ಆಮೆಗತಿಯಲ್ಲಿ ಕಾಮಗಾರಿ, ಡಿವೈಡರ್–ರೋಡ್‌ ಬ್ರೇಕರ್‌ಗಳ ನಿರ್ಮಾಣದಲ್ಲೂ ಅಸಮರ್ಪಕತೆ ಆರೋಪ; ಪಾರದರ್ಶಕತೆಗಾಗಿ ನಾಮಫಲಕ ಅಳವಡಿಸಲು ಮ್ಯಾಗಳಮನಿ ಆಗ್ರಹ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

ರಸ್ತೆ ಕಾಮಗಾರಿ ಮಾಹಿತಿ ಫಲಕ ಅಳವಡಿಸಲು ಮ್ಯಾಗಳಮನಿ ಒತ್ತಾಯ

Work progressing at a snail's pace; allegations of substandard construction regarding dividers and road breakers; Magalamani demands the installation of a signboard to ensure transparency.

ಜುಲೈನಗರ–ನೀಲಕಂಠೇಶ್ವರ ವೃತ್ತ ರಸ್ತೆ ಕಾಮಗಾರಿ: ಮಾಹಿತಿ ಫಲಕವೇ ಇಲ್ಲ!


ಆಮೆಗತಿಯಲ್ಲಿ ಕಾಮಗಾರಿ, ಡಿವೈಡರ್–ರೋಡ್‌ ಬ್ರೇಕರ್‌ಗಳ ನಿರ್ಮಾಣದಲ್ಲೂ ಅಸಮರ್ಪಕತೆ ಆರೋಪ; ಪಾರದರ್ಶಕತೆಗಾಗಿ ನಾಮಫಲಕ ಅಳವಡಿಸಲು ಮ್ಯಾಗಳಮನಿ ಆಗ್ರಹ

ಜಾಹೀರಾತು

ಕಾಮಗಾರಿ ನಡೆಯುತ್ತಿದೆ, ಮಾಹಿತಿ ಫಲಕ ಮಾತ್ರ ಮಾಯ!

ರಸ್ತೆ ಕಾಮಗಾರಿಯ ವೆಚ್ಚ–ವಿವರ ಬಹಿರಂಗಪಡಿಸಲು ಮ್ಯಾಗಳಮನಿ ಒತ್ತಾಯ

ಗಂಗಾವತಿ, ಅ.15: ನಗರದ ಜುಲೈನಗರದಿಂದ ನೀಲಕಂಠೇಶ್ವರ ವೃತ್ತದವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಒಳಗೊಂಡ ನಾಮಫಲಕವನ್ನು ಕೂಡಲೇ ಅಳವಡಿಸಬೇಕು ಎಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಒತ್ತಾಯಿಸಿದ್ದಾರೆ.

ರಸ್ತೆ ಕಾಮಗಾರಿ ಆರಂಭಿಸುವ ಮುನ್ನವೇ ಕಾಮಗಾರಿ ಪ್ರಾರಂಭದ ದಿನಾಂಕ, ಸಂಬಂಧಿಸಿದ ಇಲಾಖೆ, ಯೋಜನೆಯ ಹೆಸರು, ಅಂದಾಜು ವೆಚ್ಚ, ಕಾಮಗಾರಿಯ ವಿಸ್ತೀರ್ಣ, ಸಂಬಂಧಿಸಿದ ಅಭಿಯಂತರರ ಹೆಸರು ಹಾಗೂ ಗುತ್ತಿಗೆದಾರರ ವಿವರ ಸೇರಿದಂತೆ ಅಗತ್ಯ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವ ನಾಮಫಲಕ ಅಳವಡಿಸಬೇಕಿತ್ತು. ಆದರೆ, ಇದುವರೆಗೆ ಮಾಹಿತಿ ಫಲಕ ಅಳವಡಿಸದಿರುವುದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಕಾಮಗಾರಿ ಒಂದೇ ದಿಕ್ಕಿನಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ. ಅಲ್ಲದೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಮ್ಯಾಗಳಮನಿ ಆರೋಪಿಸಿದ್ದಾರೆ.

ರಸ್ತೆಯ ಡಿವೈಡರ್‌ ಅನ್ನು ಒಂದು ಕಡೆ ಕಡಿಮೆ ಅಗಲದಲ್ಲಿ ಹಾಗೂ ಮತ್ತೊಂದು ಕಡೆ ಹೆಚ್ಚಿನ ಅಗಲದಲ್ಲಿ ನಿರ್ಮಿಸಲಾಗುತ್ತಿದೆ. ಅದೇ ರೀತಿ, ರೋಡ್‌ ಬ್ರೇಕರ್‌ಗಳನ್ನು ಸಹ ಸಮರ್ಪಕ ಮಾನದಂಡವಿಲ್ಲದೆ ಅಳವಡಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಕಾಮಗಾರಿಯ ಗುಣಮಟ್ಟ ಮತ್ತು ಪಾರದರ್ಶಕತೆ ಖಚಿತಪಡಿಸಲು ಸಾರ್ವಜನಿಕರ ಮಾಹಿತಿಗಾಗಿ ಕೂಡಲೇ ನಾಮಫಲಕ ಅಳವಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದೇ ವೇಳೆ, ರಸ್ತೆ ಕಾಮಗಾರಿಯೊಂದಿಗೆ ನಡೆಯುತ್ತಿರುವ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿಗೂ ಸಂಬಂಧಿಸಿದಂತೆ ಪ್ರತ್ಯೇಕ ಮಾಹಿತಿ ಫಲಕ ಅಳವಡಿಸಬೇಕು ಎಂದು ಮ್ಯಾಗಳಮನಿ ಒತ್ತಾಯಿಸಿದ್ದಾರೆ.

ಕಾಮಗಾರಿಗಳ ಕುರಿತು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡದೆ ಮುಂದುವರಿಸಿದಲ್ಲಿ, ರಸ್ತೆ ಹಾಗೂ ವಿದ್ಯುತ್ ಕಾಮಗಾರಿಗಳ ಸಂಪೂರ್ಣ ವಿವರಗಳ ಕುರಿತು ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಬಸವರಾಜ ಮ್ಯಾಗಳಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
ಜಾಹೀರಾತು
Share This Article