ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ 392ನೇ ಶಿವಾನುಭವ ಗೋಷ್ಠಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

392nd Shivanubhava Goshthi at Sri Bhimambika Devi Matha




ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ 392ನೇ ಶಿವಾನುಭವ ಗೋಷ್ಠಿ

ಜಾಹೀರಾತು
ಜಾಹೀರಾತು


“ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ” – ಬಸವಣ್ಣನವರ ವಚನದ ಕುರಿತು ಚಿಂತನ-ಮಂಥನ


ಯಲಬುರ್ಗಾ: ತಾಲೂಕಿನ ಸುಕ್ಷೇತ್ರ ದಮ್ಮೂರಿನ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ 392ನೇ ಶಿವಾನುಭವ ಗೋಷ್ಠಿಯು ದೀಪಾವಳಿ ಅಮಾವಾಸ್ಯೆ ಹಾಗೂ ಚತುರ್ದಶಿ ಅಂಗವಾಗಿ ನವೆಂಬರ್ 8ರಂದು ಭಕ್ತಿಭಾವದಿಂದ ಜರುಗಿತು.
ಮಠದ ಒಡೆಯರಾದ ಹನುಮಂತಪ್ಪ ಧರ್ಮರ ಹಾಗೂ ಶರಣಯ್ಯ ಹಿರೇಮಠ ಅವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವಣ್ಣನವರ “ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ” ಎಂಬ ವಚನದ ಕುರಿತು ಚಿಂತನ-ಮಂಥನ ನಡೆಯಿತು.
ಈ ಸಂದರ್ಭದಲ್ಲಿ ತುಮ್ಮರಗುದ್ದಿಯ ರಾಜಶೇಖರ ಹಿರೇಮಠ ಮಾತನಾಡಿ, “ಅಯ್ಯಾ” ಎನ್ನುವುದು ಗೌರವ, ವಿನಯ ಮತ್ತು ಪ್ರೀತಿಯ ಸಂಕೇತವಾಗಿದೆ. ನಾವು ಇತರರನ್ನು ಗೌರವದಿಂದ ಮಾತನಾಡಿಸಿದಾಗ ನಮ್ಮ ಮನಸ್ಸಿಗೂ, ಎದುರಿನವರಿಗೂ ಸಂತೋಷ ಉಂಟಾಗುತ್ತದೆ. ಅದೇ ರೀತಿ ಅಹಂಕಾರದಿಂದ, ಕೀಳಾಗಿ “ಎಲವೋ” ಎಂದು ಸಂಬೋಧಿಸುವುದು ನೋವು ಹಾಗೂ ಸಂಘರ್ಷಕ್ಕೆ ಕಾರಣವಾಗುತ್ತದೆ. ಇಂತಹ ನಡವಳಿಕೆಯೇ ನರಕಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಬಸವಣ್ಣನವರ ವಚನದ ಆಶಯವನ್ನು ವಿವರಿಸಿದರು.
ಆರೋಗ್ಯ ಇಲಾಖೆಯ ರುದ್ರಯ್ಯ ಹಿರೇಮಠ ಮಾತನಾಡಿ, ಮನುಷ್ಯ ಆಡುವ ಮಾತು ಉತ್ತಮವಾಗಿರಬೇಕು. ನಮ್ಮ ಮಾತುಗಳಲ್ಲಿ ಪ್ರೀತಿ, ಗೌರವ ಮತ್ತು ಮಾನವೀಯತೆ ಇದ್ದಾಗಲೇ ಅದರಲ್ಲಿ ಕೈಲಾಸ ಹಾಗೂ ಸ್ವರ್ಗದ ಸುಖ ಅಡಗಿರುತ್ತದೆ ಎಂದು ತಿಳಿಸಿದರು.
ರಿಜ್ವಾನಸಾಬ ವಾಲಿಕಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿಯ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಲ್ಲಪ್ಪ ಪುರ್ತಗೇರಿ, ಮಲ್ಲಪ್ಪ ಮಂಡಾಲಿ, ಡಿ. ಮೌನೇಶ ಬಡಿಗೇರ, ವೀರಪ್ಪ ರಾವಣಕಿ, ಭೀಮಣ್ಣ ಚಿಕ್ಕಗೌಡ್ರ, ಬಸವರಾಜ ಮೇಲಸಕ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸಂಗೀತ ಬಳಗದ ಕಲಾವಿದರಾದ ಕಳಕಪ್ಪ ಹಡಪದ, ಯಮನೂರಪ್ಪ ಹಳ್ಳಿಕೇರಿ ಹಾಗೂ ಹನುಮೇಶ ಹಡಪದ ಅವರು ಸಂಗೀತ ಸೇವೆ ಸಲ್ಲಿಸಿದರು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

Total Views: 0
ಜಾಹೀರಾತು
Share This Article
Leave a Comment