ಬಂದಿಯವರಿಂದ ಒಂದು ದಿನದ ಸಾರ್ವತ್ರಿಕ ಮುಷ್ಕರ
One-day general strike by LIC employees


ಕೊಪ್ಪಳ: ಎಲ್ ಐ ಸಿ ಸಿಬ್ಬಂದಿಯವರಿAದ ನಗರದ ಎಲ್ ಐ ಸಿ ಕಛೇರಿ ಮುಂಭಾಗದಲ್ಲಿ ಒಂದು ದಿನದ ಸಾರ್ವತ್ರಿಕ ಮುಷ್ಕರವನ್ನು ಮಾಡಲಾಯಿತು. ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ವಿಮಾ ನೌಕರರ ಸಂಘದ ಕಾರ್ಯದರ್ಶಿ ಕಾಂ|| ಮಲ್ಲಿಕಾರ್ಜುನ ಭೃಂಗಿ ವಿಮಾ ಉದ್ದಿಮೆಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಕೇಂದ್ರ ಸರಕಾರ ವಿಮಾ ಉದ್ದಿಮೆಯಲ್ಲಿ ವಿದೇಶೀ ನೇರ ಬಂಡವಾಳ ಹೆಚ್ಚು ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಮಾತನಾಡುತ್ತಾ ಎಲ್ ಐ ಸಿ ಯಲ್ಲಿ ವರ್ಗ, ೩ ಮತ್ತು ೪ ನೇಮಕಾತಿಗಾಗಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಲ್ ಯ ಸಿ ಯ ಪ್ರೀಮಿಯಮ್ ಮೇಲಿನ ಜಿಎಸ್‌ಟಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಿಮಾ ನೌಕರರ ಸಂಘದ ಕೊಪ್ಪಳದ ಅಧ್ಯಕ್ಷರಾದ ಕಾಂ|| ಶೇಖರಪ್ಪ, ಸದಸ್ಯರಾದ ಕಾಂ|| ರಮೇಶ,ಶ್ರೀಕಾಂತ, ಸಿದ್ದಪ್ಪ, ಸಾಗರ್, ವಂಶಿಕೃಷ್ಣ,ಜಗದೀಶ, ಚಂದ್ರಶೇಖರ, ಶ್ರೀಪಾದ, ವಿಜಯಕುಮಾರ, ಅನಂತರೆಡ್ಡಿ, ವಿನಯ, ಲಕ್ಷö್ಮಯ್ಯ, ಚಂದನ್ ,ಮಹಿಳಾ ಸಂಗಾತಿಗಳಾದ ಕಾಂ|| ಸುಧಾಬಾಯಿ, ಸುಕನ್ಯಾ, ಮಹಾಲಕ್ಷಿö್ಮ, ಭಾರತಿ, ಪುಷ್ಪಾವತಿ, ಶಿರಿಶಾ, ಇಂದುಶ್ರೀ ಹಾಜರಿದ್ದರು.

ಗಂಗಾವತಿ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಸಂಸದ ರಿಂದ ೫ ಲಕ್ಷ ಅನುದಾನ

