Breaking News

ಕಿಷ್ಕಿಂದ ಕಲ್ಯಾಣ ಗಜಾನೋತ್ಸವ ಸಮಿತಿ ನೇತ್ರತ್ವದಲ್ಲಿಬುಧವಾರದಂದು ಗಣೇಶ ವಿಸರ್ಜನೆ,

Kishkinda Kalyana Gajanotsava Committee presided over Ganesha discharge on Wednesday,

ಜಾಹೀರಾತು

ಗಂಗಾವತಿ,3, ನಗರದಲ್ಲಿ ಪ್ರಪ್ರಥಮ ಬಾರಿಗೆ ಗಾಂಧಿ ವೃತ್ತದ ಬಳಿಯಲ್ಲಿ ಕಿಸ್ಕಿಂದ ಕಲ್ಯಾಣೋತ್ಸವ ಸಮಿತಿ ನೇತೃತ್ವದಲ್ಲಿ ಸ್ಥಾಪಿಸಲಾದ ತಿರುಪತಿ ವೆಂಕಟೇಶ್ವರ ಸ್ವರೂಪದಲ್ಲಿ ಗಣೇಶ ಮೂರ್ತಿಯನ್ನು ಸ್ಥಾಪಿಸಲಾಗಿದ್ದು ಬುಧವಾರ 16ನೇ ಶುಭದಿನದಂದು ಮಹಾ ಗಣಪತಿಯ ವಿಸರ್ಜನೆಯನ್ನು ನಡೆಸಲಾಗುವುದೆಂದು ಸಮಿತಿಯ ಸಂಚಾಲಕ ರಮೇಶ್ ಚೌಡಕಿ, ನಾಗರಾಜ್ ಚಳಗೇರಿ, ದಳಪತಿ ದುರ್ಗಪ್ಪ ಪಂಪಣ್ಣ ನಾಯಕ್ ವಿರುಪಾಕ್ಷಗೌಡ ಇತರರು ಮಂಗಳವಾರದಂದು ಸುದ್ದಿಗೋಷ್ಠಿ ನಡೆಸಿ ಹೇಳಿದರು ಗಣೇಶ ಮೂರ್ತಿ ಸ್ಥಾಪಿತಗೊಂಡ ಆವರಣದಲ್ಲಿ ಮಾತನಾಡಿ ಸಂಜೆ 4:30 ಮಹಿಳೆಯರಿಗಾಗಿ ಗಾಂಧಿ ವೃತ್ತದ ಬಳಿ ಡಿಜೆ ಸಾಂಗ್ ಮೂಲಕ ರಾತ್ರಿ 7:00 ಅವರಿಗೆ ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಬಳಿಕ ಮಹಾಗಣಪತಿ ವಿಸರ್ಜನೆಗೆ ನಡೆಸಲಾಗುವುದು, ಮಹಿಳೆಯರನ್ನು ಹೊರತುಪಡಿಸಿ ಉಳಿದಂತೆ 15 ಸಾವಿರಕ್ಕೂ ಅಧಿಕ ಜನರು ರಾಜ್ಯದ ನಾನಾ ಭಾಗಗಳಿಂದ ದಾವಣಗೆರೆ ಸಿಂಧನೂರು ಕೊಪ್ಪಳ ಬಳ್ಳಾರಿ ಕುಷ್ಟಗಿ ಸೇರಿದಂತೆ ಇತರೆ ಭಾಗಗಳಿಂದ ಆಗಮಿಸುವುರು, ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಗಾಗಿ ಈಗಾಗಲೇ 25,000 ಅಧಿಕ ಲಡ್ಡು ಉಂಡೆಗಳನ್ನು ತಯಾರಿಸಲಾಗಿತ್ತು ಭಕ್ತಾದಿಗಳಿಗೆ ಪ್ರಸಾದ ನೀಡಲಾಗುವುದು, ಎಂದು ತಿಳಿಸಿದ ಅವರು ಮಾಧ್ಯಮದವರು ತುಂಬು ಸಹಕಾರ ನೀಡುವಂತೆ ಮನವಿ ಮಾಡಿದರು, ಈ ಸಂದರ್ಭದಲ್ಲಿ ಪತ್ರಕರ್ತರು ಅತ್ಯಂತ ಜನನಿ ಪ್ರದೇಶವಾದ ಗಾಂಧಿ ವೃತದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಾಗೂ ಸಂಚಾರಿ ವ್ಯವಸ್ಥೆಗೆ ದಕ್ಕಿಯಾಗುತ್ತದೆ ಈ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕೆಂದು ಸಲಹೆ ನೀಡಿದರು, ಅದಕ್ಕೆ ಉತ್ತರಿಸಿದವರು ಈಗಾಗಲೇ ಪ್ರತಿಷ್ಠಾಪನೆ ಮಾಡಿದ್ದು ದ್ವಿತೀಯ ವರ್ಷದಲ್ಲಿ ವಿಘ್ನವಾಗಬಾರದು ನಂತರದಲ್ಲಿ ತಾವು ನೀಡಿದ ಸಲಹೆಯನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಹೇಳಿದರು,

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.