Breaking News

ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ನಾಶದಿಂದ ಬೀದಿಗೆ ಬಿದ್ದಿರುವಕೂಲಿಕಾರ್ಮಿಕರು

On the other side, the laborers are lying on the streets due to the destruction of tourism


ಗಂಗಾವತಿ: ತಾಲೂಕಿನ ಆನೆಗೊಂದಿ ಭಾಗದಲ್ಲಿ ಕಳೆದ ಎರಡು ದಶಕಗಳಿಂದ ಪ್ರವಾಸೋದ್ಯಮದ ಮೂಲಕ ಕೂಲಿಕಾರ್ಮಿಕರಿಗೆ ಉದ್ಯೋಗ ಲಭಿಸಿದ್ದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ ಪರಿಣಾಮವಾಗಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅನಧಿಕೃತ ಹೊಟೇಲ್, ರೆಸಾರ್ಟ್ ತೆರವು ಮಾಡಿದ್ದು ಇದರಿಂದ ೧೫ ಗ್ರಾಮಗಳ ಸುಮಾರು ೨-೩ ಸಾವಿರ ಕುಟುಂಬಗಳ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ರಾಜ್ಯ ಸರಕಾರ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಗಳಲ್ಲಿ ವಲಯ(ಝೋನಲ್)ನಿಯಮಗಳಿಗೆ ತಿದ್ದುಪಡಿ ಮಾಡಿ ನೈಸರ್ಗಿಕ ಪ್ರವಾಸೋದ್ಯಮಕ್ಕೆ ಫಾರ್ಮ್ಸ್ಟೇ, ಹೋಂಸ್ಟೇಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ವಿಧಾನಸಭೆಯ ಸದನದಲ್ಲಿ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶವು ಡ್ರಗ್ಸ್ ಪೆಡ್ಲರ್‌ಗಳಿಂದ ಕೂಡಿದ್ದು ವಿದೇಶಿಗರು ಮಾದಕ ವಸ್ತು ಸೇವನೆಗಾಗಿ ಇಸ್ರೇಲ್ ಸೇರಿ ಹಲವು ದೇಶಗಳಿಂದ ಆಗಮಿಸುತ್ತಾರೆ. ವ್ಯಾಪಕ ಡ್ರಗ್ಸ್ ಜಾಲವಿದೆ ಎಂದು ಹೇಳುವ ಮೂಲಕ ಕಿಷ್ಕಿಂಧಾ ಪ್ರದೇಶಕ್ಕೆ ಕೆಟ್ಟ ಹೆಸರು ಬರುವಂತೆ ಮಾಡುವ ಯತ್ನ ನಡೆಸಿದ್ದಾರೆ. ೨೦೧೬-೧೮ ರ ವರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಪ್ರಸ್ತುತ ಕಾಂಗ್ರೆಸ್ ಸರಕಾರವಿದ್ದು ಡ್ರಗ್ಸ್ ಜಾಲವನ್ನು ತಡೆಯಲು ಕಠಿಣ ಕ್ರಮ ಜರುಗಿಸದೇ ಅಂಜನಾದ್ರಿ ಪ್ರದೇಶ ಡ್ರಗ್ಸ್ ಎಂದು ಹೇಳಿದ್ದು ಸರಿಯಲ್ಲ. ಇದರಿಂದ ಸಾಮಾಜಿಕ ವ್ಯವಸ್ಥೆ ಹದಗೆಡಲಿದೆ. ಕಳೆದ ೩೦ ವರ್ಷಗಳಿಂದ ಆನೆಗೊಂದಿ ಭಾಗದಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ಹೊಸಪೇಟೆ ಹೊಟೇಲ್ ಲಾಭಿ ಷಡ್ಯಂತ್ರ ನಡೆಸಿದೆ. ರಾಯರೆಡ್ಡಿಯವರೇ ಹೇಳಿರುವಂತೆ ಕೇವಲ ೮ ಗಾಂಜಾ ಕೇಸಗಳು ದಾಖಲಾಗಿದ್ದು ಅವರು ಹೇಳಿದಂತೆ ವ್ಯಾಪಕ ಡ್ರಗ್ಸ್ ಜಾಲವಿಲ್ಲ. ಆದ್ದರಿಂದ ಆನೆಗೊಂದಿ ಭಾಗದಲ್ಲಿ ಪೊಲೀಸ್ ಠಾಣೆ ಸ್ಥಾಪನೆ ಸಂಚಾರಿ ಪೊಲೀಸ್ ವ್ಯವಸ್ಥೆ ಮಾಡಿ ಅಕ್ರಮ ತಡೆಯಬೇಕು. ಸದ್ಯ ಹೊಟೇಲ್‌ಗಳಲ್ಲಿ ನೇರ ಮತ್ತು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದ ಈಗ ಕೆಲಸವಿಲ್ಲದೇ ಖಾಲಿ ಕುಳಿತಿರುವ ಕೂಲಿಕಾರ್ಮಿಕರಿಗೆ ಕೊಪ್ಪಳ, ವಿಜಯನಗರ ಜಿಲ್ಲಾಡಳಿತ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಕುಟುಂಬ ನಿರ್ವಾಹಣೆಗೆ ಧನ ಸಹಾಯ ಮತ್ತು ಪಡಿತರವನ್ನು ಕೊಡಬೇಕು. ನರೇಗಾ ಯೋಜನೆಯಡಿ ಕೂಲಿಕೆಲಸ ಕೊಡಬೇಕು. ಆನೆಗೊಂದಿ ಪ್ರಾಧಿಕಾರ ರಚಿಸಿ ಸಣ್ಣಪುಟ್ಟ ವ್ಯಾಪಾರವಹಿವಾಟು ಮಾಡಲು ನಿಯಮ ರೂಪಿಸಬೇಕು. ಅಕ್ರಮ ಚಟುವಟಿಕೆ ತಡೆಯಬೇಕೆಂದು ಒತ್ತಾಯಿಸಿದ್ದಾರೆ.

ಜಾಹೀರಾತು

About Mallikarjun

Check Also

ಅಂಜನ 2023 ಮಹಿಳಾ ವೈದ್ಯರ ಪ್ರಥಮ ಸಮ್ಮೇಳನ

ದಿನಾಂಕ 24 ರಂದು ಅಂಜನ 2023 ಮಹಿಳಾ ವೈದ್ಯರ ಪ್ರಥಮ ಸಮ್ಮೇಳನ ಗಂಗಾವತಿ 22 ಭಾರತೀಯ ವೈದ್ಯಕೀಯ ಸಂಘ ಹಾಗೂ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.