Breaking News
16ನೇ ರಾಷ್ಟ್ರೀಯ ಮತದಾರರ ದಿನಾಚರಣೆಮತದಾನ ಕೇವಲ ಹಕ್ಕಲ್ಲ, ಸಂವಿಧಾನಾತ್ಮಕ ಕರ್ತವ್ಯ – ನ್ಯಾ. ಸರಸ್ವತಿ ದೇವಿ
16th National Voters Day
Voting is not just a right, it is a constitutional duty - Justice Saraswati Devi

16ನೇ ರಾಷ್ಟ್ರೀಯ ಮತದಾರರ ದಿನಾಚರಣೆ
ಮತದಾನ ಕೇವಲ ಹಕ್ಕಲ್ಲ, ಸಂವಿಧಾನಾತ್ಮಕ ಕರ್ತವ್ಯ – ನ್ಯಾ. ಸರಸ್ವತಿ ದೇವಿ

ಕೊಪ್ಪಳ ಜನವರಿ 25 (ಕರ್ನಾಟಕ ವಾರ್ತೆ): ಮತದಾನ ಎಂಬುದು ಕೇವಲ ಹಕ್ಕಲ್ಲ, ಅದು ನಮ್ಮ ಸಂವಿಧಾನಾತ್ಮಕ ಕರ್ತವ್ಯವಾಗಿದೆ ಎಂದು ಕೊಪ್ಪಳದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಸರಸ್ವತಿ ದೇವಿ ಹೇಳಿದರು.
ಅವರು ಭಾನುವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಭಾರತ ಚುನಾವಣಾ ಆಯೋಗ, ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ, ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವದ ಶಕ್ತಿ ಕಾನೂನು ಮತ್ತು ಜನರ ವಿಶ್ವಾಸದ ಮೇಲೆ ನಿಂತಿದ್ದು, ಆ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಮುಖ ಸಾಧನವೇ ಮತದಾನ ಆಗಿದೆ. ಹಾಗಾಗಿ ದೇಶದ ಪ್ರತಿಯೊಬ್ಬ ಅರ್ಹ ನಾಗರಿಕನು ಮತದಾನ ಹಕ್ಕನ್ನು ಜವಾಬ್ದಾರಿಯಿಂದ ಬಳಸಬೇಕು. ಮತದಾನ ಪ್ರಕ್ರಿಯೆಯು ಪವಿತ್ರವಾಗಿದ್ದು, ಇದು ನಮಗೆ ಸಂವಿಧಾನ ನೀಡಿದ ಅತ್ಯಂತ ಮಹತ್ವದ ಹಕ್ಕಾಗಿದೆ ಎಂದರು.
ಮಹಿಳೆಯರು, ಯುವಕರು ಹಾಗೂ ಮೊದಲ ಬಾರಿ ಮತದಾನ ಮಾಡುವ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮತದಾನದ ಮೂಲಕವೇ ನ್ಯಾಯ, ಸಮಾನತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಬಲಪಡಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ  ಅವರು ಮಾತನಾಡಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯ ಮತದಾನವಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ತಮ್ಮ ಅಮೂಲ್ಯ ಮತದಾನ ಹಕ್ಕನ್ನು ಜವಾಬ್ದಾರಿಯಿಂದ ಬಳಸಬೇಕು. ಮತದಾನವು ನಮ್ಮ ಸಂವಿಧಾನಾತ್ಮಕ ಕರ್ತವ್ಯ ಆಗಿದೆ. ಯುವಕರು ಹಾಗೂ ಮೊದಲ ಬಾರಿ ಮತದಾನ ಮಾಡುವ ಹೊಸ ಮತದಾರರು ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬಲಿಷ್ಠ ಮತ್ತು ಪಾರದರ್ಶಕ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.
ಮತದಾರರ ಪಟ್ಟಿಯ ನಿಖರತೆ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಪ್ರಮುಖ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ಮೂಲಕ ನಿರಂತರವಾಗಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಮತದಾರರ ಪ್ರತಿಜ್ಞಾ ವಾಚನವನ್ನು ಕ್ಯಾಪ್ಟನ್ ಮಹೇಶ ಎಸ್ ಮಾಲಗಿತ್ತಿ ಅವರು ಬೋಧನೆ ಮಾಡಿದರು.
ಮತದಾರರ ಜಾಗೃತಿ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿಎಲ್‌ಓ, ಸುಪರವೈಜರ್, ಇ.ಎಲ್.ಸಿ ಸಂಯೋಜಕರು ಹಾಗೂ ಮಕ್ಕಳ ಸಂಸತ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಇತರೆ ಸಾಧಕರಿಗೆ ಸನ್ಮಾನಿಸಲಾಯಿತು. ಹೊಸದಾಗಿ ನೋಂದಣಿಯಾದ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ್ ಎಸ್. ದರಗದ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತಕುಮಾರ್, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೆಶಕ ಜಗದೀಶ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕ ಸೋಮಶೇಖರಗೌಡ ಪಾಟೀಲ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಾಗಮಣಿ ಹೊಸಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಜಿಲ್ಲಾ ಸ್ವೀಪ್ ಸಮಿತಿಯ ಇತರೆ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಶಕ್ತಿ ಯೋಜನೆಯಲ್ಲಿ ಆಧಾರ್ ನಂಬರ್ ನಮೂದಿಸಲು ಮ್ಯಾಗಳಮನಿ ಒತ್ತಾಯ.
Magalamani insists on entering Aadhaar number in Shakti Yojana.

