A fan of MLA Manjunath who visited a temple in Tamil Nadu.
ವರದಿ :ಬಂಗಾರಪ್ಪ ಸಿ ಹನೂರು .
ಹನೂರು /ತಮಿಳುನಾಡು :ರಾಜ್ಯ ಹಾಗೂ
ತಮಿಳುನಾಡಿನ ಗಡಿ ಭಾಗದಲ್ಲಿರುವ ಸೊಳಕನೆ ಯಲ್ಲಿರುವ ಪಡ್ಗಾಲು ಮಾದೇಶ್ವರ ಸ್ವಾಮಿಗೆ ಚುನಾವಣಾ ಪೂರ್ವ ಜೆ ಡಿಎಸ್ ಮುಖಂಡರಾದ ವಡಕೆಹಳ್ಳ ಮಂಜು ಹಾಗೂ ಸ್ನೇಹಿತರು ಸೇರಿದಂತೆ ಹಲವರು ತಮ್ಮ ನೆಚ್ಚಿನ ಶಾಸಕರು ಗೆದ್ದರೆ ಇದೇ ದೇವಾಲಯದಲ್ಲಿ ಹರಕೆ ತಿರಿಸುವುದಾಗಿ ದೇವರಲ್ಲಿ ಕೇಳಿಕೊಂಡಿದರ ಫಲವಾಗಿ ಇಂದು ದೇವಾಲಯದಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಹೆಣ್ಣು ಮಕ್ಕಳು ಹಾಲರವೆ ತಂದಿದ್ದರು. ಇತಿಹಾಸ ಪ್ರಸಿದ್ಧ ದೇವಾಲಯವಿದು ಹಿಂದಿನ ಕಾಲದಲ್ಲಿ ರಾಜರ ಕಾಲದಿಂದಲೂ ಇತಿಹಾಸ ಇರುವುದು ರಾಜರು ಯುದ್ಧ ಮಾಡುವ ಮುನ್ನ ಕಾಣಿಕೆ ಯನ್ನು ಕಟ್ಟಿ ಯುದ್ಧಕ್ಕೆ ಹೋಗಿ ಗೆದ್ದು ಬರುವ ಸಂಪ್ರದಾಯವಿತ್ತು .ಹಾಗಾಗಿ ಹನೂರು ಕ್ಷೇತ್ರದ ಶಾಸಕರಾದ ಮಂಜುನಾಥ್ ಗೆಲ್ಲಲ್ಲಿ ಎಂದು ಕಾಣಿಕೆಯನ್ನು ಕಟ್ಟಿ ಬೇಡಿಕೊಂಡಿದ್ದೆ ಅದರ ಫಲವಾಗಿ ಅವರು ಗೆದ್ದ ನಂತರ ಬುಡಕಟ್ಟು ಜನಾಂಗದಲ್ಲಿರುವ ಹೆಣ್ಣು ಮಕ್ಕಳಿಗೆ ಸೀರೆಯನ್ನು ದಾನ ನೀಡಿ ಹರಕೆಯನ್ನು ತೀರಿಸಿದ್ದೆವೆ ಎಂದು JDS ಪಕ್ಷದ ಕಾರ್ಯಕರ್ತರಾದ ವಡಕೆ ಹಳ್ಳದ ಮಂಜು ತಿಳಿಸಿದರು .ಇದೇ ಸಮಯದಲ್ಲಿ ಮಾದೇಶ, ಕುಮಾರ್ , ಸೇರಿದಂತೆ ಹಲವಾರು ಹಾಜರಿದ್ದರು .