
One-day export workshop for textile/handloom entrepreneurs on Nov 23
ನ.23 ರಂದು ಜವಳಿ/ಕೈಮಗ್ಗ ಉದ್ದಿಮೆದಾರರಿಗೆ ಒಂದು ದಿನದ ರಫ್ತು ಕಾರ್ಯಾಗಾರ
ಕೊಪ್ಪಳ, ನವೆಂಬರ್ 19, : ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ನವೆಂಬರ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಎಸ್ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡ, ನಗರ ಸಭೆ ಎದುರುಗಡೆ, ಅಶೋಕ ವೃತ್ತದ ಹತ್ತಿರ, ಕೊಪ್ಪಳದಲ್ಲಿ ಜಿಲ್ಲೆಯ ಜವಳಿ ಹಾಗೂ ಕೈಮಗ್ಗ ಉದ್ದಿಮೆದಾರರಿಗೆ ಒಂದು ದಿನದ ರಫ್ತು ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಕಾರ್ಯಾಗಾರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಜವಳಿ ಉತ್ಪನ್ನಗಳನ್ನು ರಫ್ತು ಮಾಡುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ತರಬೇತಿ ಕಾರ್ಯಾಗಾರದಲ್ಲಿ ಜವಳಿ ಹಾಗೂ ಕೈಮಗ್ಗ ಉದ್ದಿಮೆದಾರರು ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಭಾಗವಹಿಸಬಹುದಾಗಿರುತ್ತದೆ. ಆದ್ದರಿಂದ ರಫ್ತು ಕಾರ್ಯಾಗಾರದಲ್ಲಿ ಸ್ಥಳೀಯ ಜವಳಿ ಹಾಗೂ ಕೈಮಗ್ಗ ಉದ್ದಿಮೆದಾರರು ಭಾಗವಹಿಸಿ ಮಾಹಿತಿ ಪಡೆದುಕೊಳ್ಳಲು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕಚೇರಿಗೆ ಹಾಗೂ ಮೊ.ಸಂ: 6360640263 ಮತ್ತು 9742122604 ಗೆ ಸಂಪರ್ಕಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


