ನಂಬಿಕೆ ಮತ್ತು ವಿಶ್ವಾಸವೇ ಹಣಕಾಸಿನ ಸಂಸ್ಥೆಗಳಿಗೆ ಅಡಿಪಾಯ: ಜಗದೀಶ ಗುಡಗುಂಟಿ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Trust and confidence are the foundation for financial institutions: Jagadish Gudagunti




ನಂಬಿಕೆ ಮತ್ತು ವಿಶ್ವಾಸವೇ ಹಣಕಾಸಿನ ಸಂಸ್ಥೆಗಳಿಗೆ ಅಡಿಪಾಯ: ಜಗದೀಶ ಗುಡಗುಂಟಿ

ಜಾಹೀರಾತು
ಜಾಹೀರಾತು

ಮೂಡಲಗಿಯಲ್ಲಿ ಶ್ರೀ ಪ್ರಭುಲಿಂಗೇಶ್ವರ ಸೌಹಾರ್ದ ಸಂಘದ 19ನೇ ಶಾಖೆ ಉದ್ಘಾಟನೆ

ಮೂಡಲಗಿ :ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಶ್ರೀ ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ, ಜಮಖಂಡಿಯ 19ನೇ ನೂತನ ಶಾಖೆಯನ್ನು ಶುಕ್ರವಾರ ಅದ್ಧೂರಿಯಾಗಿ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಮಖಂಡಿ ಮತಕ್ಷೇತ್ರದ ಶಾಸಕರು ಹಾಗೂ ಸಂಘದ ಸಂಸ್ಥಾಪಕ ಅಧ್ಯಕ್ಷ ಜಗದೀಶ ಗುಡಗುಂಟಿ ಅವರು, “ನಂಬಿಕೆ ಮತ್ತು ವಿಶ್ವಾಸವೇ ಹಣಕಾಸಿನ ಸಂಸ್ಥೆಗಳಿಗೆ ಅಡಿಪಾಯ. ನಮ್ಮ ಸಂಘವು ಕಳೆದ 23 ವರ್ಷಗಳಿಂದ ಬಡತನ ನಿರ್ಮೂಲನೆ, ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಸುಸ್ಥಿರ ಬೆಳವಣಿಗೆಗೆ ಆದ್ಯತೆ ನೀಡುತ್ತಿದೆ. ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಮತ್ತು ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ ಸಬಲರಾಗಲು ನಾವು ಸಹಾಯ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಶೈಕ್ಷಣಿಕ, ಆರೋಗ್ಯ ಕ್ಷೇತ್ರ ಹಾಗೂ ಸುಧಾರಿತ ಕೃಷಿ ಪದ್ಧತಿಗಳಿಗೆ ಹಣಕಾಸಿನ ನೆರವು ನೀಡುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿರುವುದಾಗಿ ಅವರು ಹೇಳಿದರು. ಮೂಡಲಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಈ ಸೌಲಭ್ಯದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ಸ್ವಾಮೀಜಿಗಳಿಂದ ಮೆಚ್ಚುಗೆ
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಶಿವಾಪುರದ ಶ್ರೀ ಅಡವಿಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, “ಜನರನ್ನು ಆರ್ಥಿಕವಾಗಿ ಸಬಲರಾಗಿಸಲು ಶಾಸಕರು ಸೊಸಾಯಿಟಿ ಸ್ಥಾಪಿಸಿರುವುದು ಶ್ಲಾಘನೀಯ. ಇದು ನಿಜಕ್ಕೂ ಸಮಾಜಮುಖಿ ಕೆಲಸ” ಎಂದು ಹೇಳಿದರು. ಮೂಡಲಗಿ ಶ್ರೀ ಶಿವಬೋಧರಂಗ ಮಠದ ಶ್ರೀ ದತ್ತಾತ್ರೇಯ ಬೋಧ ಸ್ವಾಮೀಜಿ, ಸುಣಧೋಳಿ ಶ್ರೀ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಮತ್ತು ಇಟ್ನಾಳದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನೇಮಣ್ಣ ಜಮಖಂಡಿ, ನಿರ್ದೇಶಕರಾದ ಶಿವಬಸು ಹಂದಿಗುಂದ, ಗಿರೀಶ್ ಢವಳೇಶ್ವರ, ರುದ್ರಪ್ಪ ವಾಲಿ, ಗುಂಡಪ್ಪ ಕಾಳಪ್ಪಗೋಳ, ಶಶಿಕಾಂತಯ್ಯ ಹಿರೇಮಠ, ದುಂಡಪ್ಪ ಪಿರೋಜಿ, ಲಗ್ಮಣ್ಣ ಹಳ್ಳೂರ, ರಮೇಶ ನ್ಯಾಮಗೌಡರ, ಪದ್ಮಣ್ಣ ಪೂಜೇರಿ, ಕೆ.ಬಿ. ಪಾಟೀಲ, ನಿಂಗಪ್ಪ ಪಿರೋಜಿ, ಪ್ರಧಾನ ಕಚೇರಿ ವ್ಯವಸ್ಥಾಪಕ ಮಹೇಶ ಮಠಪತಿ, ಮೂಡಲಗಿ ಶಾಖೆ ವ್ಯವಸ್ಥಾಪಕ ಮುತ್ತಪ್ಪ ಲಾತೂರ, ಉಪ ವ್ಯವಸ್ಥಾಪಕ ಶಿವರುದ್ರಪ್ಪ ತೇಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Total Views: 0
Share This Article
Leave a Comment