

Freshers' Day and Kannada Rajyotsava at Sri Krishna Rukmini School of Law
ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ

ಬೆಂಗಳೂರು: ಶ್ರೀ ರೇವಣ ಸಿದ್ಧೇಶ್ವರ ಎಜುಕೇಶನ್ ಟ್ರಸ್ಟ್ (ರಿ.) ನ ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾ, ಚೊಕ್ಕನಹಳ್ಳಿ, ಚಿಕ್ಕಜಾಲ, ಬೆಂಗಳೂರು ಸಂಸ್ಥೆಯಲ್ಲಿ ಬಿ.ಎ.ಎಲ್.ಎಲ್.ಬಿ ಮತ್ತು ಎಲ್.ಎಲ್.ಬಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ “ಕನ್ನಡ ಕಲರವ” ಕನ್ನಡ ರಾಜ್ಯೋತ್ಸವ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ
ಡಾ. ಸುದರ್ಶನ್ ಕುಮಾರ್. ಡಿ, ಪ್ರಾಂಶುಪಾಲರು, ಎ.ಪಿ.ಎಸ್ ಸಂಜೆ ಪದವಿ ಕಲಾ ಮತ್ತು ವಾಣಿಜ್ಯ ಕಾಲೇಜು, ಸಮುದಾಯ ರಂಗ ತಂಡ ಕಲಾವಿದರು ಹಾಗೂ ಸಂಪನ್ಮೂಲ ವ್ಯಕ್ತಿ-ಶಿಕ್ಷಣ ಹಾಗೂ ಸಂಸ್ಥೃತಿ ಅಧ್ಯಯನ. ಇವರು ಭಾಷೆಯ ಮಹತ್ವ, ಅಧ್ಯಯನದಲ್ಲಿ ಭಾಷೆಯ ಪಾತ್ರ ಮತ್ತು ಸಂಸ್ಕೃತಿ-ಭಾಷೆಯ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಪ್ರೇರಣಾದಾಯಿಕ ಉಪನ್ಯಾಸ ನೀಡಿದರು.
ನಾರಾಯಣ್ ಜಿ., ವಕೀಲರು, ಬೆಂಗಳೂರು. ಇವರು ಕಾನೂನು ವೃತ್ತಿಯ ಮೌಲ್ಯಗಳು, ನಿಯಮಗಳು ಮತ್ತು ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಪ್ರೊಫೆಸರ್ ಬೋರೇಗೌಡ, ವಿ.ವಿ.ಪುರಂ ಕಾನೂನು ಕಾಲೇಜು, ಬೆಂಗಳೂರು. ಇವರು ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ನಡುವೆ ಕನ್ನಡ ಮಾಧ್ಯಮದ ಮಕ್ಕಳು ಅನುಭವಿಸುವ ಸವಾಲುಗಳು ಮತ್ತು ಸಮಸ್ಯೆಗಳ ಕುರಿತು ಮಾತನಾಡಿ, ಅವುಗಳನ್ನು ಧೈರ್ಯವಾಗಿ ಎದುರಿಸಲು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್. ಕೃಷ್ಣಪ್ಪ, ಮಾಜಿ ಸಚಿವರು, ಜನ ಸೇವಕರು ಹಾಗೂ ಅಧ್ಯಕ್ಷರು ಕೆ.ಪಿ.ಸಿ.ಸಿ.ಮುಖಂಡರು, ಶ್ರೀ ರೇವಣ ಸಿದ್ಧೇಶ್ವರ ಎಜುಕೇಶನ್ ಟ್ರಸ್ಟ್ ವಹಿಸಿದ್ದರು.
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಆರ್. ಕೃಷ್ಣಪ್ಪ ಹಾಗೂ ಇತರ ಅತಿಥಿ ಗಣ್ಯರು ಬಹುಮಾನ ವಿತರಿಸಿದರು.
ಶ್ರೀ ಕೇಶವ್ ಕೃಷ್ಣಪ್ಪ, ನಿರ್ದೇಶಕರು, ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾ.
ಡಾ. ಎಂ.ಆರ್. ಶಿವಕುಮಾರ್, ಪ್ರಾಂಶುಪಾಲರು, ರೇವಣ ಸಿದ್ಧೇಶ್ವರ ಇನ್ಸ್ಟಿಟ್ಯೂಟ್ ಆಫ್ ತಂತ್ರಜ್ಞಾನ.
ರಮ್ಯಾ ಎ.ಎಸ್., ಸಹಾಯಕ ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರು, ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾ. ಮುಂತಾದ ಗಣ್ಯರು ಉಪಸ್ಥಿತರಿದ್ದರು



