ಬೆಳಕಿನ ಹಬ್ಬ ದೀಪಾವಳಿ: ಅಜ್ಞಾನವೆಂಬ ಕತ್ತಲೆಯನ್ನು ದೂರಮಾಡಿ ಜ್ಞಾನದ ಬೆಳಕು ಹರಿಸುವ ಹಬ್ಬ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
ಜಾಹೀರಾತು

Diwali, the Festival of Lights: A festival that dispels the darkness of ignorance and spreads the light of knowledge.

ಬೆಳಕಿನ ಹಬ್ಬ ದೀಪಾವಳಿ: ಅಜ್ಞಾನವೆಂಬ ಕತ್ತಲೆಯನ್ನು ದೂರಮಾಡಿ ಜ್ಞಾನದ ಬೆಳಕು ಹರಿಸುವ ಹಬ್ಬ

ಜಾಹೀರಾತು
ಜಾಹೀರಾತು

ಮುಸಲಾಪುರ (ಕನಕಗಿರಿ ತಾ): ಗ್ರಾಮ ಪಂಚಾಯತಿ ಕಾರ್ಯಾಲಯ ಮುಸಲಾಪುರ ವತಿಯಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಲಾಗಿದೆ.

ಈ ಕುರಿತು ಮಾತನಾಡಿದ ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿ ಡಾ. ಅಭಿಲಾಷ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗೇಶ ಹೆಚ್ ಅವರು, “ದೀಪಾವಳಿ ಎಂದರೆ ಕೇವಲ ಹಣತೆ ಬೆಳಗಿಸುವ ಹಬ್ಬವಲ್ಲ. ಇದು ಅಜ್ಞಾನವೆಂಬ ಕತ್ತಲೆಯನ್ನು ದೂರಮಾಡಿ, ಜ್ಞಾನದ ಬೆಳಕನ್ನು ಹರಿಸುವ ಹಬ್ಬ. ಪ್ರತಿಯೊಬ್ಬರ ಮನೆಯಲ್ಲೂ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ” ಎಂದು ಶುಭ ಕೋರಿದ್ದಾರೆ.

“ಗ್ರಾಮದ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ, ಸ್ವಚ್ಛತೆ ಹಾಗೂ ಪರಿಸರ ಸ್ನೇಹಿ ಹಬ್ಬ ಆಚರಿಸೋಣ. ಪಟಾಕಿ ಸಿಡಿಸುವಾಗ ಎಚ್ಚರಿಕೆ ವಹಿಸಿ, ಮಕ್ಕಳು ಹಾಗೂ ಹಿರಿಯರ ಬಗ್ಗೆ ಕಾಳಜಿ ವಹಿಸಿ” ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಗ್ರಾಮಸ್ಥರೆಲ್ಲರಿಗೂ ದೀಪಾವಳಿ, ಬಲಿಪಾಡ್ಯಮಿ ಹಾಗೂ ಭ್ರಾತೃ ದ್ವಿತೀಯಾ ಹಬ್ಬಗಳ ಶುಭಾಶಯಗಳನ್ನು ಪಂಚಾಯತಿ ವತಿಯಿಂದ ತಿಳಿಸಲಾಗಿದೆ.

ವರದಿ: ಶರಣಯ್ಯ ಹಿರೇಮಠ,

Total Views: 1
ಜಾಹೀರಾತು
Share This Article
Leave a Comment