ಮುಸ್ಟೂರು ಗ್ರಾ.ಪಂ ಯೋಜನೆಗಳು ಹಾಗೂ ಸಮಸ್ಯೆಗಳಬಗ್ಗೆರೇಡಿಯೋ ಕಾರ್ಯಕ್ರಮದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Direct phone-in program on radio program about Musturu Gram Pm projects and problems.

ಜಾಹೀರಾತು

ಗಂಗಾವತಿ: ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮ ಪಂಚಾಯತಿಯ ಯೋಜನೆಗಳು ಹಾಗೂ ಸಮಸ್ಯೆಗಳ ಕುರಿತು ಜನೇವರಿ-೦೧ ರಂದು ಗಂಗಾವತಿ ನಗರದ ದೀಪಾ ಸಮಾಜಸೇವಾ ಸಂಸ್ಥೆಯ ಗ್ರಾಮೀಣ ಭಾರತಿ ಸಮುದಾಯ ರೆಡಿಯೋ ಕೇಂದ್ರದಲ್ಲಿ ನಮ್ಮೂರ ಪಂಚಾಯತ್ ಗ್ರಾಮಾಭಿವೃದ್ದಿಯ ಮಾತು ಮಂಥನ ನೇರ ಪೋನ್ ಇನ್ ಕಾರ್ಯಕ್ರಮ ನಡೆಯಿತು.


ಈ ಕಾರ್ಯಕ್ರಮದಲ್ಲಿ ರೇಡಿಯೋ ಕೇಂದ್ರಕ್ಕೆ ಸುಮಾರು ೧೦ ರಿಂದ ೧೧ ದೂರವಾಣಿ ಕರೆಗಳು ಬಂದಿದ್ದು, ಮುಸ್ಟೂರು ಗ್ರಾ.ಪಂ ಯ ಅಧ್ಯಕ್ಷರಾದ ಆದಿಲ್‌ಪಾಷಾರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲಾ ದೂರವಾಣಿ ಕರೆಗಳಿಗೆ ಸ್ಪಂದಿಸಿ, ಗ್ರಾಮ ಪಂಚಾಯತಿ ಯೋಜನೆಗಳು ಹಾಗೂ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Total Views: 0
Share This Article