Breaking News

ಗಂಗಾವತಿ ಬಸ್‌ ನಿಲ್ದಾಣದಲ್ಲಿ ಜಾಗೃತಿ ಮೂಡಿಸಿದ ತಾಲೂಕು ಸ್ವೀಪ್‌ ಸಮಿತಿ Taluk sweep committee created awareness at Gangavati bus stand

ಪದವಿ ಪೂರ್ಣಗೊಳಿಸಿದವರೂ ಕಡ್ಡಾಯವಾಗಿ ನೋಂದಣಿ ಮಾಡಿಸಿ ತಹಸೀಲ್ದಾರರಾದ ಶ್ರೀ ಮಂಜನಾಥ ಹಿರೇಮಠ ಹೇಳಿಕೆ

ಜಾಹೀರಾತು

ಗಂಗಾವತಿ : 2020ರ ನ.1ಕ್ಕಿಂತ ಒಳಗೆ ಪದವಿ ಪೂರ್ಣಗೊಳಿಸಿದವರು ನಮೂನೆ 18 ರ ಅರ್ಜಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ತಹಸಿಲ್‌ ಕಾರ್ಯಾಲಯದ ಸಂಬಂಧಪಟ್ಟ ವಿಭಾಗಕ್ಕೆ ಪದವೀಧರರು ಅರ್ಜಿ ಸಲ್ಲಿಸಬೇಕು ಎಂದು ತಹಸೀಲ್ದಾರರಾದ ಶ್ರೀ ಮಂಜನಾಥ ಹಿರೇಮಠ ಅವರು ಹೇಳಿದರು.

ನಗರದ ನಗರಸಭೆ ಆವರಣದಲ್ಲಿ ತಾಲೂಕು ಸ್ವೀಪ್‌ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಈಶಾನ್ಯ ಕರ್ನಾಟಕ ಪದವೀಧರ ಮತಕ್ಷೇತ್ರದ ಕುರಿತು ಮತದಾರರ ವಿಶೇಷ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪದವಿ ಪೂರ್ಣಗೊಳಿಸಿರುವ ಅಂಕಪಟ್ಟಿ, ಮತದಾರ ಗುರುತಿನ ಚೀಟಿ, ವಾಸಸ್ಥಳ, ಎರಡು ಭಾವಚಿತ್ರ, ಆಧಾರ್ ಪ್ರತಿ ದಾಖಲೆಗಳನ್ನು 6-11-2023ರೊಳಗೆ ಅರ್ಜಿ ಸಲ್ಲಿಸಬೇಕು. 2020ರ ನ.1ಕ್ಕಿಂತ ಮುಂಚೆ ಪದವಿ ಮುಗಿಸಿದವರೂ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲು ಆಂದೋಲನ ಹಮ್ಮಿಕೊಳ್ಳಲಾಗಿದೆ. ನೋಂದಣಿ ಪ್ರಕ್ರಿಯೆಯಿಂದ ಯಾರು ವಂಚಿತಗೊಳ್ಳಬಾರದು ಎಂದು ವಿವಿಧ ಕಾಲೇಜುಗಳಿಗೆ ಮೇಲ್ವಿಚಾರಕ ಅಧಿಕಾರಿಗಳ ತಂಡಗಳನ್ನು ನೇಮಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಸ್‌ ನಿಲದಾಣದಲ್ಲಿ ಜಾಗೃತಿ ಕಾರ್ಯ : ನಗರದ ಬಸ್‌ ನಿಲ್ದಾಣಕ್ಕೆ ತೆರಳಿದ ತಾಲೂಕು ಸ್ವೀಪ್ ಸಮಿತಿ ತಂಡ “ಪದವಿ ಮುಗಿಸಿದವರು ಕಡ್ಡಾಯವಾಗಿ ನೋಂದಣಿ ಮಾಡಿಸುವಂತೆʼ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಜಾಗೃತಿ ಮೂಡಿಸಿದರು.

ನಗರಸಭೆ ಆವರಣದಿಂದ ಶುರುವಾದ ಮತದಾರರ ವಿಶೇಷ ನೋಂದಣಿ ಅಭಿಯಾನ ಜಾಥಾವು ಬಸ್‌ ನಿಲ್ದಾಣ ಮಾರ್ಗವಾಗಿ ತಾಲೂಕು ಪಂಚಾಯತ್‌ ಕಾರ್ಯಾಲಯದ ವರೆಗೆ ನಡೆಯಿತು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಲಕ್ಷ್ಮಿದೇವಿ, ನಗರಸಭೆ ಶ್ರೀ ವಿರೂಪಾಕ್ಷಮೂರ್ತಿ, ಪಿಎಸ್‌ ಐ ಶ್ರೀ ಬಸವರಾಜ, ಎಎಸ್‌ ಐ ಶ್ರೀ ಸಿದ್ದರಾಮಯ್ಯ, ಚುನಾವಣಾ ಶಿರಸ್ತೇದಾರರಾದ ಶ್ರೀ ರವಿಕುಮಾರ್ ನಾಯಕವಾಡಿ, ನಗರಸಭೆ ವ್ಯವಸ್ಥಾಪಕರಾದ ಶ್ರೀ ಷಣ್ಮುಖಪ್ಪ, ತಾಪಂ ಯೋಜನಾ ನಿರ್ದೇಶಕರಾದ ಶ್ರೀ ಗುರುಪ್ರಸಾದ ಸೇರಿ ತಾ.ಪಂ., ನಗರಸಭೆ, ತಹಸಿಲ್ ಕಚೇರಿ ಸಿಬ್ಬಂದಿಗಳು, ಪೊಲೀಸ್‌ ಇಲಾಖೆ ಸಿಬ್ಬಂದಿಗಳು ಇದ್ದರು.

About Mallikarjun

Check Also

ಭಗವಾನ್‌ಮಹಾವೀರರ 2624ನೇ ಜಯಂತಿ ಕಾರ್ಯಕ್ರಮದಲ್ಲಿ ನಿಕಟ ಪರ್ವಶಾಸಕರಾದ ಪರಣ್ಣ ಭಾಗಿ

Paranna, a close associate, participated in the 2624th Jayanti of Lord Mahavira. ಗಂಗಾವತಿ ನಗರದ ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.