ಗಂಗಾವತಿ :-29-ರಾಜ್ಯ ಸರಕಾರ ಮಹಿಳೆಯರು ಉಚಿತ ಪ್ರಯಾಣ ಮಾಡಲು ಶಕ್ತಿ ಯೋಜನೆ ಜಾರಿಗೆ ತಂದಿದೆ. ಆಧಾರ್ ನಂಬರ್ ನಮೂದು ಮಾಡದೇ ಇರುವದರಿಂದ ಸಾರಿಗೆ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ಆಗುವ ಸಾಧ್ಯತೆ ಇದೆ ಎಂದು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸರಕಾರದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ದಾಖಲೆಗಳನ್ನು ನಮೂದು ಮಾಡುತ್ತಾರೆ, ಪಡಿತರ, ವೃದ್ಯಾಪ್ ವೇತನ, ಅಂಗವಿಕಲ ವೇತನ, ವಿಧವಾ ವೇತನ, ವಿದ್ಯಾರ್ಥಿವೇತನ, ಪಡೆಯಲು ಹಾಗೂ ಬಸ್ ನಲ್ಲಿ ಪ್ರಯಾಣಿಸುವಾಗ ಹಿರಿಯ ನಾಗರಿಕರ ಮತ್ತು ಅಂಗವಿಕಲರ ವಿನಾಯಿತಿ ಪಡೆಯುವಾಗ, ಆಧಾರ್ ನಂಬರ್ ನಮೂದಿಸಿತ್ತಾರೆ. ಆದರೆ ನೂರಾರು ಕಿಲೋಮೀಟರ್ ದೂರ ಪ್ರಯಾಣ ಮಾಡುವ ಕೋಟಿಗಟ್ಟಲೆ ಸರಕಾರ ಹಣ ಖರ್ಚು ಮಾಡುವ ಶಕ್ತಿ ಯೋಜನೆಯಲ್ಲಿ ಆಧಾರ್ ನಂಬರ್ ಯಾಕೇ ನಮೂದು ಮಾಡುತ್ತಿಲ್ಲ ಎಂದು ಮ್ಯಾಗಳಮನಿ ಸಾರಿಗೆ ಇಲಾಖೆಯನ್ನು ಪ್ರಶ್ನಿಸಿದ್ದಾರೆ. ಇದರಿಂದ ಸರಕಾರಕ್ಕೆ ಅಪಾರ ನಷ್ಟ ಆಗುತ್ತಿದೆ ಅಲ್ಲದೇ ಬ್ರಷ್ಟಾಚಾರ ನಡೆಯುವ ಸಾಧ್ಯತೆ ಇರುವದರಿಂದ ಕೂಡಲೇ ಆಧಾರ್ ನಂಬರ್ ನಮೂದಿಸಲು ಕ್ರಮಕೈಗೊಳ್ಳಬೇಕೆಂದು ಸಾರಿಗೆ ಸಚಿವರನ್ನು ಮ್ಯಾಗಳಮನಿ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವದೆಂದು ಮ್ಯಾಗಳಮನಿ ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ದುರ್ಗೇಶ್ ಹೊಸಳ್ಳಿ, ಪಂಪಾಪತಿ ಕುರಿ,ರಾಮಣ್ಣ ರುದ್ರಾಕ್ಷಿ,ಬಸವರಾಜ್ ನಾಯಕ, ಮಂಜುನಾಥ ಚನ್ನದಾಸರ, ನರಸಪ್ಪ, ಜಂಬಣ್ಣ ಶಿಂದೊಳ್ಳಿ, ಹುಲ್ಲೇಶ್, ಚಾoದಪಾಷಾ, ಮುತ್ತು, ಮತ್ತಿತರರು ಇದ್ದರು.

ಈದ್ ಮಿಲಾದ್ ಹಬ್ಬದ ಆಚರಣೆಯ ಮೆರವಣಿಗೆಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಭಾಗಿಯಾಗಿ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು
MLA Gali Janardhana Reddy participated in the Eid Milad celebration procession and extended greetings to Muslim brothers and sist

ಗಂಗಾವತಿ ನಗರದಲ್ಲಿ ಜರುಗಿದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ಜಯಂತಿಯ ಈದ್ ಮಿಲಾದ್ ಹಬ್ಬದ ಆಚರಣೆಯ ಮೆರವಣಿಗೆಯಲ್ಲಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅವರು ಭಾಗಿಯಾಗಿ ಮುಸ್ಲಿಂ ಬಾಂಧವರಿಗೆ ಶುಭಾಶಯಗಳನ್ನು ತಿಳಿಸಿ, ಸಿಹಿ ಹಂಚಿದರು.

ಮೆರವಣಿಗೆಯಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ ಅವರನ್ನು ಭೇಟಿ ಮಾಡಿದರು, “ಗಣೇಶೋತ್ಸವ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಯಾವುದೇ ಆಹಿತಕರ ಘಟನೆಗಳು ಜರುಗದಂತೆ ಕಾಳಜಿ ವಹಿಸಿ ಖುದ್ದಾಗಿ ಅವರೇ ಉಪಸ್ಥಿತಿಯಲಿದ್ದು ಭದ್ರತೆ ನೀಡಿರುವುದಕ್ಕಾಗಿ ನನ್ನ ಧನ್ಯವಾದಗಳು” ಎಂದು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಮೌಲಾಸಾಬ್, ಮೆಹಫುಜ್ ಅಲಿಖಾನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಹುಸ್ಮಾನ್, ಜಬ್ಬರ್ ಬಿಚ್ಚುಗತ್ತಿ, ಫಾರೂಕ್, ರಾಜ್ ಮಹಮದ್, ಮುಸ್ತಾಖ್ ಆಲಿ, ಬಿಲ್ಡರ್ ಮೆಹಬೂಬ್, ಸೈಯದ್ ಆಲಿ, ಜಿಲಾನ್ ಪಾಷಾ ಖಾದ್ರಿ, ಸೈಯದ್ ಹುಸೇನ್ ಭಾಷಾ, ರಫೀಕ್, ಶಫಿ, ಬುಲೆಟ್ ಸಲೀಂ, ಝುಬೇರ್, ಬಿಜೆಪಿಯ ನಗರಮಂಡಲ ಅಧ್ಯಕ್ಷರಾದ ಚಂದ್ರು ಹೀರೂರು, ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ಮನೋಹರ ಗೌಡ ಹೇರೂರು, ಚನ್ನವೀರನ ಗೌಡ್ರು, ದುರ್ಗಪ್ಪ ದಳಪತಿ, ವೀರೇಶ್ ಸೂಳೆಕಲ್, ಉಪಸ್ಥಿತರಿದ್ದರು.

ಸುದ್ದಿ ಮಾಡಲು ಹೋದಾಗ  ಪತ್ರಕರ್ತನ ಮೊಬೈಲ ಕಿತ್ತೆಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ ವೈದ್ಯರ  ವಿರುದ್ದ ಸೂಕ್ತ ಕ್ರಮಕ್ಕೆ ಆರ್ ಚನ್ನಬಸವ ಒತ್ತಾಯ
R. Channabasava demands appropriate action against doctors who snatched journalist's mobile phone and abused him with abusive words while he was covering news

ಗಂಗಾವತಿ : ನಗರದ ಕನಕಗಿರಿ  ರಸ್ತೆಯ  ಇರುವ ವಿವೇಕಾನಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೇಲ್ಬಾಗದ ಕಟ್ಟಡದ ಕಾಮಗಾರಿಯು ನಡೆಯುತ್ತಿದ್ದು ಇಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಯಾವುದೇ ತರಹದ ಸುರಕ್ಷತೆ ಇಲ್ಲದೆ ಕೆಲಸಗಳು ನಡೆಸುತ್ತಿದ್ದಾರೆ.

ಈ ಆಸ್ಪತ್ರೆಯ ಕೆಲಸಗಳು ನಡೆಯುತ್ತಿರುವಾಗಲೇ ಇತ್ತ ಇನ್ನೊಂದು ಕಡೆ ಹೊರಗಿಂದ ಬರುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಅದು ಹೇಗೆ ಅಂದರೆ ಕಾಮಗಾರಿಯ ಸಾಕಷ್ಟು ಧೂಳು ತುಂಬಿದ, ದವಾಖಾನೆಯಾಗಿದೆ ಇಲ್ಲಿ ಹೆಚ್ಚಾಗಿ ಈ ಆಸ್ಪತ್ರೆಗೆ ಡೆಲಿವರಿ ಪೇಷಂಟ್ ಬರುತ್ತದೆ. ಇಷ್ಟೊಂದು ಧೂಳು ತುಂಬಿದ ದವಾಖಾನೆಯಲ್ಲಿ ಚಿಕಿತ್ಸೆ ಪಡಲಿಕ್ಕೆ ಬರುವಂತಹ ರೋಗಿಗಳ ಸ್ಥಿತಿ ಏನಾಗಬಹುದು ಮತ್ತು ಇದರ ಬಗ್ಗೆ ಪ್ರಶ್ನೆ ಮಾಡಲು ಹೋದ ಸಂದರ್ಭದಲ್ಲಿ ಪತ್ರಕರ್ತ ಮಂಜುನಾಥ ಆರತಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಫೋನ್ ಮತ್ತು ಐಡಿ ಕಾರ್ಡ್ ಕಿತ್ತುಹೆಸೆದ ಘಟನೆ ನಡೆದಿದೆ. ಈರೀತಿ ಪತ್ರಕರ್ತ ಮೇಲೆ ಮೇಲಿಂದ ಮೇಲೆ ನಡೆಯುತ್ತಲಿದೆ.

