ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಅವರ ಬೆಂಬಲಕ್ಕೆ ಮನವಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
ಜಾಹೀರಾತು
Appeal for support from retired IAS officer Shambhu Kallolikar for the movement to make Chikkodi a separate district.

ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಘೋಷಿಸಬೇಕೆಂದು ಹೊರಾಟ ಸಮಿತಿಯ ಚಿತ್ರ

ಜಾಹೀರಾತು

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಅವರ ಬೆಂಬಲಕ್ಕೆ ಮನವಿ

ಅನುಭವ, ಜ್ಞಾನ ಹಂಚಿಕೊಂಡ ನಿವೃತ್ತ ಅಧಿಕಾರಿಗಳ ಆತ್ಮೀಯತೆ ಕಂಡು ಸಂತಸ: ಚಂದ್ರಕಾಂತ ಹುಕ್ಕೇರಿ

ಚಿಕ್ಕೋಡಿ: ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಬೇಕೆಂಬ ಬಹುದಿನಗಳ ಬೇಡಿಕೆಗೆ ಬೆಂಬಲ ಕೋರುವ ನಿಟ್ಟಿನಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಮುಖಂಡರು, ಭಾರತೀಯ ಆಡಳಿತ ಸೇವೆಯ (ಐಎಎಸ್) ನಿವೃತ್ತ ಅಧಿಕಾರಿಗಳಾದ ಶಂಭು ಕಲ್ಲೋಳಿಕರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆಯ ಹೋರಾಟಕ್ಕೆ ತಮ್ಮ ಬೆಂಬಲ ಮತ್ತು ಮಾರ್ಗದರ್ಶನ ನೀಡುವಂತೆ ಮುಖಂಡರು ವಿನಂತಿಸಿಕೊಂಡರು.

ಸಮಿತಿಯ ಮುಖಂಡರನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡ ಶಂಭು ಕಲ್ಲೋಳಿಕರ ಅವರು, ತಮ್ಮ ಅಪಾರ ಆಡಳಿತಾತ್ಮಕ ಅನುಭವ, ಜ್ಞಾನ ಹಾಗೂ ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡರು.

ದೀರ್ಘಕಾಲ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಅಪಾರ ಆಡಳಿತಾತ್ಮಕ ಅನುಭವ ಹೊಂದಿರುವ ಹಿರಿಯ ಅಧಿಕಾರಿಯೊಬ್ಬರು ಸಾಮಾನ್ಯ ಕಾರ್ಯಕರ್ತರೊಂದಿಗೂ ಅಷ್ಟೊಂದು ಗೌರವ, ಆತ್ಮೀಯತೆ ಮತ್ತು ತಾಳ್ಮೆಯಿಂದ ಮಾತನಾಡಿ ಸಮಯ ನೀಡಿದ್ದು ನಮಗೆ ವಿಶೇಷ ಸಂತೋಷ ತಂದಿದೆ. ಅವರ ಸರಳತೆ, ಸೌಜನ್ಯ ಹಾಗೂ ಮಾನವೀಯ ಗುಣಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಸಮಾಜ ಸೇವಕ ಚಂದ್ರಕಾಂತ ರು. ಹುಕ್ಕೇರಿ ಅಭಿಪ್ರಾಯಪಟ್ಟರು.

ಇಂತಹ ಜ್ಞಾನವಂತ, ಅನುಭವೀ ಹಾಗೂ ಗುಣವಂತ ಹಿರಿಯ ಅಧಿಕಾರಿ ನಮ್ಮ ಚಿಕ್ಕೋಡಿ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿ. ಅವರ ಇಷ್ಟಾರ್ಥಗಳು ಈಡೇರಲಿ ಹಾಗೂ ಅವರ ಅನುಭವ ಮತ್ತು ಮಾರ್ಗದರ್ಶನದಿಂದ ಸಮಾಜಕ್ಕೆ ಇನ್ನಷ್ಟು ಉತ್ತಮ ಕೊಡುಗೆಗಳು ದೊರೆಯಲಿ ಎಂದು ಹಾರೈಸಿದರು.

— ಚಂದ್ರಕಾಂತ ರು. ಹುಕ್ಕೇರಿ

ಸಮಾಜ ಸೇವಕರು, ಚಿಕ್ಕೋಡಿ.

Total Views: 0
Share This Article
Leave a Comment