ನ. 2ರಂದು ಕೊಪ್ಪಳದಲ್ಲಿ ಉದ್ಯೋಗಾವಕಾಶ: ವಾಕ್-ಇನ್ ಸಂದರ್ಶನ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
ಜಾಹೀರಾತು
Job Opportunities in Koppal on Nov 2: Walk-in Interview

ನ. 2ರಂದು ಕೊಪ್ಪಳದಲ್ಲಿ ಉದ್ಯೋಗಾವಕಾಶ: ವಾಕ್-ಇನ್ ಸಂದರ್ಶನ

ಜಾಹೀರಾತು

ಪಿಯುಸಿ ಅಥವಾ ಪದವೀಧರ ನಿರುದ್ಯೋಗಿ ಯುವಕ-ಯುವತಿಯರಿಗೆ ಅವಕಾಶ

ಕೊಪ್ಪಳ, ಅ. 29: ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ನವೆಂಬರ್ 2ರಂದು ಕೊಪ್ಪಳದಲ್ಲಿ ವಾಕ್-ಇನ್ ಸಂದರ್ಶನ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಕೊಪ್ಪಳ ಜಿಲ್ಲಾ ಆಡಳಿತ ಭವನದ ಮೊದಲನೇ ಮಹಡಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಸಂದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅರ್ಹತೆ ಮತ್ತು ವಯೋಮಿತಿ
ಪಿಯುಸಿ ಅಥವಾ ಯಾವುದೇ ಪದವಿ ಪೂರ್ಣಗೊಳಿಸಿದ, 18ರಿಂದ 35 ವರ್ಷದೊಳಗಿನ ಅರ್ಹ ನಿರುದ್ಯೋಗಿ ಯುವಕ-ಯುವತಿಯರು ಸಂದರ್ಶನದಲ್ಲಿ ಭಾಗವಹಿಸಬಹುದು.
ಅಗತ್ಯ ದಾಖಲೆಗಳು:
ದೃಢೀಕರಿಸಿದ ವಿದ್ಯಾರ್ಹತೆಯ ಎಲ್ಲ ಪ್ರಮಾಣಪತ್ರಗಳ ತಲಾ ಮೂರು ಪ್ರತಿಗಳು.
ಆಧಾರ್ ಕಾರ್ಡ್ ಪ್ರತಿ.
ಬಯೋಡೇಟಾ (ರೆಸ್ಯೂಮ್).
ಪಾಸ್‌ಪೋರ್ಟ್ ಅಳತೆಯ ಎರಡು ಭಾವಚಿತ್ರಗಳು.
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ಹಾಜರಾಗಿ ಉದ್ಯೋಗಾವಕಾಶದ ಪ್ರಯೋಜನ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ.
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

Total Views: 0
ಜಾಹೀರಾತು
Share This Article
Leave a Comment