ಆದ್ದರಿಂದ ಜಿಲ್ಲಾ ಆಡಳಿತ ವೈದ್ಯಧಿಕಾರಿಗಳಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ತಾಲೂಕ ಪ್ರಧಾನ ಕಾರ್ಯದರ್ಶಿ ಆರ್ ಚನ್ನಬಸವ ಚಲವಾದಿ. ಅವರು ಈ ಘಟನೆಗೆ ಕಾರಣರಾದ ಆಸ್ಪತ್ರೆಯ ಮುಖ್ಯಸ್ಥರ ಮೇಲೆ ಮತ್ತು ಮೊಬೈಲ್ ಕಸಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಶ್ರೀನಿವಾಸ್ , ಹೇ ನೀನು ಯಾರೋ ಲೇ ಇದನೆಲ್ಲ ಕೇಳೋಕೆ ನೀನ್ಯಾರು, ಎಂದು ಏಕವಚನದಲ್ಲಿ ನಿಂದಿಸಿದ ವೈದ್ಯರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಡಿ ಹೆಚ್ಚು ಓ ಅವರಿಗೆ ಒತ್ತಾಯಿಸುತ್ತೇವೆ.

ಈ ಆಸ್ಪತ್ರೆಯಲ್ಲಿ ಸರಿಯಾಗಿ ಸ್ವಚ್ಛತೆ ಕುಡಿಯಲು ಯೋಗ್ಯ ಇಲ್ಲದ ನೀರು, ಅಲ್ಲೇ ನಡೆಯುತ್ತಿರುವ ಎಲೆಕ್ಟ್ರಿಕ್ ಕೆಲಸಗಳು, ಗೋಡೆ ಕಟ್ಟುವ ಕೆಲಸ, ಕೊರೆಯುವ ಕೆಲಸ, ಇನ್ನೂ ಮುಂತಾದ ಕೆಲಸಗಳು ಬಾಕಿ ಇದ್ದರೂ ಸಹ ತರಾತುರಿಯಲ್ಲಿ ಕಟ್ಟಡ ಕಾಮಗಾರಿಗಳು ಸಾಗುತ್ತಿವೆ.

ಇವರ ಹಣದಾಸೆಗೆ ಇತ್ತಾ ರೋಗಿಗಳಿಗೆ ಅಲ್ಲೇ ಗ್ಲೋಕೋಸ್ ಹಾಕುತ್ತಾರೆ, ಅವರನ್ನು ಬೇರೆ ಕಡೆ ಚಿಕಿತ್ಸೆ ನೀಡದೆ ಧೂಳಿನಿಂದ ಕುಡಿದ ಹಾಲ್ ನಲ್ಲಿ ಇರಿಸಿದ್ದಾರೆ.ಇದರಿಂದ ಆನರೋಗ್ಯದಲ್ಲಿ ಇರುವ ರೋಗಿಗಳಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಜವಾಬ್ದಾರಿ, ಇದನ್ನೆಲ್ಲಾ ಕಂಡು ಪತ್ರಕರ್ತರೊಬ್ಬರು ವಿಚಾರಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ವೀಡಿಯೊ ಮಾಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ತಡೆದು ಏಕವಚನದಲ್ಲಿ ಮಾತನಾಡಿದ್ದಾರೆ.

ಇಂತಹ ವೈದ್ಯರು ಇನ್ನೂ ಬಡವರು,ದಲಿತರು, ಸಾರ್ವಜನಿಕರ ಮೇಲೆ ಇನ್ನೂ ಇಷ್ಟೊಂದು ದೌರ್ಜನ್ಯ ಪ್ರಕರಣಗಳು ನಡೆದಿರುವುದೆಂಬುದು ಎಂಬುದು ಅನುಮಾನಗಳು ಮೂಡುತ್ತವೆ ಆದ್ದರಿಂದ ಕೂಡಲೇ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರುಗಳು ಈ ಆಸ್ಪತ್ರೆಗೆ ಬೇಟಿ ಕೊಟ್ಟು ಇಲ್ಲಿ ನಡೆಯುವಂತಹ ಕಾಮಗಾರಿ ನಿಲ್ಲಿಸಿ ಅಥವಾ ಈ ಆಸ್ಪತ್ರೆ ಇರುವಂತ ರೋಗಿಗಳನ್ನು ಕಾಮಗಾರಿ ಪೂರ್ಣಗೊಳ್ಳುವವರೆಗೆ ಬೇರೆ ಕಡೆ ಸ್ಥಳಾಂತರಿಸಬೇಕು ಮತ್ತು ಪತ್ರಕರ್ತನ ನಿಂದಿಸಿದ ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರಿಕೆ ಪ್ರಕಟನೆ ಮೂಲಕ ಒತ್ತಾಯಿಸಿ ದ್ದಾರೆ.

