‘ಗೌರಿ ತನಯ’ ಚಿತ್ರದ 10 ನಿಮಿಷಗಳ ಟೀಸರ್ ಬಿಡುಗಡೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

 

10-minute teaser of the film ‘Gauri Tanaya’ released
 

‘ಗೌರಿ ತನಯ’ ಚಿತ್ರದ 10 ನಿಮಿಷಗಳ ಟೀಸರ್ ಬಿಡುಗಡೆ

ಜಾಹೀರಾತು
ಜಾಹೀರಾತು


ನಟ ಗಣೇಶ್ ರಾವ್ ಕೇಸರ್ಕರ್ ಅವರಿಂದ ಟೀಸರ್ ಅನಾವರಣ; ಗಣ್ಯರು, ಚಿತ್ರತಂಡದ ಕಲಾವಿದರು ಭಾಗಿ


ಬೆಂಗಳೂರು: ಎನ್.ಎಸ್. ಫಿಲಂಸ್ ಬ್ಯಾನರ್ ಅಡಿಯಲ್ಲಿ ಎನ್. ಸರಸ್ವತಿ ನಿರ್ಮಿಸಿರುವ ಹಾಗೂ ಪತ್ರಕರ್ತ ಹೆಚ್.ವಿ. ಪುಟ್ಟಸ್ವಾಮಿ ನಿರ್ದೇಶನದ ನಾಲ್ಕನೇ ಚಿತ್ರ ‘ಗೌರಿ ತನಯ’ ಚಲನಚಿತ್ರದ 10 ನಿಮಿಷಗಳ ಟೀಸರ್ ಅನ್ನು ನವೆಂಬರ್ 15ರಂದು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಯಿತು.
ಬೆಂಗಳೂರು ರಾಜಾಜಿನಗರದಲ್ಲಿರುವ ಎನ್‌ಎಫ್‌ಡಿಸಿ ಮಿನಿ ಸ್ಕ್ರೀನ್‌ನಲ್ಲಿ ನಡೆದ ಸಮಾರಂಭದಲ್ಲಿ ನಟ, ನಿರ್ಮಾಪಕ ಹಾಗೂ ಕರ್ನಾಟಕ ಟೆಲಿವಿಷನ್ ಅಧ್ಯಕ್ಷ ಗಣೇಶ್ ರಾವ್ ಕೇಸರ್ಕರ್ ಅವರು ಟೀಸರ್ ಪ್ರದರ್ಶನಕ್ಕೆ ಚಾಲನೆ ನೀಡುವ ಮೂಲಕ ಅಧಿಕೃತವಾಗಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ನಿರ್ಮಾಪಕ ಗಿರೀಶ್ ರೆಡ್ಡಿ, ಚನ್ನಪಟ್ಟಣದ ಡಾ. ಎಚ್.ಎಸ್. ಚಂದ್ರೇಗೌಡ, ಸಿಲ್ವರ್ ಸ್ಕ್ರೀನ್ ಯೂಟ್ಯೂಬ್ ಚಾನೆಲ್ ಮುಖ್ಯಸ್ಥ ರಾಮು, ಸಿನಿಮಾ ವಿತರಕ ವಿ.ಎಂ. ಶಂಕರ್, ಚಿತ್ರ ನಿರ್ದೇಶಕ ಸುಲ್ತಾನ್ ರಾಜು, ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಗುಣಶೇಖರ್, ಸಂಗೀತ ನಿರ್ದೇಶಕ ಸತೀಶ್ ಆರ್ಯನ್, ಜ್ಯೋತಿಷಿ ಭೀಮರಾವ್ ವಾಸ್ಟರ್, ಗಣೇಶ್ವರ್ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎನ್.ಎಸ್. ಫಿಲಂಸ್ ಮುಖ್ಯಸ್ಥೆ ಹಾಗೂ ನಿರ್ಮಾಪಕಿ ಎನ್. ಸರಸ್ವತಿ, ಚಿತ್ರದ ನಿರ್ದೇಶಕ ಹೆಚ್.ವಿ. ಪುಟ್ಟಸ್ವಾಮಿ, ಸಾರ್ವಜನಿಕ ಸಂಪರ್ಕಾಧಿಕಾರಿ (ಪಿ.ಆರ್.ಒ.) ವಿ.ಎಂ.ಎಸ್. ಗೋಪಿ, ನಾಯಕ ನಟ ಕ್ರಿಶ್, ನಾಯಕಿ ಯಶಸ್ವಿನಿ, ಮೈಸೂರು ಶಿವಾಜಿ, ರವಿ ಪಾಲಹಳ್ಳಿ, ರಾಜಲಕ್ಷ್ಮಿ, ಬಾನು ಸೇರಿದಂತೆ ಚಿತ್ರತಂಡದ ಕಲಾವಿದರು ಉಪಸ್ಥಿತರಿದ್ದರು.
‘ಗೌರಿ ತನಯ’ ಚಿತ್ರದ 10 ನಿಮಿಷಗಳ ಟೀಸರ್ ಅನ್ನು ಮಾಸ್ಟರ್ ಮೈಂಡ್ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಚಿತ್ರತಂಡ ತಿಳಿಸಿದೆ.
– ವಿ.ಎಂ.ಎಸ್. ಗೋಪಿ ✍️ ಬೆಂಗಳೂರು

Total Views: 1
Share This Article
Leave a Comment