MP A grants Rs 5 lakh to Sri Raghavendra Swamy Math in Gangavathi Nagar

ಗಂಗಾವತಿ: ನಗರದ ರಾಯರಓಣಿಯ ಶ್ರೀ ರಾಘವೇಂದ್ರಸ್ವಾಮಿಗಳ ಮಠಕ್ಕೆ ಸಂಸದ ಕೆ. ರಾಜಶೇಖರ್ ಹಿಟ್ನಾಳ್ ಮಂಗಳವಾರ ಭೇಟಿ ನೀಡಿ ದರ್ಶನ ಪಡೆದುಕೊಂಡರು. ಮಠದ ಪಾಕಶಾಲಾ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ೫ ಲಕ್ಷ ಅನುದಾನ ನೀಡುವುದಾಗಿ ಸಂಸದ ರಾಜಶೇಖರ್ ಹಿಟ್ನಾಳ್ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ವಿಷ್ಣುತೀರ್ಥ ಜೋಷಿ ಪ್ರಕಟಣೆಯಲ್ಲಿ ತಿಳಿಸಿದರು.
ಸಂಸದರು ವಿಪ್ರ ಸಮಾಜದ ಮನವಿ ಹಿನ್ನೆಲೆಯಲ್ಲಿ ಮಠಕ್ಕೆ ಬಂದಿದ್ದು, ಮೃತ್ತಿಕಾವೃಂದಾವನದ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ, ಬ್ರಾಹ್ಮಣ ಸಮಾಜ ಹಾಗೂ ಆರ್ಯವೈಶ್ಯ ಸಮಾಜದಿಂದ ಸಂಸದರಾದ ಶ್ರೀ ರಾಜಶೇಖರ ಹಿಟ್ನಾಳ್ ಅವರಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಸಂಸದರು, ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಮೊದಲನೆ ಹಂತದಲ್ಲಿ ೫ ಲಕ್ಷ ನೀಡುತ್ತಿದ್ದು, ಮುಂದಿನ ವರ್ಷ ಮತ್ತಷ್ಟು ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷೆ ರೂಪಾರಾಣಿ ಲಕ್ಷö್ಮಣ ರಾಯಚೂರು, ಸಂತೋಷ ಕೆಲೋಜಿ, ಸುರೇಶ ಶ್ರೇಷ್ಠಿ, ಮಾರುತಿ ರಾಯಚೂರು ಸೇರಿದಂತೆ ಇತರರು ಇದ್ದರು.

೧೮೮೬ ರಲ್ಲಿ ವಿಶ್ವಕಾರ್ಮಿಕರು ಒಂದಾಗಿ ಪಡೆದ ೮ ತಾಸುಗಳ ಕೆಲಸದ ಮಿತಿಯನ್ನುಮೋದಿ ಸರ್ಕಾರ ಗಾಳಿಗೆ ತೂರಿರುವುದು ಖಂಡನೀಯ: ಭಾರಧ್ವಾಜ್
Modi government's flouting of 8-hour workday, which was unanimously agreed upon by workers worldwide in 1886, is condemnable: Bhardwaj

ಗಂಗಾವತಿ: ಭಾರತದಲ್ಲಿ ಕಾರ್ಮಿಕರನ್ನು ಸಮಯದ ಮಿತಿ ಇಲ್ಲದೇ ದುಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಧೋರಣೆಯನ್ನು ಧಿಕ್ಕರಿಸಿ ಜುಲೈ-೯ರಂದು ನಡೆಯುವ ರಾಷ್ಟçವ್ಯಾಪಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಕಾರ್ಮಿಕರೆಲ್ಲರೂ ಪಾಲ್ಗೊಂಡು ಪ್ರತಿಭಟಿಸಬೇಕೆಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.
೧೮೮೬ ರಲ್ಲಿ ವಿಶ್ವದ ಕಾರ್ಮಿಕರೆಲ್ಲ ಒಂದಾಗಿ ಅನೇಕ ತ್ಯಾಗ, ಬಲಿದಾನಗಳಿಗೆ ಒಳಪಟ್ಟು ಕಾರ್ಮಿಕರ ಕೆಲಸದ ಅವಧಿಯನ್ನು ೮ ತಾಸುಗಳಿಗೆ ಮಿತಿಗೊಳಪಡಿಸಲು ಹೋರಾಟ ಮಾಡಿ ಯಶಸ್ವಿಯಾಗಿದ್ದಾರೆ. ಆದರೆ ಆ ನೀತಿ ಕೆಲವು ಕಾರ್ಖಾನೆಗಳಿಗೆ ನಡೆಯುವುದಿಲ್ಲ. ಉದಾಹರಣೆಗೆ ಅಕ್ಕಿಗಿರಣಿಯಲ್ಲಿ ಕಾರ್ಮಿಕರನ್ನು ೧೨ ತಾಸುಗಳ ಕಾಲ ದುಡಿಸಿಕೊಳ್ಳಲಾಗುತ್ತಿದೆ. ಈಗ ಸರ್ಕಾರಗಳು ಕಾರ್ಮಿಕರಿಗೆ ೧೨ ತಾಸುಗಳ ಕೆಲಸದ ಮಿತಿಯನ್ನು ಜಾರಿಗೆ ತಂದರೆ ಮಾಲಿಕರು ಕಾರ್ಮಿಕರನ್ನು ೨೦ ತಾಸುಗಳವರೆಗೆ ದುಡಿಸಿಕೊಳ್ಳುವ ಸಂಭವವಿದೆ. ಇದರಿಂದಾಗಿ ಕಾರ್ಮಿಕರ ಹೆಂಡತಿ, ಮಕ್ಕಳಿಗೆ ತೊಂದರೆಯುAಟಾಗಲಿದೆ. ಕಾರ್ಮಿಕರು ನಡೆಸುತ್ತಿರುವ ಈ ಹೋರಾಟ ನ್ಯಾಯಯುತ ಹೊರಾಟವಾಗಿದ್ದು, ದೇಶಕ್ಕಾಗಿ ದುಡಿಯುವ ಕಾರ್ಮಿಕರು ಒಗ್ಗಟ್ಟಾಗಿ ದೇಶ ಕಟ್ಟುತ್ತಾರೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕೆಂದು ಭಾರಧ್ವಾಜ್ ಆಗ್ರಹಿಸಿದ್ದಾರೆ.

ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮ್ಯಾಗಳಮನಿ ಒತ್ತಾಯ.
Magalamani demands action against officers who violated etiquette.

ಗಂಗಾವತಿ :-8-ನಗರದ ತಾಲೂಕ ಪಂಚಾಯತ್ ಮಂಥನ ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆ ಡಿ ಪಿ ಸಭೆ ಜರುಗಿತು. ಸಭೆಯಲ್ಲಿ ಅಧಿಕಾರಿಗಳು ಮತ್ತು ಕೆ ಡಿ ಪಿ ಸಭೆಯಲ್ಲಿ ಭಾಗವಹಿಸಲು ನಿಯಮದ ಪ್ರಕಾರ ಜನಪ್ರತಿನಿಧಿ ಭಾಗವಹಿಸಬೇಕಾಗಿರುತ್ತದೆ.ಆದರೆ ಬೇರೆಯವರು ಮತ್ತು ಶಾಸಕರ ಆಪ್ತರು ಭಾಗವಹಿಸುವಿಕೆಯಿಂದ ಶಿಷ್ಟಚಾರ ಉಲ್ಲಂಘನೆಯಾಗಿದೆ. ಸಭೆ ನಡೆಸುವ ಜವಾಬ್ದಾರಿ ಇರುವ ಅಧಿಕಾರಿಯು ಕರ್ತವ್ಯ ಲೋಪ ಮಾಡಿದ್ದಾರೆ. ಆ ಅಧಿಕಾರಿಯ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಆಗ್ರಹಿಸಿದ್ದಾರೆ. ಕ್ರಮ ತೆಗೆದುಕೊಳ್ಳದಿದ್ದರೆ ಮುಂದೆ ನಡೆಯುವ ಎಲ್ಲಾ ಕೆ ಡಿ ಪಿ ಸಭೆಗಳಿಗೆ ನಮ್ಮ ಸಂಘದ ಪದಾಧಿಕಾರಿಗಳು ಕೂಡ ಭಾಗವಹಿಸುತ್ತೇವೆ. ಮಂತ್ರಿಗಳ ಅಥವಾ ಶಾಸಕರ ಯಾವುದೇ ಸರ್ಕಾರಿ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಶಿಷ್ಟಚಾರ ಉಲ್ಲಂಘನೆಯದಲ್ಲಿ ಸ್ಥಳದಲ್ಲಿಯೇ ಪ್ರತಿಭಟಿಸಲಾಗುವದು. ಈ ನಿಟ್ಟಿನಲ್ಲಿ ಸರಕಾರವು ಎಲ್ಲ ಅಧಿಕಾರಿಗಳೆಗೆ ಎಚ್ಚರಿಕೆ ನೀಡಬೇಕೆಂದು ಮ್ಯಾಗಳಮನಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಗಂಗಾವತಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
Gangavathi Guarantee Schemes Progress Review Meeting