ಹೆಣ್ಣುಮಕ್ಕಳು ಸಾರಿಗೆ ಬಸ್‌ಗಳಲ್ಲಿ 500 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿ ಇತಿಹಾಸ ನಿರ್ಮಿಸಿದ ಸಂಧರ್ಭ ಗಂಗಾವತಿ ಯಲ್ಲಿ ಸಂಭ್ರಮಾಚರಣೆ

Celebrations in Gangavathi as girls create history by travelling 500 crore times for free in public transport buses

ಗಂಗಾವತಿ: ಕಾಂಗ್ರೆಸ್ ಕಾರ್ಯಕರ್ತರಿಂದ ನಗರ ಬಸ್ಸ್ ನಿಲ್ದಾಣದಲ್ಲಿ ಸಂಬ್ರಮಾಚರಣೆ ಮಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಯಡಿ ಉದ್ಯೋಗ, ಶಿಕ್ಷಣ, ಆರೋಗ್ಯ ಮುಂತಾದ ಕಾರಣಗಳಿಗಾಗಿ ನಾಡಿನ ಹೆಣ್ಣುಮಕ್ಕಳು ಸಾರಿಗೆ ಬಸ್‌ಗಳಲ್ಲಿ 500 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ಸ್ವಾವಲಂಬನೆಯ ಮಹತ್ವದ ಹೆಜ್ಜೆ ‘ಶಕ್ತಿ’ ಯೋಜನೆಯ ಅಭೂತಪೂರ್ವ ಯಶಸ್ಸು, ಜನಬೆಂಬಲ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ಮತ್ತಷ್ಟು ಶಕ್ತಿ ತುಂಬಿದೆ ಎಂದರು.

ಶ್ರೀಮತಿ ಹಕ್ಕಂಡಿ ಅವರ ಕೃತಿಗಳ ಲೋಕಾರ್ಪಣೆ
Public presentation of Mrs. Hakkandi's works

ಗಂಗಾವತಿ:ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಕೊಪ್ಪಳ ಹಾಗೂ ತಾಲೂಕು ಘಟಕ ಗಂಗಾವತಿ ಹಾಗೂ ಭರತದೀಪ್ತಿ ಪ್ರಕಾಶನ ಗಂಗಾವತಿ ಅವರಿಂದ ಶ್ರೀಮತಿ ಜಯಶ್ರೀ ಶರಣಪ್ಪ ಹಕ್ಕಂಡಿ ಇವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿಯವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣೆಗೌಡ ಪೊಲೀಸ್ ಪಾಟೀಲ್ ಜಿಲ್ಲಾ ಕಸಪಾ ಅಧ್ಯಕ್ಷರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹೇಮಾ ಪಟ್ಟಣಶೆಟ್ಟಿ, ಡಾ.ಶಿವಲಿಂಗಪ್ಪ ಹಂದ್ಯಾಳ, ಡಾ.ಜಾಜಿ ದೇವೇಂದ್ರಪ್ಪ, ಅಜಮೀರ್ ನಂದಾಪುರ, ಶಂಭುಲಿಂಗನಗೌಡ ಪಾಟೀಲ್, ಡಾ. ಮಮ್ತಾಜ್ ಬೇಗಂ, ಡಾ; ಮಲ್ಲನಗೌಡ, ಡಾ: ಶಿವಕುಮಾರ್ ಮಾಲಿಪಾಟೀಲ್, ಕೆ ಚನ್ನಬಸಯ್ಯ ಸ್ವಾಮಿ, ಗುಂಡೂರ್ ಪವನ್, ರುದ್ರೇಶ್ ಆರಾಳ್, ಅಶೋಕ್ ಗುಡಿ ಕೋಟಿ, ಛತ್ರಪ್ಪ ತಂಬೂರಿ ಹಾಗೂ ಸಾಹಿತ್ಯ ಅಭಿಮಾನಿಗಳು ಉಪಸ್ಥಿತರಿದ್ದರು.

ಹಿರೇಜಂತಕಲ್ಲ ಚಲುವಾದಿ ವಾರ್ಡ ನಿಂದ ಹೊಸಹಳ್ಳಿ ತೆರಳುವ ಚರಂಡಿ ಕಾಮಗಾರಿ ಕಳಪೆ: ಕ್ರಮಕ್ಕೆ ಒತ್ತಾಯ

 

Sewerage work from Hirejantakalla Chaluvadi Ward to Hosahalli is poor: Action demanded

ಗಂಗಾವತಿ:  ನಗರದ ನಗರಸಭೆ ವ್ಯಾಪ್ತಿಯಲ್ಲಿ ಬರುವ ಚಾರ್ಡ ೨೮ ಹಿರೇಜಂತಕಲ್ಲ ಚಲುವಾದಿ ವಾರ್ಡ ದಿಂದು ಹೊಸಹಳ್ಳಿ ತೆರಳುವ ಮಾರ್ಗದಲ್ಲಿ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ ಕಳಪೆ ಮಟ್ಟದಿದ ಕೂಡಿದ್ದು, ಹಿರಿಯ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಯುವ ಪತ್ರಕರ್ತ ಹಾಗೂ ಚಿಂತಕರ ಎಚ್ ಸಿ ಹಂಚಿನಾಳ ಒತ್ತಾಯಿಸಿದ್ದಾರೆ.

