

ವಾಹನ ಚಾಲಕರು ಹಾಗೂ ಸಹಾಯಕರ ಸಂಘದ ತಾಲೂಕ ಅಧ್ಯಕ್ಷರಾಗಿ ಕೊಟ್ರೇಶ್ ನೇಮಕ
ಗಂಗಾವತಿ: ಎಐಸಿಸಿಟಿಯು (AICTU) ಸಂಯೋಜಿತ ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘದ ಗಂಗಾವತಿ ತಾಲೂಕ ನೂತನ ಅಧ್ಯಕ್ಷರಾಗಿ ಆನಂದ್ ತಂದೆ ರಾಮಣ್ಣ ಗುಗ್ರಿ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಗತಿಪರ ವಾಹನ ಚಾಲಕರು ಹಾಗೂ ಸಹಾಯಕರ ಸಂಘದ ತಾಲೂಕ ಅಧ್ಯಕ್ಷರಾಗಿ ಕೊಟ್ರೇಶ್ ತಂದೆ ಹನುಮಂತಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಕಾ. ನಿರ್ಮಲ, ಸ್ಲಂ ಮೋರ್ಚಾ ರಾಜ್ಯ ಸದಸ್ಯ ಚೆನ್ನಯ್ಯ, ಕೊಪ್ಪಳ ಜಿಲ್ಲಾ ಎಐಸಿಸಿಟಿಯು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾದ ಸಣ್ಣ ಹನುಮಂತ, ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ್ ಮತ್ತು ಕರ್ನಾಟಕ ಪ್ರಗತಿಪರ ವಾಹನ ಚಾಲಕರು ಹಾಗೂ ಸಹಾಯಕರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕಿಶು ನಾಯಕ್ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಆಯ್ಕೆಯಾದ ನೂತನ ತಾಲೂಕ ಅಧ್ಯಕ್ಷರನ್ನು ಸಂಘಟನೆಯ ಮುಖಂಡರು ಅಭಿನಂದಿಸಿ, ಶುಭ ಹಾರೈಸಿದರು. ಪೌರಕಾರ್ಮಿಕರು, ವಾಹನ ಚಾಲಕರು, ಸಹಾಯಕರು ಹಾಗೂ ಕಾವಲುಗಾರರ ಹಕ್ಕುಗಳ ರಕ್ಷಣೆ, ಅವರ ಸಮಸ್ಯೆಗಳ ಪರಿಹಾರ ಮತ್ತು ಸಂಘಟನೆಯ ಬಲವರ್ಧನೆಗೆ ನೂತನ ಪದಾಧಿಕಾರಿಗಳು ಆದ್ಯತೆ ನೀಡಿ ಕಾರ್ಯನಿರ್ವಹಿಸಬೇಕು ಎಂದು ಮುಖಂಡರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಸದಸ್ಯರು, ಪೌರಕಾರ್ಮಿಕರು, ವಾಹನ ಚಾಲಕರು, ಸಹಾಯಕರು ಹಾಗೂ ಕಾವಲುಗಾರರು ಉಪಸ್ಥಿತರಿದ್ದರು.