ಗಂಗಾವತಿ ಗ್ಯಾರಂಟಿ ಯೋಜನೆಗಳ ಪ್ರಗತಿ ವರದಿ

ಗೃಹಲಕ್ಷ್ಮಿ ಯೋಜನೆ ಅಡಿ ಗಂಗಾವತಿ ತಾಲೂಕಿನಲ್ಲಿ ಒಟ್ಟು 56084 ಜನ ಫಲಾನುಭವಿಗಳಿದ್ದು ಇದರಲ್ಲಿ 56045 ಜನ ನೋಂದಣಿಯಾಗಿರುತ್ತಾರೆ. ಇದರಲ್ಲಿ 40810 ಗಂಗಾವತಿ ವಿಧಾನ ಸಭಾಕ್ಷೇತ್ರ ಮತ್ತು 15274 ಕನಕಗಿರಿ ವಿಧಾನ ಸಭಾ ಕ್ಷೇತ್ರದ ಫಲಾನುಭವಿಗಳು. ಪರಿಶಿಷ್ಟ ಜಾತಿ 11472, ಪರಿಶಿಷ್ಟ ಪಂಗಡ 6817, ಅಲ್ಪ ಸಂಖ್ಯಾತ 12319, ಇತರೆ ಸಮುದಾಯಗಳ 25437 ಜನ ಫಲಾನುಭವಿಗಳಿಗೆ ನಮ್ಮ ಸರಕಾರ ಮಾಸಿಕ ತಲಾ 2000/- ಹಣವನ್ನು ತಾಯಂದಿರ ಖಾತೆಗೆ ಜಮೆ ಮಾಡುವ ಮೂಲಕ ಸದೃಢ ಬದುಕು ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸುತ್ತಿದೆ.

ಅನ್ನಭಾಗ್ಯ ಯೋಜನೆ ಅಡಿ 55441 BPL ಕಾರ್ಡುಗಳ 189866 ಜನ ಫಲಾನುಭವಿಗಳು ಅನ್ನಭಾಗ್ಯ ಯೋಜನೆ ಅಡಿ ಅಕ್ಕಿಯನ್ನು ಪಡೆಯುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಅಕ್ಕಿಯ ಬದಲಿಗೆ ಬೇಳೆ, ಅಡುಗೆ ಎಣ್ಣೆಯ ವಿತರಿಸಿದರೆ ಅನುಕೂಲ ಎಂಬ ಬೇಡಿಕೆ ಬಂದಿದ್ದು ಸರಕಾರಕ್ಕೆ ಗಮನಕ್ಕೆ ತರಲಾಗುವುದು.

ಗೃಹಜ್ಯೋತಿ. ಗಂಗಾವತಿ ತಾಲೂಕಿನಲ್ಲಿ ಸುಮಾರು 60570 ಸ್ಥಾವರಗಳಿದ್ದು ಅದರಲ್ಲಿ ಶೇ 98 ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಯೋಜನೆಗೆ ಗಂಗಾವತಿ ತಾಲೂಕು ಒಂದರಲ್ಲೇ ಸರಕಾರ 2.5 ಕೋಟಿ ಹಣ ವನ್ನು ಕಟ್ಟಿ ಜನರ ಜೇಬಿಗೆ ವಿದ್ಯುತ್ ಹೊರೆಯಾಗದಂತೆ ನಮ್ಮ ಗ್ಯಾರಂಟಿ ಸರಕಾರ ತಡೆದಿದೆ.