ಮಳೆ ಬಂದರೆಮಲೀನ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ದುರ್ವಾಸನೆ ಹರಡಿದೆ. ಅಲ್ಲದೇ ರೋಗ ಭೀತಿಯೂ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಚರಂಡಿ ನಿರ್ಮಿಸಿ ಎಂದು ಕಳೆ ದಿನಗಳ ಹಿಂದೆ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು.. ನಗರಸಭೆ ಅಧಿಕಾರಿಗಳು, ಚರಂಡಿ ನಿರ್ಮಿಸಲು ಅಂದಾಜು 65ಲಕ್ಷ ರೂ(.25) ಮೀಸಲಿಟ್ಟಿದ್ದಾರೆ. ಇದು ಸ್ಲಾಮ್ ಬೋರ್ಡ್ ದಿಂದ ಮತ್ತು ನಿರ್ಮಿರ್ತಿ ಕೇಂದ್ರ ಇಲಾಖೆ, (ಲ್ಯಾಂಡ್‌ ಅರ್ಮಿ) ಯಲ್ಲಿ ಇರುವ ಅನುದಾನವನ್ನು ಸರಿಯಾಗೆ ಬಳಕೆ ಮಾಡದೆ ಆರೆಬರೆ ಕಾಮಗಾರಿ ಮಾಡಿ ಬಿಲ್ ಎತ್ತವಳಿ ಮಾಡಿದ್ದಾರೆ.

ಇದರಲ್ಲಿ ಸಿಸಿ ರಸ್ತೆ,ಶೌಚಾಲಯ, ಮತ್ತು ಚರಂಡಿ ನಿರ್ಮಾಣ ಮಾಡಬೇಕಿತ್ತು. ಅದರೆ ಬರೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿ ಉಳಿದ ಅನುದಾನ ವನ್ನು ನುಂಗಿ ನೀರು ಕುಡಿದ ಅಧಿಕಾರಿಗಳು
ಗುತ್ತಿಗೆದಾರರು. ಕಾಮಗಾರಿ ಕೈಗೆತ್ತಿಕೊಂಡಿದ್ದು, ಸರಕಾರದ ಸೂಚನೆ ಪ್ರಕಾರ ಕಾಮಗಾರಿ ಮಾಡದೆ, ಚಿಕ್ಕದಾಗಿ ಚರಂಡಿ ನಿರ್ಮಿಸಿದ್ದಾರೆ.


ಹಳೆಯ ಚರಂಡಿ ಅದರ ಮೇಲೆ ಕಾಂಕ್ರೀಟ್ ನ್ನು ಹಾಕಿ ಚರಂಡಿ ನಿರ್ಮಾಣ ಮಾಡುತ್ತಿರುವುದ ಸರಿಯಲ್ಲ ಎಂದು ಆರೋಪ ಮಾಡಿದ್ದರು. ಚರಂಡಿಯ ಮೇಲೆ ನಿರ್ಮಿಸಿದ ಗೋಡೆಗಳನ್ನು ತೆರವುಗೊಳಿಸಬೆಕೆಂದು ಕೇಳಿಕೊಳ್ಳುತ್ತವೆ.
ಚರಂಡಿ ಕಾಮಗಾರಿ ಎಂ ಸ್ಯಾಂಡ್‌ಮಯ! : ಈ ಚರಂಡಿ ಕಾಮಗಾರಿ ಎಲ್ಲವೂ ಎಂ. ಸ್ಯಾಂಡ್ ಮಯವಾಗಿದೆ, ಇದರಲ್ಲಿ ಎಷ್ಟು ಸಿಮೆಂಟ್‌ ಮಿಶ್ರಣವಾಗಿದೆ ಎಂಬುದು ತಿಳಿದಿಲ್ಲ.

ಚರಂಡಿ ಕಾಮಗಾರಿಯಲ್ಲೂ ಬರಿ ಎಂ. ಸ್ಯಾಂಡ್ ಹೆಚ್ಚಾಗಿ ಬಳಸಿ ರುವುದರಿಂದ ಎಲ್ಲವೂ ಎಂ ಸ್ಯಾಂಡ್‌ಮಯಚರಂಡಿ ಕಾಮಗಾರಿ ನಿರ್ಮಾಣ ಮಾಡುತ್ತಿರುವುದು,ವಿನ್ಯಾಸದಂತೆ ಇಲ್ಲ( ಎಸ್ಟೇಮೇಟ್ ಪ್ರಕಾರ) ಹೊಸದಾಗಿ ಚರಂಡಿ ನಿರ್ಮಿಸಿ, ಅದರಿಂದ ಬರುವ ದುರ್ವಾಸನೆ ತಡೆಗಟ್ಟಿ.ಇಲ್ಲಿ ವಾಸಿಸುವ ಜನರು ಸ್ಲಾಮ್ ಜನರು.

