
Basava Philosophy: A Philosophy for the World – International Seminar
ಬಸವ ತತ್ವ ಜಗದ ತತ್ವ – ಅಂತರಾಷ್ಟ್ರೀಯ ವಿಚಾರ ಸಂಕಿರಣ

ಬೆಂಗಳೂರು:ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಮತ್ತು ಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಗಳೂರು ಇವರ ಸಂಯುಕ್ತ ಸಂಘಟನೆಯಲ್ಲಿ
ಬಸವ ತತ್ವ ಜಗದ ತತ್ವ – ಎಂಬ ವಿಷಯದ ಮೇಲೆ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ದಿನಾಂಕ 24 ಅಕ್ಟೋಬರ್ ಬೆಳಿಗ್ಗೆ 9 ಗಂಟೆಗೆ ಬಿ ಕೊಂಡಜ್ಜಿ ಸಭಾಗೃಹ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪ್ಯಾಲೇಸ್ ರಸ್ತೆ ಬೆಂಗಳೂರನಲ್ಲಿ ಏರ್ಪಡಿಸಲಾಗಿದೆ.
ಈ ವಿಚಾರ ಸಂಕಿರಣದಲ್ಲಿ
ನಾಡಿನ ಹೆಸರಾಂತ ಸಂಸ್ಕೃತಿ ಚಿಂತಕರು ಬಸವ ತತ್ವ ಅಧ್ಯಯನಶೀಲರು ಸಾಹಿತಿಗಳು ಸಂಶೋಧಕರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವವರು .
ಕರ್ನಾಟಕ ಮಹಾರಾಷ್ಟ್ರ ಗೋವಾ ಆಂಧ್ರ ಪ್ರದೇಶ ತೆಲಂಗಾಣ ಮತ್ತು ಇತರೆ ರಾಜ್ಯಗಳಿಂದ ಸುಮಾರು 250 ಕ್ಕೂ ಹೆಚ್ಚು ಜನ ಪ್ರಾಧ್ಯಾಪಕರು ಸಾಹಿತಿಗಳು
ಪಾಲ್ಗೊಳ್ಳುತ್ತಾರೆ.
ಬಸವೋತ್ತರ ಕಾಲದ ವಚನ ಚಳುವಳಿಯ ಮುಖಾಮುಖಿ ಚರ್ಚೆ ಮತ್ತು ಇಂದಿನ ದಿನಗಳಲ್ಲಿ ಬಸವ ತಿಳುವಳಿಕೆ ಮತ್ತು ವಚನ ಸಾಹಿತ್ಯದ ಪ್ರಸ್ತುತತೆ ವಚನ ಸಾಹಿತ್ಯದ ಪ್ರಕ್ಷಿಪ್ತತೆ ಪರಿಷ್ಕರಣೆ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಕರ್ನಾಟಕ ರಾಜ್ಯ ಘಟಕದ ಉದ್ಘಾಟನೆಯನ್ನು ಮಾಡಲಾಗುವುದು. ಸಮಕಳೆ ಎಂಬ ಅಂತರಾಷ್ಟ್ರೀಯ ವಿಚಾರ ಸಂಕಿರಣದ ಸ್ಮರಣ ಸಂಚಿಕೆಯನ್ನು ಮತ್ತು ಶರಣ ಸಾಹಿತಿ ಡಾ ಶಶಿಕಾಂತ ಪಟ್ಟಣ ಅವರು ರಚಿಸಿದ ಬಸವೋತ್ತರ ಕಾಲದ ಶರಣರು ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಲಾಗುವುದು.
ಬಸವ ತತ್ವ ಚಿಂತನೆಗಳನ್ನು ವೈಚಾರಿಕ ನೆಲೆಯಲ್ಲಿ ಪ್ರಸಾರ ಮಾಡುವ ಕೈಂಕರ್ಯಕ್ಕೆ ಯುವ ಜನತೆಯನ್ನು ಮಹಿಳೆಯರನ್ನು ಸಿದ್ಧ ಪಡಿಸುವ ಅರಿವಿನ ಆಂದೋಲನವೇ ಈ ಜಾಗತಿಕ ಮಟ್ಟದ ವಿಚಾರ ಸಂಕಿರಣದ ಉದ್ದೇಶವಾಗಿದೆಯೆಂದು
ವಿಚಾರ ಸಂಕಿರಣದ ಸಂಯೋಜಕರಾದ ಡಾ ಶಶಿಕಾಂತ ಪಟ್ಟಣ ಅಧ್ಯಕ್ಷರು
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಮತ್ತು ಶರಣ ಓಂಕಾರ ಚೊಂಡಿ ಅಧ್ಯಕ್ಷರು ಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
+91 98453 08707
ಸಂಪರ್ಕ ಶ್ರೀ ಕೆ ಬಿ ಮಹದೇವಪ್ಪ