ಶಕ್ತಿ ಯೋಜನೆ ಅಡಿ ಜೂನ್ ತಿಂಗಳಿನಲ್ಲಿ 3.05 ಕೋಟಿ ಪ್ರಯಾಣ ಪ್ರಯಾಣ ವೆಚ್ಚವಾಗಿದ್ದು ಕಳೆದ ಸಾಲಿಗೆ ಹೋಲಿಸಿದರೆ 50 ಲಕ್ಷ ಆದಾಯ ಹೆಚ್ಚಾಗಿದೆ. ಶಕ್ತಿ ಯೋಜನೆ ಅತ್ಯಂತ ಮಹತ್ವದ ಯೋಜನೆಯಾಗಿದ್ದು ಇದು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದೆ. ಯೋಜನೆಯಿಂದ ಉದ್ಯೋಗದಲ್ಲಿ ತೊಡಗಿಕೊಳ್ಳುವ ಮಹಿಳೆಯರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

ಯುವನಿಧಿ ಯೋಜನೆ ಅಡಿ 1901 ಜನ ಮಾತ್ರ ನೋಂದಣಿಯಾಗಿದ್ದು ಈ ಯೋಜನೆಯಲ್ಲಿ 2023-24 ನೇ ಸಾಲಿನಲ್ಲಿ ಡಿಪ್ಲೋಮಾ ಮುಗಿಸಿದರಿಗೆ 1500 ಮತ್ತು ಪದವಿ ಮುಗಿಸಿದವರಿಗೆ 3000 ಸಾವಿರ ಹಣವನ್ನು 2 ವರ್ಷ ಗಳ ಕಾಲ ನೀಡುತ್ತಿದೆ ಎಂದು ತಾಲೂಕ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ವೆಂಕಟೇಶ ಬಾಬು ತಿಳಿಸಿದ್ದಾರೆ.



ಹೆಚ್.ಐ.ವಿ ರೋಗಿಗಳಿಗೆಉಚಿತವಾಗಿ ಪೌಷ್ಟಿಕ ಆಹಾರ ಕಿಟ್ ವಿತರಣೆ: ರೋಟರಿ ಗವರ್ನರ್ ಬಿ. ಚಿನ್ನಪ್ಪರೆಡ್ಡಿ.
Free distribution of nutritious food kits to HIV patients: Rotary Governor B. Chinnappa Reddy.