ನಿತ್ಯ ಚರಂಡಿ ದುರ್ವಾಸನೆ ಬೀರುವುದು. ಇದನ್ನು ತಡೆಗಟ್ಟಲು ಸುವ್ಯವಸ್ಥಿತವಾದ ಚರಂಡಿ ಮಾಡಿ ಇಲ್ಲಾಂದರೆ ಮುಂದಿನ ದಿನಗಳಲ್ಲಿ ನಗರಸಭೆ ಮುಂದೆ ಹೋರಾಟ ಮಾಡಬೇಕಾದ ಅನಿವಾರ್ಯ.

ಹುಟ್ಟುಹಬ್ಬವನ್ನು ಬುದ್ಧಿಮಾಂಧ್ಯ ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ಹಾಲು ಹಣ್ಣು ಹಂಚುವುದರ ಮೂಲಕ ಜನ್ಮದಿನ ಆಚರಣೆ.
Birthdays are celebrated by distributing milk and fruits to mentally retarded children and the elderly.

ಗಂಗಾವತಿ: ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ವಿರುಪಾಕ್ಷಿಗೌಡ ನಾಯಕ ಅವರು ತಮ್ಮ ಜನ್ಮದಿನದ ಅಂಗವಾಗಿ ನಗರದ ಲಯನ್ಸ್ ಬುದ್ಧಿಮಾಂಧ್ಯ ಮಕ್ಕಳಿಗೆ ಡ್ರಾಯಿಂಗ್ ಬುಕ್, ಸ್ಕೆಚ್ ಪೆನ್ಸಿಲ್ ನೀಡುವುದರ ಮೂಲಕ ಹಾಗೂ ೬೦ ಹಾಸಿಗೆ ಹೆರಿಗೆ ಆಸ್ಪತ್ರೆಯಲ್ಲಿ ಹಣ್ಣು ಬ್ರೆಡ್ ವಿತರಣೆ ಮೂಲಕ ಮತ್ತು ನವ ಜೀವನ ವೃದ್ರಾಶ್ರಮದಲ್ಲಿ ವಯೋವೃದ್ಧರಿಗೆ ಹಣ್ಣು ಹಾಗೂ ಊಟ ವಿತರಣೆ ಮೂಲಕ ಆಚರಣೆ ಮಾಡಿಕೊಂಡರು.
ನAತರ ಅವರು ಗಂಗಾವತಿ ಪ್ರವಾಸಿ ಮಂದಿರದಲ್ಲಿ ಶ್ರೀಯುತ ವಿರುಪಾಕ್ಷಿಗೌಡ ನಾಯಕ ಇವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಪರಸಪ್ಪ ನಾಯಕ ಹಾಗೂ ಗಂಗಾವತಿ ನಗರ ಘಟಕದ ಉಪಾಧ್ಯಕ್ಷರನ್ನಾಗಿ ಹುಲಿಗೇಶ್, ಹೊಸಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಹಾಗೂ ವಿಜಯನಗರ ಜಿಲ್ಲಾ ಅಧ್ಯಕ್ಷರಾದ ರಾಜು ಗುಜ್ಜಲ್ ಹಾಗೂ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳು, ಕೊಪ್ಪಳ ಜಿಲ್ಲಾ ಘಟಕ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು. ಹಾಗೂ ಇನ್ನೂ ಅನೇಕರು ಪಾಲ್ಗೊಂಡಿದ್ದರು.

ಶ್ರೀರಾಮನಗರದಲ್ಲಿ ನಡೆಯುವ ಬೃಹತ್ ಆರೋಗ್ಯ ತಪಾಸಣಾ ಶಿಬಿರದಪೂರ್ವಭಾವಿ ಸಭೆ ಯಶಸ್ವಿ
Pre-meeting for massive health check-up camp in Sriramanagara a success

ಗಂಗಾವತಿ: ಲಯನ್ ಕ್ಲಬ್ ಗಂಗಾವತಿ, ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ, ಭಾರತೀಯ ವೈದ್ಯಕೀಯ ಸಂಘ (ಐ.ಎಂ.ಎ) ಗಂಗಾವತಿ, ಐ.ಎಂ.ಎ ಮೈತ್ರಿ ಗಂಗಾವತಿ, ವೈದೇಹಿ ಆಸ್ಪತ್ರೆ ಬೆಂಗಳೂರು, ಗ್ರೇಸ್ ಕ್ಯಾನ್ಸರ್ ಫೌಂಡೇಷನ್ ಹೈದರಾಬಾದ್ ಇವರ ಸಂಯುಕ್ತಾಶ್ರಯದಲ್ಲಿ ಶ್ರೀರಾಮನಗರದ ಎ.ಕೆ.ಆರ್.ಡಿ ಪಿ.ಯು ಕಾಲೇಜ್ ಆವರಣದಲ್ಲಿ ಜುಲೈ-೧೬ ಬುಧವಾರ ಬೆಳಿಗ್ಗೆ ೯:೦೦ ರಿಂದ ಮಧ್ಯಾಹ್ನ ೨:೦೦ ಗಂಟೆಯವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ, ನೇತ್ರ ತಪಾಸಣಾ, ಹೃದಯರೋಗ, ನರಸಂಬಂಧಿ ಕಾಯಿಲೆಗಳಿಗೆ ಸಂಬಂಧಪಟ್ಟಂತೆ ತಪಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು,

