ಜಾಹೀರಾತು

ಜಾಹೀರಾತು

ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ
Shri Huligemma Devi Temple Development Authority Announcement
ಕೊಪ್ಪಳ, ಅಕ್ಟೋಬರ್ 27, : ಕೊಪ್ಪಳ ತಾಲೂಕಿನ ಹುಲಿಗಿ ಕ್ಷೇತ್ರದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಪ್ರತಿ ಹುಣ್ಣಿಮೆಯಂದು ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇವರಿಗೆ ಸುರಕ್ಷಿತ ದರ್ಶನ ವ್ಯವಸ್ಥೆ ಕಲ್ಪಿಸುವುದು ಮಹತ್ವದ ವಿಷಯವಾಗಿದೆ.
ಕಳೆದ ಹಲವಾರು ವರ್ಷಗಳಿಂದ ಹುಣ್ಣಿಮೆ ದಿನದಂದು ಶ್ರೀ ಹುಲಿಗೆಮ್ಮ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಲಕ್ಷಾಂತರ ಭಕ್ತರು ದರ್ಶನ ಪಡೆಯುವ ಸಂದರ್ಭದಲ್ಲಿ ಸುರಕ್ಷತಾ ಕ್ರಮ ಅನುಸರಿಸುವಂತೆ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದು, ಅದರಂತೆ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ.
ಹುಣ್ಣಿಮೆ ದಿನವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಭಕ್ತರು ಆವರಣದ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆಯಬಹುದು. ಹುಣ್ಣಿಮೆ ದಿನದ ಕ್ಯೂ ಲೈನ್ ವ್ಯವಸ್ಥೆಗೆ ಶ್ರೀ ರಾಜ ಮಾತಂಗಿ ದೇವಿಯ ಅರ್ಚಕರೂ ಹಲವಾರು ವರ್ಷಗಳಿಂದ ಸಹಕರಿಸುತ್ತಾ ಬಂದಿದ್ದಾರೆ.
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸನ್ನಿಧಿ, ಶ್ರೀ ಪರಶುರಾಮ ದೇವರ ಸನ್ನಿಧಿ, ಶ್ರೀ ರಾಜ ಮಾತಂಗಿ ದೇವಿ ಹಾಗೂ ಶ್ರೀ ತಾಯಿ ಮುದ್ದಮ್ಮ ಕಟ್ಟೆ ಸನ್ನಿಧಿಗಳಲ್ಲಿ ಯಾವುದೇ ಜಾತಿ, ಜನಾಂಗ, ಧರ್ಮ, ಲಿಂಗ ಬೇಧವಿಲ್ಲದೆ ಎಲ್ಲರಿಗೂ ದರ್ಶನಕ್ಕೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ ಎಂದು ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Total Views:
0
ಜಾಹೀರಾತು