ಗಂಗಾವತಿ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಪೂರ್ತಿ ಸೆಲೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ), ಸದ್ವಿಚಾರ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ (ರಿ) ಹಣವಾಳ ಹಾಗೂ ರೋಟರಿ ಕ್ಲಬ್ ಆಫ್ ರೈಸ್‌ಬೌಲ್ ಗಂಗಾವತಿ ಇವರ ಸಯುಕ್ತ ಸಮಯದಲ್ಲಿ ನಡೆದ. ಹೆಚ್.ಐ.ವಿ ರೋಗಿಗಳಿಗೆ ಉಚಿತ ಪೌಷ್ಟಿಕ ಆಹಾರ ಕಿಟ್ ವಿತರಣೆಯನ್ನು ರೋಟರಿ ಕ್ಲಬ್ ಗೌರ್ನರ್ ಬಿ. ಚಿನ್ನಪ್ಪ ರೆಡ್ಡಿ ವಿತರಣೆ ಮಾಡಿದರು.
ಈ ಕಾರ್ಯಕ್ರಮದ ಕುರಿತು ಮಾತನಾಡಿ ರೋಗಿಗಳಿಗೆ ಉತ್ತಮ ಪೌಷ್ಟಿಕ ಆಹಾರವನ್ನು ವಿತರಣೆ ಮಾಡಲಾಗಿದೆ. ಎಲ್ಲರೂ ಆರೋಗ್ಯವಂತರಾಗಿ ಇರಬೇಕು. ರೋಟರಿ ಕ್ಲಬ್ ಇಂತಹ ಸಂಸ್ಥೆಗಳ ಮುಖಾಂತರ ಹಲವಾರು ಸಾಮಾಜಿಕ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಹಾಗೆಯೇ ಹಲವಾರು ಆರೋಗ್ಯ ತಪಾಸಣೆ ಶಿಬಿರಗಳನ್ನು ನಮ್ಮ ಮಹಿಳಾ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿರುತ್ತಾರೆ. ಇಂಥ ಒಳ್ಳೆಯ ಕೆಲಸಕ್ಕೆ ಸಂಸ್ಥೆಗಳು ಮುಂದಾಗಬೇಕಾಗಿದೆ ಎಂದರು.
ನAತರ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಈಶ್ವರ ಸವಡಿ ಮಾತನಾಡಿ, ಮಹಿಳಾ ರೋಟರಿ ಕ್ಲಬ್ ಹಾಗೂ ಸ್ಪೂರ್ತಿ ಸೆಲೆ ಸಂಸ್ಥೆ ವತಿಯಿಂದ ಒಳ್ಳೆ ಕಾರ್ಯವನ್ನು ಮಾಡಲಾಗುತ್ತಿದೆ. ಇಂತಹ ಕಾರ್ಯಕ್ಕೆ ನಾವು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಬಡಜನರಿಗೆ ಇಂತಹ ಆಹಾರದ ಕಿಟ್‌ಗಳನ್ನು ಕೊಡುವುದರ ಮುಖಾಂತರ ಅವರ ರೋಗಗಳನ್ನು ನಿವಾರಣೆ ಮಾಡಬಹುದು ಎಂದು ತಿಳಿಸಿದರು.
ನಂತರ ಸ್ಪೂರ್ತಿ ಸೆಲೆ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ ಹಣವಾಳ ಪೂಜ್ಯ ಶ್ರೀ ಶರಣಬಸವ ಮಹಾಸ್ವಾಮಿಗಳು, ದೇಶಿಕೇಂದ್ರ ಶಿವಯೋಗಿ ಮಂದಿರದ ಆಡಳಿತ ಅಧಿಕಾರಿಗಳು, ರೋಗಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಆರೋಗ್ಯವಂತರಾಗಿರಬೇಕು. ಇಂಥ ರೋಗಗಳಿಗೆ ಯಾರು ಕೂಡ ಭಯಪಡಬಾರದು ಇದನ್ನ ಧೈರ್ಯದಿಂದ ಎದುರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ರಾಜ್ಯ ತರಬೇತಿದಾರರಾದ ಟಿ. ಆಂಜನೇಯ. ಡಾ ಶಾದಿಯಾ ನೌಸಿನ್, ಮಹಿಳಾ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಗೀತಾ ಚೌದರಿ, ಕಾರ್ಯದರ್ಶಿಯಾದ ಭಾರತಿ ಹಗಲೂರು. ಬಿ. ಶ್ರೀದೇವಿ, ಬಸಮ್ಮ ಹಣವಾಳ, ಆಸ್ಪತ್ರೆಯ ಸಿಬ್ಬಂದಿಗಳಾದ ರಾಜು, ವಲಿಬಾಷ, ಸಂಸ್ಥೆಯ ಪದಾಧಿಕಾರಿಗಳಾದ ಮಂಜುಳಾ ಸಂಡೂರ, ವಿರುಪಾಕ್ಷಿ, ಪ್ರಕಾಶ್, ಶರಣಪ್ಪ, ವೀರೇಶ್, ಲಕ್ಷಿö್ಮÃ ಎಮ್, ದ್ರಾಕ್ಷಾಯಿಣಿ, ಲಕ್ಷಿö್ಮÃ ಸೇರಿದಂತೆ ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ರೈಸ್ ಬೌಲ್ ಗಂಗಾವತಿ ಸರ್ವ ಮಹಿಳಾ ಸದಸ್ಯರು ಭಾಗವಹಿಸಿದ್ದರು
ಈ ಕಾರ್ಯಕ್ರಮದಲ್ಲಿ ೩೦ ಹೆಚ್.ಐ.ವಿ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ ಹೊಸಕೇರಾ ಮಾಡಿ, ವಂದಿಸಿದರು.