ಈ ಸಂಬಂಧವಾಗಿ ನಡೆದ ಪೂರ್ವಭಾವಿ ಸಭೆಯನ್ನು ಶುಕ್ರವಾರ ಶ್ರೀರಾಮನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಎಂದು ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ, ಶಿವಕುಮಾರ ಮಾಲಿಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿ, ಈ ಆರೋಗ್ಯ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಲಯನ್ ಸುಬ್ರಹ್ಮಣ್ಯೇಶ್ವರರಾವ್ ಅವರು ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಕಾಡುತ್ತಿರುವ ಸ್ತನ ಕ್ಯಾನ್ಸರ್ ತಡೆಗಟ್ಟಲು ಮೆಮೋಗ್ರಾಫಿಯಿಂದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆಯನ್ನು ಉಚಿತವಾಗಿ ಮಾಡಲಾಗುವುದು.

ಅಲ್ಲದೇ ಈ ಉಚಿತ ಆರೋಗ್ಯ ಶಿಬಿರದಲ್ಲಿ ನುರಿತ ವೈದ್ಯರಿಂದ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು ಹಾಗೂ ಗಂಭೀರ ಕಾಯಿಲೆಗಳಾದ ಹೃದಯರೋಗ, ಕಣ್ಣಿನ ತಪಾಸಣೆ, ಸಕ್ಕರೆ ಕಾಯಿಲೆ, ಬಿ.ಪಿ., ದಂತಚಿಕಿತ್ಸೆ, ಎಲುಬು ಕೀಲು ಸಮಸ್ಯೆ, ಸ್ತ್ರೀರೋಗ ತಪಾಸಣೆ ಸೇರಿದಂತೆ ಮುಂತಾದ ಕಾಯಿಲೆಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗುವುದು ಹಾಗೂ ಈ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ಹಾಗೂ ನೇತ್ರರೋಗಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗುವುದು ಎಂದರು.


ಈ ಸಭೆಯ ಅಧ್ಯಕ್ಷತೆಯನ್ನು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿಯಾದ ಡಾ, ವೀರಾನಾಯಕ ವಹಿಸಿ ಮಾತನಾಡಿ, ನಮ್ಮ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿ ಶಿಬಿರದ ಪ್ರಚಾರ ಹಾಗೂ ಜಾಗೃತಿಯನ್ನು ಆಶಾ ಕಾರ್ಯಕರ್ತೆಯರಿಂದ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದ ರಿಂದ ಮಾಡಲಾಗುವುದು ಎಂದರು.
ಲಯನ್ ಹರಿಬಾಬು ಅವರು ಮಾತನಾಡಿ, ಈ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಲು ವಿನಂತಿಸಿದರು.


ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಗಂಗಾವತಿ ಕಾರ್ಯದರ್ಶಿಯಾದ ಜಂಬಣ್ಣ ಐಲಿ, ಖಜಾಂಚಿಯಾದ ಶಿವಪ್ಪ ಗಾಳಿ, ಸದಸ್ಯರುಗಳಾದ ವೆಂಕಟ ರತ್ನಂ, ಸಿದ್ದಣ್ಣ ಜಕ್ಲಿ, ವೆಂಕಟೇಶ್ವರರಾವ್, ಸುಬ್ಬರಾಜು, ಶ್ರೀನಿವಾಸು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಹಾಗೂ ಶ್ರೀರಾಮನಗರದ ಗಣ್ಯರು, ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು, ಶ್ರೀರಾಮನಗರ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ

ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ನಗರ ಠಾಣೆ ಪಿಐ ಪ್ರಕಾಶ ಮಾಳಿ ಇವರನ್ನು ಎಸ್ಪಿ ಡಾ.ರಾಮ ಎಲ್ ಆರಸಿದ್ದಿ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.
Gangavathi DySP Siddalingappa Gowda Patil and City Station PI Prakash Mali were honored by SP Dr. Rama L. Arasiddi with letters of appreciation.

ಗಂಗಾವತಿ: ಗಂಗಾವತಿ ಪೊಲೀಸ್ ಉಪವಿಭಾಗದಲ್ಲಿ ದೀರ್ಘಕಾಲ ದಿಂದ ಬಾಕಿ ಇರುವ ಪ್ರಕರಣಗಳಲ್ಲಿ ತಲೆಮರಿಸಿಕೊಂಡಿದ್ದ ಅಪರಾಧಿಗಳನ್ನು ಹಾಗೂ ಅನೇಕ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮಕೈಗೊಂಡ ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ನಗರ ಠಾಣೆ ಪಿಐ ಪ್ರಕಾಶ ಮಾಳಿ ಇವರನ್ನು ಎಸ್ಪಿ ಡಾ.ರಾಮ ಎಲ್ ಆರಸಿದ್ದಿ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.