

Request for the installation of Dr. Vishnuvardhan's statue at Vishnuvardhan Circle
ವಿಷ್ಣುವರ್ಧನ್ ಸರ್ಕಲ್‌ನಲ್ಲಿ ಡಾ. ವಿಷ್ಣುವರ್ಧನ್ ಪುತ್ಥಳಿ ಸ್ಥಾಪನೆಗೆ ಮನವಿ

ಶಾಸಕರು ನೀಡಿದ್ದ ಭರವಸೆ ಈಡೇರಿಸಲು ಅಭಿಮಾನಿಗಳ ಆಗ್ರಹ
ಗಂಗಾವತಿ: ನಗರದ ವಿಷ್ಣುವರ್ಧನ್ ಸರ್ಕಲ್‌ನಲ್ಲಿ ಕನ್ನಡದ ಹೆಮ್ಮೆಯ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪುತ್ಥಳಿ ಸ್ಥಾಪಿಸುವುದಾಗಿ ಶಾಸಕರು ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸಬೇಕು ಎಂದು ವಿಷ್ಣುವರ್ಧನ್ ಅಭಿಮಾನಿಗಳು ಒತ್ತಾಯಿಸಿದರು.
ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಡಾ. ವಿಷ್ಣುವರ್ಧನ್ ಅವರ ಸ್ಮರಣೆಯನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ವಿಷ್ಣುವರ್ಧನ್ ಸರ್ಕಲ್‌ನಲ್ಲಿ ಪುತ್ಥಳಿ ಸ್ಥಾಪನೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು.
ಇದು ಕನ್ನಡದ ಹೆಮ್ಮೆಯ ಕಲಾವಿದನಿಗೆ ಸಲ್ಲಿಸುವ ಗೌರವವಾಗಲಿದೆ ಎಂದು ಅಭಿಮಾನಿಗಳು ಮನವಿ ಮಾಡಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜಾರೋಹಣ ನೆರವೇರಿಸಿ, ನೆಚ್ಚಿನ ನಟ ಡಾ. ವಿಷ್ಣುವರ್ಧನ್ ಅವರನ್ನು ಸ್ಮರಿಸಿದ ಅಭಿಮಾನಿಗಳು ಕನ್ನಡಾಭಿಮಾನ ಹಾಗೂ ಕಲಾವಿದರ ಮೇಲಿನ ಗೌರವದ ಸಂದೇಶ ಸಾರಿದರು.
ಕಾರ್ಯಕ್ರಮದಲ್ಲಿ ಅಭಿಮಾನಿಗಳಾದ ನಾಗರಾಜ ಮೇದಾರ, ರಂಗಪ್ಪ ನಾಯಕ, ಮೈಬುಬುಸಾಬ, ಶರೀಫ್, ಶಶಾಂಕ, ಹನುಮಂತಪ್ಪ ಹುಲಿಹೈದರ್, ನರಸಿಂಹ, ಎಸ್.ಎಸ್. ಪಾಷಾ, ವೆಂಕಟೇಶ್ ಜಾದವ್, ಪಾಂಡುರಂಗ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.



