ಲಕ್ಷ್ಮಿದೇವಿ ಪತ್ತಾರರ ‘ಬಿಳಿ ಮ್ಯಾಗ್ನೆಟ್ ಹಳದಿ ಬಂಗಾರ’ ಪುಸ್ತಕಕ್ಕೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
ಜಾಹೀರಾತು
Lakshmi Devi Pattar's book 'White Magnet Yellow Gold' wins second prize at the state level

ಲಕ್ಷ್ಮಿದೇವಿ ಪತ್ತಾರರ ‘ಬಿಳಿ ಮ್ಯಾಗ್ನೆಟ್ ಹಳದಿ ಬಂಗಾರ’ ಪುಸ್ತಕಕ್ಕೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾ

ಜಾಹೀರಾತು

ಕಥಾ ಸಂಕಲನ ವಿಭಾಗದಲ್ಲಿ ಪ್ರಶಸ್ತಿ – ಸಾಹಿತ್ಯ ವಲಯದಿಂದ ಅಭಿನಂದನೆಗಳ ಮಹಾಪೂರ

ಗಂಗಾವತಿ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವದ ಸ್ಮರಣಾರ್ಥ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಡೆದ ರಾಜ್ಯ ಮಟ್ಟದ ಉತ್ತಮ ಪುಸ್ತಕ ಸ್ಪರ್ಧೆಯಲ್ಲಿ ಗಂಗಾವತಿಯ ಸಾಹಿತಿ, ಶಿಕ್ಷಕಿ ಲಕ್ಷ್ಮಿದೇವಿ ಪತ್ತಾರ ಅವರ ‘ಬಿಳಿ ಮ್ಯಾಗ್ನೆಟ್ ಹಳದಿ ಬಂಗಾರ’ ಕೃತಿಯು ಕಥಾ ಸಂಕಲನ ವಿಭಾಗದಲ್ಲಿ ದ್ವಿತೀಯ ಬಹುಮಾನಕ್ಕೆ ಆಯ್ಕೆಯಾಗಿದೆ.
ಬೆಂಗಳೂರಿನ ವಸಂತಪುರದ ಮಾರುತಿ ಬಡಾವಣೆಯ ಗಂಧ ಗ್ರಂಥಾಲಯವು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವದ ಸ್ಮರಣಾರ್ಥ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ 2025–26ನೇ ಸಾಲಿಗೆ ರಾಜ್ಯ ಮಟ್ಟದ ಉತ್ತಮ ಪುಸ್ತಕ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಗೆ ವಿವಿಧ ಸಾಹಿತ್ಯ ಪ್ರಕಾರಗಳ ಪುಸ್ತಕಗಳನ್ನು ಆಹ್ವಾನಿಸಲಾಗಿತ್ತು.
ಗಂಗಾವತಿಯ ಎಂಎನ್‌ಎಂ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸಾಹಿತಿ ಲಕ್ಷ್ಮಿದೇವಿ ಪತ್ತಾರ ಅವರು ತಮ್ಮ ‘ಬಿಳಿ ಮ್ಯಾಗ್ನೆಟ್ ಹಳದಿ ಬಂಗಾರ’ ಕಥಾ ಸಂಕಲನದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತೀರ್ಪುಗಾರರ ಆಯ್ಕೆಯಲ್ಲಿ ಈ ಕೃತಿಯು ಕಥಾ ಸಂಕಲನ ವಿಭಾಗದಲ್ಲಿ ದ್ವಿತೀಯ ಬಹುಮಾನಕ್ಕೆ ಪಾತ್ರವಾಗಿದೆ.
ಲಕ್ಷ್ಮಿದೇವಿ ಪತ್ತಾರ ಅವರ ಕೃತಿಗೆ ರಾಜ್ಯ ಮಟ್ಟದ ಗೌರವ ಲಭಿಸಿರುವುದು ಅವರ ಸಾಹಿತ್ಯಿಕ ಸಾಧನೆಗೆ ಸಂದ ಮನ್ನಣೆಯಾಗಿದೆ. ಈ ಸಾಧನೆಯಿಂದ ಗಂಗಾವತಿಯ ಸಾಹಿತ್ಯ ವಲಯದಲ್ಲಿ ಸಂತಸ ವ್ಯಕ್ತವಾಗಿದ್ದು, ಅವರ ಸಾಹಿತ್ಯ ಕೃಷಿಗೆ ಮತ್ತಷ್ಟು ಪ್ರೋತ್ಸಾಹ ದೊರೆತಂತಾಗಿದೆ.
ಅಭಿನಂದನೆ: ಲಕ್ಷ್ಮಿದೇವಿ ಪತ್ತಾರ ಅವರ ಈ ಸಾಧನೆಗೆ ಕಾವ್ಯಲೋಕದ ಗೌರವ ಅಧ್ಯಕ್ಷ ಡಾ. ಶಿವಕುಮಾರ ಮಾಲಿ ಪಾಟೀಲ್, ಅಧ್ಯಕ್ಷ ಎಂ. ಪರಶುರಾಮ ಪ್ರಿಯ, ದಲಿತ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮೈಲಾರಪ್ಪ ಬೂದಿಹಾಳ, ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಅಶೋಕ ಗುಡಿಕೋಟೆ, ಸಾಹಿತಿಗಳಾದ ವಿರುಪಣ್ಣ ಡಣಾಪುರ, ಶಾಮೀದ್ ಲಾಠಿ, ಶರಣಪ್ಪ ವಿದ್ಯಾನಗರ, ಎಂ.ಎಸ್. ನಾರಾಯಣ್, ಸೋಮಶೇಖರ್ ಕಂಚಿ, ಚಿದಾನಂದ ಕೀರ್ತಿ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.

Total Views: 0
Share This Article
Leave a Comment